ಬೆಂಗಳೂರು: ಕರ್ನಾಟಕ ರಾಜ್ಯ ಪಿಕಲ್ಬಾಲ್ ಅಸೋಸಿಯೇಷನ್ (KSPA) 9ನೇ ರಾಜ್ಯ ಮಟ್ಟದ ಪಿಕಲ್ಬಾಲ್ ಚಾಂಪಿಯನ್ಶಿಪ್ ನಲ್ಲಿ 16 ಜನ ಆಟಗಾರರು ಬಂಗಾರಕ್ಕೆ ಮುತ್ತುಕಿದರೆ,17 ಮಂದಿ ಬೆಳ್ಳಿ,17 ಮಂದಿ ಕಂಚುಗೆ ತೃಪ್ತಿಪಟ್ಟಿದ್ದಾರೆ ಎಂದು ಪಿಕಲ್ ಬಾಲ್ ಸಂಘದ ಸಂಸ್ಥಾಪಕರು ಹಾಗು ಸಾಮಾನ್ಯ ಕಾರ್ಯದರ್ಶಿ ರಜತ್ ಕಂಕರ್ ಎಂಆರ್ ತಿಳಿಸಿದರು.
ಬೆಂಗಳೂರಿನ ಈಸಿ ಕೋರ್ಟ್ ನಲ್ಲಿ 3 ದಿನಗಳ ಕಾಲ ಯಶಸ್ವಿಯಾಗಿ ನಡೆದ ಚಾಂಪಿಯನ್ಶಿಪ್ ನಲ್ಲಿ ಪುರುಷ ಹಾಗು ಮಹಿಳಾ ತಂಡಗಳು ಗೆದ್ದು ಬೀಗಿದ್ದಾರೆ. ಸಮಾರೋಪದಲ್ಲಿ ಕರ್ನಾಟಕ ಪಿಕಲ್ ಬಾಲ್ ಸಂಘದ ಸಂಸ್ಥಾಪಕರು ಹಾಗು ಸಾಮಾನ್ಯ ಕಾರ್ಯದರ್ಶಿ ರಜತ್ ಕಂಕರ್ ಎಂಆರ್ ಮಾತನಾಡಿ, ಪ್ರತಿ ವರ್ಷವೂ, ಕರ್ನಾಟಕದ ಪಿಕಲ್ ಬಾಲ್ ಸಂಸ್ಥೆ ಹೊಸ ಎತ್ತರಗಳನ್ನು ತಲುಪುತ್ತಿದೆ, ಮತ್ತು ಈ ಚಾಂಪಿಯನ್ಶಿಪ್ ಕ್ರೀಡೆಯ ಪ್ರತಿಭೆ, ಉತ್ಸಾಹ ಮತ್ತು ಸಮುದಾಯಾತ್ಮಕತೆಯ ಅಂಶಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಾರ್ಥಿಗಳು, ಅತಿಥಿಗಳು, ಸಹಯೋಗಿಗಳು, ನಿರ್ಣಾಯಕರ ಮತ್ತು ಸ್ವಯಂಸೇವಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಇದೇ ರೀತಿ ಪಿಕಲ್ ಬಾಲ್ ಕ್ರೀಡೆಯನ್ನು ಮುಂದಿನ ದಿನಗಳಲ್ಲಿ ಉತ್ತುಂಗಕ್ಕೆ ಕೊಂಡೊಯ್ಯಲು ಸರ್ವ ಸನ್ನದವಾಗಿದ್ದೇವೆ. ಕ್ರೀಡಾ ಉತ್ಸವದ ಅಂತ್ಯದಲ್ಲಿ, ಕ್ರೀಡಾಪಟುಗಳ ಸಾಧನೆ ಮಾತ್ರವಲ್ಲ, ಅವರ ಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವವೇ ಮುಖ್ಯವಾದದ್ದು ಎಂದರು.
