ಬೆಂಗಳೂರು: ಮಕ್ಕಳು ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಚಿಕ್ಕ ವರಾಗಿದ್ದಾಗಲೆ ಬೆಳೆಸಿಕೊಂಡರೆ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿದ್ವಾನ್ ಅನಂತ ಭಾಗವತಾರ್ ತಿಳಿಸಿದರು.
ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191 ಸಮಾಜಸೇವ ಸಂಸ್ಥೆ 2025ನೇ ಸಾಲಿನ ಲಾಯಾ ತರಂಗ ಸಂಗಿತ ಹಬ್ಬ ಆಚರಣೆಯ ಸಮರೋಪ ಸಮಾರಂಭದಲ್ಲಿ ನಡೆದ ಕರ್ನಾಟಿಕ್ -ಹಿಂದುಸ್ಥಾನಿ, ಜಾನಪದ ಗೀತೆ, ಗುಂಪು ಗೀತೆಗಳು, ಭಾವಗೀತೆ,ಚಿತ್ರಗೀತೆಗಳ ಸ್ಪರ್ಧೆಗಳ್ಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿ 15 ಸ್ಪರ್ಧಾಳು ಗೆದ್ದವರಿಗೆ ಬಹುಮಾನ ನೀಡಿ ಮಾತನಾಡಿದರು. ಮಕ್ಕಳಿಗೆ ಸಂಗೀತ ಕಲಿಕೆಯ ಬಗ್ಗೆ ಆಸಕ್ತಿ ಬರಬೇಕು ಆಗ ಮಾತ್ರ ಏನನ್ನು ಬೇಕಾದರೂ ಸಾದನೆ ಮಾಡಲು ಸಾಧ್ಯ ಎಂದರು.ಅಂತ ಕೆಲಸವನ್ನು ಇಲ್ಲಿರುವ ಮಕ್ಕಳು ಮುಂದೆ ಮಾಡುತ್ತಾರೆ. ಅವೆಲ್ಲಾ ಗುಣಗಳು ಇವೆ ಎಂದರು.
ಇನ್ನು ಸಂಗೀತ ವಿಭಾಗದ ಪ್ರತಿ ಸ್ಪರ್ಧೆಯಲ್ಲಿ ಮೊದಲ,ದ್ವಿತೀಯ,ತೃತೀಯ ಬಹುಮಾನಗಳನ್ನು ಪುರುಷ-ಮಹಿಳೆಯರು ಪಡೆದರು, ಜೆಎಸ್ಎಸ್ ಅತ್ಯುತ್ತಮ ಶಾಲೆಯಾಗಿ ಮೊದಲನೆ ಬಹುಮಾನ ಪಡೆದರೆ, ಪ್ರಾರ್ಥನ ಶಾಲೆಗೆ 2ನೇ ಬಹುಮಾನ, ಕಾರ್ಮೆಲ್ ಶಾಲೆ 3ನೇ ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇದೇ ವೇಳೆ ಗೆದ್ದಿರುವ ಮಕ್ಕಳಿಗೆ ಸಂಸ್ಥೆಯಿಂದ ಆಕರ್ಷಕ ಟ್ರೊಫಿ ಮತ್ತು ಗಿಫ್ಟ್ ವೋಚರ್ ಸಹಾ ನೀಡಲಾಯಿತು.
ರೋ.ಬೆಂ.ಕ.ಪಾ 3191ರ ಲಯತರಂಗ ಕಾರ್ಯಕ್ರಮದ ಅಧ್ಯಕ್ಷರಾದ ರವಿ ಚಕ್ರವರ್ತಿಯವರು ಲಯತರಂಗ 2025 ಸಂಗಿತ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಕ್ಕಳಿಗೆ ಸಂಗೀತ ಬಹಳ ಅವಶ್ಯಕವಾಗಿ ಬೇಕಾಗುತ್ತದೆ, ಸಂಗೀತ ಒದೊಂದು ರೀತಿಯಲ್ಲಿ ಪ್ಯಾಷನ್ ಆಗಿದೆ. ನಮ್ಮ ತಾಯಿಯೂ ಸಹಾ ಸಂಗೀತ ಕಲಾವಿದೆ. ಸಂಗೀತದಲ್ಲಿ ಎಲ್ಲವನ್ನು ಕರಗತ ಮಾಡಿಕೊಂಡು ಸಂಗಿತ ಕಲಿಯಬೇಕು. ಅನೇಕ ಮಕ್ಕಳು ಸ್ಪರ್ಧೆಗೆ ಬಂದಿದ್ದಾರೆ. ಕಲಿಯಲು ಇದೊಂದು ಮಕ್ಕಳಿಗೆ ಸದಾವಕಾಶವಾಗಿದೆ. ಪಠ್ಯದ ಜೊತೆ ಪಠ್ಯತೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯ. ಸಂಗಿತ ಕಲಿಯುವುದರಿಂದ ಮಕ್ಕಳಿಗೆ ಆರೋಗ್ಯ, ಜ್ಞಾನ,ಕ್ರಿಯಾಶೀಲತೆ ,ಚುರುಕು,ಬುದ್ದಿವಂತಿಕೆ ಹೆಚ್ಚಾಗುತ್ತದೆ. ಸಂಗೀತ ಒಂದು ರೀತಿಯಲ್ಲಿ ಥೆರಪಿ ಇದ್ದಹಾಗೆ, ಎತ್ತರದ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗಲೇ ಸಂಗೀತ ಕಲಿತರೆ ಒಳ್ಳೆಯದು ಎಂದರು.
