ಬೆಂಗಳೂರು: ವಿಧಾನ ಪರಿಷತ್ತಿನ ಕಾರ್ಯದರ್ಶಿಗಳಾದ ಕೆ. ಆರ್. ಮಹಾಲಕ್ಷ್ಮಿ ಅವರು ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ವಿಧೇಯಕಗಳಾದ, ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನ ಪರಿಷತ್ತಿನಿಂದ ತಿರಸ್ಕøತಗೊಂಡಿರುವ ರೂಪದಲ್ಲಿ ಹಾಗೂ ಎರಡನೇ ಬಾರಿ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಸಾಂಪ್ರದಾಯಕ ಅಲೆಮಾರಿ ಕುರಿಗಾಯಿಗಳ ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ದ ರಕ್ಷಣೆ) ವಿಧೇಯಕ 2025, ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಅಯುಕ್ತರ ನೇಮಕಾತಿ ವಿಧೇಯಕ 2025, ಕರ್ನಾಟಕ ಲಿಪ್ಟ್ಗಳ, ಎಸ್ಕಲೇಟರ್ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್ಗಳ (ತಿದ್ದುಪಡಿ) ವಿಧೇಯಕ 2025 ಮತ್ತು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿದೇಯಕ 2025ನ್ನು ಸಭೆಯ ಮುಂದೆ ಮಂಡಿಸಿದರು.
ವಿಧಾನ ಪರಿಷತ್ತಿನಲ್ಲಿ ವರದಿಗಳ ಒಪ್ಪಿಕೆ
ಗಂಗಾ ಕಲ್ಯಾಣ ಯೋಜನಾ ವಿಶೇಷ ಸದಸನ ಸಮಿತಿಯ ಅಧ್ಯಕ್ಷರಾದ ನಿರಾಣಿ ಹಣಮಂತ್ ರುದ್ರಪ್ಪ ಅವರ ಪರಿವಾಗಿ ಸಮಿತಿಯ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿವಿಧ ನಿಗಮಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಪರಿಶೀಲಿಸಲು ರಚಿಸಲಾದ ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿ ಅಂತಿಮ ವರದಿಯನ್ನು ಸದನದಲ್ಲಿ ಒಪ್ಪಿಸಿದರು.
ಅದೇ ರೀತಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯರಾದ ಕೆ. ಅಬ್ದುಲ್ ಜಬ್ಬರ್ ಅವರು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 2ನೇ ವರದಿಯನ್ನು ಸದನದಲ್ಲಿ ಒಪ್ಪಿಸಿದರು.