ಮುಖ್ಯ ಸ್ಪರ್ಧೆಗಳು ಮತ್ತು ವಿಜೇತರು:
ಇಂಟರ್ ಮೀಡಿಯೇಟ್ ಪುರುಷರ ಸಿಂಗಲ್ ನಲ್ಲಿ ಅರ್ಜುನ್ ಪ್ರೇಮ್ ಕುಮಾರ್, ಬಂಗಾರ ಪಡೆದರೆ, ಸುಪ್ರೀತ್ ಚಾದಗ ಬೆಳ್ಳೆ,ಅಮಿತ್ ರೋತ್ ಕಂಚಿಗೆ ತೃಪ್ತಿ.
ಓಪನ್ ಪುರುಷರ ಸಿಂಗಲ್ ನಲ್ಲಿ ಬಂಗಾರ ಸುಜಿತ್,ಬೆಳ್ಳಿಗೆ ಸಚ್ಚಿದಾನಂದ,ಕಂಚು ಅಹಿಲ್ ಅಯಾಜ್ ಮತ್ತು ಆಕಾಶ್ ವಾಗ್ ಗೆ ಧಕ್ಕಿದೆ.
35 ಕ್ಕಿಂತ ಹೆಚ್ಚು ವಯೋಮಾನದ ಪುರುಷರ ಸಿಂಗಲ್ಸ್ ನಲ್ಲಿ ಆಕಾಶ್ ವಾಗ್ ರಿಗೆ ಬಂಗಾರ,ಸುದೀಂದ್ರ ಸಿಂದ್ಹೆ ಗೆ ಬೆಳ್ಳಿ,ಮಾಣಿಕ್ ಬಹ್ರಿಗೆ ಕಂಚು ಸಿಕ್ಕಿದೆ.
ಓಪನ್ ಮಹಿಳಾ ಸಿಂಗಲ್ಸ್ ನಲ್ಲಿ ಹರಿಪ್ರಿಯಾ ಎಂಕೆಗೆ ಬಂಗಾರ, ಮಜುಶ್ರೀ ಜೆಹೆಚ್ ಬೆಳ್ಳಿ,ಚೈತ್ರ ನವೀನ್ ಕಂಚಿಗೆ ತೃಪ್ತಿ.
ಇಂಟರ್ ಮೀಡಿಯೇಟ್ ಮಹಿಳಾ ಸಿಂಗಲ್ ನಲ್ಲಿ ವಿಧ್ಯಾ ಲಕ್ಷ್ಮಿ ಗೆ ಬಂಗಾರ, ಮಂಜುಶ್ರಿಗೆ ಬೆಳ್ಳಿ,ಸಿಯಾ ಮುಲ್ಗೆ ಕಂಚು.
ಇಂಟರ್ ಮೀಡಿಯೇಟ್ ಪುರುಷರ ಡಬಲ್ಸ್ ನಲ್ಲಿ ಬಂಗಾರಕ್ಕೆ ವಿಜಯ್ ಕನ್ನಿಗಂಟಿ ಮತ್ತು ಸುದೀಂದ್ರ ಸಿಂದ್ಹೆ ,ಬೆಳ್ಳಿಗೆ ಮದನ್ ಜೆ ಮತ್ತು ವಿಶಾದ್ ಗುಪ್ತ,ಕಂಚಿಗೆ ಸಾಯಿ ಕಿರಣ್ ಮತ್ತು ಮಯಾಂಕ್ ಸಿಂಗ್.
ಇಂಟರ್ ಮೀಡಿಯೇಟ್ ಮಿಕ್ಸ್ ಡಬಲ್ಸ್ ನಲ್ಲಿ ಆಂಡ್ರೀಯ ದಾಸ್ ಮತ್ತು ಮದನ್ ಬಂಗಾರ ಪಡೆದರು, ಮಯಾಂಕ್ ಸಿಂಗ್ ಮತ್ತು ವಿದುಲ ಅಮರ್ ಬೆಳ್ಳಿ,ವಿಧ್ಯಾಲಕ್ಷ್ಮಿ ಮತ್ತು ಸಂದೇಶ್ ಚೌಟಾ ಕಂಚಿಗೆ ತೃಪ್ತಿ.