ರೋಟರಿ 3191ನ ಕಾರ್ಯಕ್ರಮದ ಉಸ್ತುವಾರಿ, ಸಲಹೆಗಾರ ಅಧ್ಯಕ್ಷ ಹರಿ ಪಬ್ಬತಿ ಮಾತನಾಡಿ, ಸಂಗಿತದಲ್ಲಿ ಯುವ ಟ್ಯಾಲೆಂಟ್ ಗಳನ್ನು ನೋಡಲು ಸಂಗೀತ ಸ್ಪರ್ಧೆ ಮಾಡಿಕೊಂಡು ಬರಲಾಗುತ್ತದೆ., ಲಯತರಂಗದಂತಹ ಕಾರ್ಯಕ್ರಮಗಳು ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ. ಮಕ್ಕಳು ಹಾಡುವುದನ್ನು ಕೇಳಲು ಹಿತವಾಗಿರುತ್ತದೆ. ಒಬ್ಬಬ್ಬ ಮಕ್ಕಳು ಸಹಾ ಅಚ್ಚುಕಟ್ಟಾಗಿ ಗುರುಗಳತ್ತಿರ ಸಂಗೀತ ಕಲಿತುಕೊಂಡು ವೇದಿಕೆ ಮೇಲೆ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ನಿರ್ದೇಶಕ ಸುಧಾಕರ್ ಮಧ್ಯಸ್ಥ ಮಾತನಾಡಿ, ಸಂಗೀತ ಸ್ಪರ್ಧೆಗೆ ಬೆಂಗಳೂರು ದಕ್ಷಿಣ ವಿಧಾನಸಭಾದಲ್ಲಿರುವ 15 ಶಾಲೆಗಳಿಂದ 120 ಮಕ್ಕಳು ಭಾಗವಹಿಸಿದ್ಸರು. ಅದರಲ್ಲಿ ಅಂತಿಮವಾಗಿ 16 ಜನ ಆಯ್ಕೆಯಾಗಿ ಗೆದಿದ್ದಾರೆ. ವೇದಿಕೆ ಮಕ್ಕಳು ಸಂಗೀತ ಹಾಡಬೇಕಾದರೆ ಸಂಗೀತ ಸರಸ್ವತಿ ನೆಲೆಸಿದ್ದಾಳೆ ಎಂಬಂತೆ ಭಾಸವಾಯಿತು. ಚಿಕ್ಕವರಾಗಿದ್ದಾಗಲೇ ಸಂಗೀತ ಆಭ್ಯಾಸ ಮಾಡಿಸಬೇಕು. ಅದರಿಂದ ಜ್ಞಾನ,ಕೊಡುತ್ತದೆ.ಸಂಗೀತ ಎಂದರೆ ಒಂದು ರೀತಿ ಲವ್ ತರ. 16 ವರ್ಷಗಳಿಂದ ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮನಾಂತರ ಪ್ರಶಸ್ತಿ ಪತ್ರ ನೀಡಲಾಯಿತು.
ಇನ್ಮು ಸಂಗೀತ ಸ್ಪರ್ಧೆಗೆ ತೀರ್ಪುಗಾರರಾಗಿ ಖ್ಯಾತ ಸಂಗೀತ ಕಲಾವಿದರಾದ ಗಾಯತ್ರಿ, ಪರಮೇಶ್ವರ ಹೆಗ್ಡೆ ಭಟ್ಕಳ, ರಾಹುಲ್ ಕೆ ರವೀಂದ್ರನ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191ರ ಅಧ್ತಕ್ಷರಾದ ಸಂಗೀತ ಅಯ್ಯರ್ ಗೌಡ, ಕಾರ್ಯದರ್ಶಿ ರೇಖ, ರೋಟರಿಯ ಮಾಜಿ ರಾಜ್ಯಪಾಲ ಉದಯ್ ಸೇರಿದಂತೆ ಮಕ್ಕಳ ಪೋಷಕರು,ಸಂಗೀತ ಕಲಾವಿದರು ರೊಟೇರಿಯನ್ಸ್ ಭಾಗವಹಿಸಿದ್ದರು.