ಬೆಂಗಳೂರು: ಗೋವಾದ ವಿಯಟ್ನಾಮ್ ನಲ್ಲಿ ನಡೆದ ಜೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಾಲೆ ಸಿಂಚನ ಕಮಾಲ್ ಮಾಡಿ ಕರ್ನಾಟಕ, ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
JMI ನವರು 2025ರ ಸಾಲಿನ 9ನೇ ಸಂಚಿಕೆಯ ಮಾಡೆಲ್ ಸ್ಪರ್ಧೆ ಆಯೋಜನೆ ಮಾಡಿದ್ದರು. ಅಲ್ಲಿ ಕರುನಾಡಿನ ಕುವರಿ ಸಿಂಚನಾ ಎಲ್ ಅವರು ಕರ್ನಾಟಕ ದಿಂದ ಸ್ಫರ್ಧೆ ಮಾಡಿ ನಾಡಿಗೆ ಕೀರ್ಥಿ ತಂದಿದ್ದಾರೆ. 10 ರಿಂದ 12 ವರ್ಷದ ಚಿಕ್ಕ ಹುಡುಗಿ 8ನೇ ತರಗತಿಯಲ್ಲಿ ಓದುತ್ತಿದ್ದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದು ಅತಿಶಯೋಕ್ತಿಯಲ್ಲ. ಕವಿತಾ ಹಾಗೂ ಲೋಹಿತ್ ದಂಪತಿಯ ಮಗಳಾಗಿ ಕರ್ನಾಟಕಕ್ಕೆ ಹೆಮ್ಮೆ ತಿಂದಿರುವುದು ಸಂತಸದ ಸಂಗತಿಯಾಗಿದೆ.
ಜೆಎಂಐ ನಲ್ಲಿ ಸ್ಪರ್ಧಡಯಲ್ಲಿ ದ್ವಿತೀಯ ಸ್ಥಾನದ ಕಿರೀಟ ಮುಡಿಗೇರಿಕೊಂಡಿರುವ ಯುವ ತರುಣಿ ಸಿಂಚನಾ ಮಾತನಾಡಿ, 22 ದೇಶಗಳಿಂದ ವಿವಿಧ ಸ್ಪರ್ಧೆಗೆ ಸ್ಪರ್ಧಾಳುಗಳು ಬಂದಿದ್ದರು, ಮಾಡಲಿಂಗ್ ಮಾಡುವುದು ಕಷ್ಟ ಎನ್ನುವ ಹಾಗೆ ಬಾಸವಾಗಿತ್ತು, ನನ್ನ ಶ್ರಮದ ಪ್ರತಿಫಲವಾಗಿ ಎಲ್ಲಿಯೂ ಎದೆ ಗುಂಜದೆ ಧೈರ್ಯವಾಗಿ ಭಾಗವಹಿಸಿದ್ದೇ 2ನೇ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ನಾನು 8ನೇ ತರಗತಿಯಲ್ಲಿ ಓದುತ್ತಿದ್ದು, ಶಿಕ್ಷಣದ ಜೊತೆಗೆ ಇತರ ಚಟುವಟಿಕೆಯಲ್ಲಿ ಭಾಗವಹಿಸಿದಾಗ ನಾವು ಏನು ಬೇಕಾದರೂ ಮಾಡಲು ಸಾಧ್ಯ ಎಂದರು.
ಸಿಂಚನಾ ಸಾಧನೆಗೆ ವಾಸು ಅವರು ಸಹಕಾರ ನೀಡಿದ್ದು, ಅವರು ಮಾತನಾಡಿ, ಸಿಂಚನಾ ನೋಡಲು ಚಿಕ್ಕವರಾಗಿ ಕಾಣುತ್ತಿದ್ದರೂ ಸಹಾ ಅವರ ಪ್ರತಿಭೆ ಮಾತ್ರ ಅಪ್ರತಿಮ, ಅವರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ, ಮುಂದಿನ ಅವರ ಕೆಲಸ ಕಾರ್ಯಗಳಿಗೂ ಸದಾ ಬೆನ್ನೆಲುಬಾಗಿ ನಿಂತಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಸಿಂಚನ ಅವರ ತಾಯಿ ಕವಿತಾ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತವಾದಂತಹ ಪ್ರತಿಭೆ ಬೆಳಸಿ ಕೊಳ್ಳುತ್ತಿರುವುದು ನಮ್ಮ ಕುಟುಂಬಕ್ಕೆ ಅಧಿಕ ಸಂತೋಷಕರವಾಗಿದ್ದು ಶಿಕ್ಷಣ ಹಾಗೂ ಶಿಕ್ಷಣದ ಚಟುವಟಿಕೆಗಳಲ್ಲಿ ಸಿಂಚನ ತೊಡೆಯಿಕೊಂಡು ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಮಟ್ಟದ ಸಾಧನೆ ಮಾಡದಿದ್ದಾರೆ ನಮಗೆ ತಾಯಿಯಾಗಿ ಹೆಮ್ಮೆ ಎನ್ನಿಸುತ್ತದೆ. ಈಗ ಜೆಎಂಐ ನಲ್ಲಿ ಎರಡನೇ ಬಹುಮಾನ ಹಾಗೂ ಕಿರೀಟವನ್ನು ಪಡೆದುಕೊಂಡಿರುವುದು ಸಂತಸದಾಯಕವಾಗಿದ್ದು ಮುಂದೆ ಯುನಿವರ್ಸಲ್ ಸ್ಪರ್ಧೆ ಇದು ತದನಂತರ ವರ್ಲ್ಡ್ ಮಿಸ್ ಸ್ಪರ್ಧೆ ನಡೆಯಲಿದೆ ಅವೆಲ್ಲದಕ್ಕು ಸಹ ತಯಾರಿ ಮಾಡಿಕೊಳ್ಳಬೇಕಾಗಿದೆ ಅಲ್ಲಿಯೂ ಸಹ ಜಯಗಳಿಸುತ್ತಾಳೆ ಎಂಬ ನಂಬಿಕೆ ಇದೆ.
ಇನ್ನು ಸಿಂಚನ ಅವರ ಮಾಡಲಿಂಗ್ ಸ್ಪರ್ಧೆಗೆ ತಲುಪಬೇಕಾದರೆ ಅವರ ಹಿಂದೆ ರವಿ ರಾಜು ಸ್ವಾಮಿ ಸೇರಿದಂತೆ ಅನೇಕ ಜನರು ಸಕಲ ಸಹಕಾರವನ್ನು ನೀಡಿ ಬೆನ್ನು ಕಟ್ಟುತ್ತಿರುವುದು ಮುಂದಿನ ಗುರಿಗಳು ಹಾಗೂ ಸಾಧನೆಗಳ ಮೀರಿಸುವ ಕೆಲಸವನ್ನು ಮಾಡಲು ಸ್ಪೂರ್ತಿದಾಯಕವಾಗಿದೆ ಎಂದರು.