ಓಪನ್ ಪುರುಷರ ಡಬಲ್ಸ್ ನಲ್ಲಿ ವಿಜಯ್ ಕನ್ನಿಗಂಟಿ ಮತ್ತು ಮಯಾಂಕ್ ಸಿಂಗ್ ಬಂಗಾರ ಪಡೆದರೆ, ಆಕಾಶ್ ವಾಗ್ ಮತ್ತು ರಾಘವ್ ಶಿಂದ್ಹೆ ಬೆಳ್ಳಿ,ಸಾಯಿ ಕಿರಣ್ ಮತ್ತು ಶ್ರೀರಾಂ ಶ್ರೀಧರನ್ ಕಂಚಿಗೆ ತೃಪ್ತಿ.
ಓಪನ್ ಮಿಕ್ಸ್ ಡಬಲ್ಸ್ ನಲ್ಲಿ ಆಕಾಶ್ ವಾಗ್ ಮತ್ತು ಪ್ರಗತಿ ನಟರಾಜ್ ಬಂಗಾರಕ್ಕೆ, ಚೈತ್ರ ನವೀನ್ ಮತ್ತು ನವೀನ್ ಬೆಳ್ಳಿ, ಆಂಡ್ರೀವ್ ದಾಸ್ ಮತ್ತು ಮಧನ್ ಕಂಚಿಗೆ ತೃಪ್ತಿ.
35 ಕ್ಕಿಂತ ಹೆಚ್ಚು ಡಬಲ್ಸ್ ನಲ್ಲಿ ಸುಧೀದ್ರ ಸಿಂದ್ಹೆ ಬಂಗಾರ ಮತ್ತು ಸಂದೇಶ್ ಚೌಟಗೆ ಬಂಗಾರ, ಮಯಾಂಕ ಸಿಂಗ್ ಮತ್ತು ವಿಜಯ್ ಕನ್ನಗಂಟೆಗೆ ಬೆಳ್ಳಿ, ಸತ್ಯ ನಾರಾಯಣ ಮತ್ತು ವಿಶಾಲ್ ಚೌದರಿಗೆ ಕಂಚು.
19 ವರ್ಷ ಒಳಗಿನ ಹುಡುಗರ ಸಿಂಗಲ್ಸ್ ಅಹಿಲ್ ಅಯಾಜ್ ಬಂಗಾರ, ಅಯಾನ್ ಫರೀದ್ ಬೆಳ್ಳಿ,ರೋವನ್ ಮಧುಕರ್ ಕಂಚು.
19 ವರ್ಷ ಒಳಗಿನ ಹುಡುಗರ ಸಿಂಗಲ್ಸ್ ನಲ್ಲಿ ಬಂಗಾರಕ್ಕೆ ಅಹಿಲ್ ಅಯಾಜ್ ಮತ್ತು ಅನಿಲ್ ಕುಮಾರ್, ಅಯಾನ್ ಫರೀದ್ ಮತ್ತು ರೋವನ್ ಮಧುಕರ್ ಬೆಳ್ಳಿ, ಅನ್ ಹದ್ ಅಜ್ವಾನಿ ಮತ್ತು ತರ್ರಿನ್ ಮಿತ್ರಗೆ ಕಂಚು.
35 ಕ್ಕಿಂತ ಹೆಚ್ಚು ಮಿಕ್ಸ್ ಡ್ ಡಬಲ್ಸ್ ನಲ್ಲಿ ಪೋರ್ಣಿಮ ರಘು ಮತ್ತು ರಘು ಗೌಡ, ಬಂಗಾರ, ಪ್ರತಾಪ್ ಪಲಗಿರಿ ಮತ್ತು ಎಸ್ ಡಿ ಬೆಳ್ಳಿ, ಉಮೇರ ಸಲ್ಮಾ ಮತ್ತು ನವೀನ್ ಸಿಎನ್ ಕಂಚು.
