ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಂಚಿಕೆ ಮಾಡುವ ವೇಳೆ ಅತಿ ಹಿಂದುಳಿದಿರುವ ಕೊರಚ ಸಮುದಾಯಕ್ಕೆ ಭಾರಿ ಅನ್ಯಾಯವಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಕಾರ್ಯಧ್ಯಕ್ಷ ಕೆ ಎನ್ ಪ್ರಭು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿ ಮಾತನಾಡಿ, ಕೊರಚ,ಕೊರಮ ಸಮುದಾಯಗಳು ಬೇರೆ ಬೇರೆ ಅವೆರಡನ್ನು ಒಂದು ಮಾಡುವುದು ಸರಿಯಲ್ಲ. ಸಮುದಾಯವನ್ನು ಎಡಗೈ ಅಥವಾ ಬಲಗೈ ಸಂಬಂಧಿತ ಜಾತಿಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು.
ರಾಜ್ಯದಲ್ಲಿ ಒಂದು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಮುದಾಯವು ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಇಂತಹ ಅಲೆಮಾರಿ ಸಮುದಾಯವನ್ನು ಒಳಮೀಸಲಾತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಬಲಿಷ್ಟ ಸಮುದಾಯಗಳ ಗುಂಪಿಗೆ ಸೇರಿಸಿರುವುದು ಸರಿಯಾದ ಕ್ರಮವಲ್ಲ. ಇದ್ದ ಒಂದುರಷ್ಟು ಮೀದಲಾತಿಯುವನಮಗೆ ಇಲ್ಲದಂತಾಗಿರುವುದು ನೋವಿನ ವಿಚಾರವಾಗಿದೆ.
ಕಿರಚ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕೊರಚರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ. ಇ ಹಿಂದೆ ಇದ್ದ ಶೇ.1ರಷ್ಟು ಮೀಸಲಾತಿ ಹಾಗೆ ಕೊಡಲಿ ಎಂದು ತಿಳಿಸಿದರು.
ಸರ್ಕಾರ ಹಾಗು ಸಿಎಂ ಆಗಿತುವ ಲೋಪವನ್ನು ಸರಿಪಡಿಸಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯವನ್ನು ಮಾಡಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಹಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.