35 ಕ್ಕಿಂತ ಹೆಚ್ಚು ಪುರುಷರ ಡಬಲ್ಸ್ ನಲ್ಲಿ ಮಾಣಿಕ್ ಬಹ್ರಿ ಮತ್ತುಸಂದೇಶ್ ಜೆ ಚೌಟಗೆ ಬೆಳ್ಳಿ, ದೀಪಕ್ ಡಿ ಜೈನ್ ಮತ್ತು ನಾಗೇಂದ್ರ ಗೀತಮೂರ್ಥಿ ಬೆಳ್ಳಿ, ವೇಣು ಗೋಪಾಲ್ ಮತ್ತು ವಿಶಾದ್ ಗುಪ್ತಗೆ ಕಂಚು.
ಇಂಟರ್ ಮೀಡಿಯೇಟ್ ಮಹಿಳಾ ಡಬಲ್ಸ್ ನಲ್ಲಿ ಚೈತ್ರ ನವೀನ್ ಮತ್ತು ಮಂಜುಶ್ರೀ ಗೆ ಬಂಗಾರ, ಹರಿಪ್ರಿಯಾ ಮತ್ತು ಸ್ವಾತಿ ಶಾಂಪ್ರಸಾದ್ ಗೆ ಬೆಳ್ಳಿ, ಧೀಕ್ಷ ವಿನೋದ್ ಮತ್ತು ಹಿತ ಅನಿಲ್ ಕುಮಾರ್ ಗೆ ಕಂಚುಗೆ ತೃಪ್ತಿಪಟ್ಟಿದ್ದಾರೆ.
ಓಪನ್ ಮಹಿಳಾ ಡಬಲ್ಸ್ ನಲ್ಲಿ ಚೈತ್ರ ನವೀನ್ ಮತ್ತು ಉಮೇರ ಸಲ್ಮಾ ಗೆ ಬಂಗಾರ, ಪೂರ್ಣಿಮ ರಘು ಮತ್ತು ಮಂಜುಶ್ರೀ ಬೆಳ್ಳಿ, ಹರಿಪ್ರಿಯ ಎಂಕೆ ಮತ್ತು ಸ್ವಾತಿ ಶ್ಯಾಂ ಪ್ರಸಾದ್ ಕಂಚುಗೆ ತೃಪ್ತಿಪಟ್ಟಿದ್ದಾರೆ.
ಇನ್ನು ಇದೇ ವೇಳೆ 9ನೇ ರಾಷ್ಟ್ರೀಯ ಪಿಕಲ್ ಬಾಲ್ ಕ್ರೀಡೆಯು ಸೆಪ್ಟೆಂಬರ್ 2025 ರಂದು (AIPA ಏರ್ಪಡಿಸಾಗುತ್ತದೆ) ಈ ಟೂರ್ನಿಯಲ್ಲಿ ಕರ್ನಾಟಕ ತಂಡ ತಮ್ಮ ಹಿಡಿತ ಸಾಧಿಸಲು ಎಲ್ಲಾ ರೀತಿಯಿಂದಲೂ ಸಜ್ಜಾಗುತ್ತದೆ.
ಮುಕ್ತಾಯ ಸಮಾರಂಭದಲ್ಲಿ ಗ್ರೀನ್ ಕಂಟ್ರಿ ಪಬ್ಲಿಕ್ ಶಾಲೆಯ ಅಧ್ಯಕ್ಷ ರವಿಶಂಕರ್, ಸನ್ ಲೈಟ್ ಕ್ರೀಡಾ ಸ್ಟುಡಿಯೊದ ವ್ಯವಸ್ತಾಪಕ ನಿರ್ದೇಶಕ ಕಾರ್ಥಿಕ್ ಧನರಾಜ್ , ಈಸಿ ಕೋರ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮುಖೇಶ್ ಚೇತನ್ ,KSPA ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.