ಬೆಂಗಳೂರು: ಕರ್ನಾಟಕ ರಾಜ್ಯ ಅತಿಥಿ ಶಿಕ್ಷಕರ ಸಾಕಷ್ಟು ಸಮಸ್ಯೆಗಳಿದ್ದು ರಾಜ್ಯ ಸರ್ಕಾರ ಯಾವುದೇ ರೀತಿಯಿಂದಲೂ ಸಹ ಹಲವು ವರ್ಷಗಳಿಂದ ಸ್ಪಂದನೆ ಮಾಡದೇ ಇರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ಗಜೇಂದ್ರ ಕುಮಾರ್ ಗೌಡ ಅವರು ಸರ್ಕಾರಕ್ಕೆ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 50,000 ಕ್ಕಿಂತ ಹೆಚ್ಚು ಅತಿಥಿ ಶಿಕ್ಷಕರು ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದು, ಅವರಿಗೆ ಕನಿಷ್ಠ ಕೂಲಿ ನೀಡಬೇಕು ಅದರ ಜೊತೆಗೆ 12 ತಿಂಗಳ ಸೇವೆ ಮುಂದುವರಿಸಬೇಕು ಹಾಗೆ ನೇರ ಸರ್ಕಾರಿ ಗುತ್ತಿಗೆ ನೇಮಕವಾಗಬೇಕು ಕೊನೆಯದಾಗಿ ಸೇವಾ ಹಿರಿತನ ಅನುಭವಕ್ಕೆ ತಕ್ಕಂತೆ ಆದ್ಯತೆ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯವನ್ನು ಮಾಡಿದರು.
ಅತಿಥಿ ಶಿಕ್ಷಕರಿಗೆ ಕೇವಲ 10 ತಿಂಗಳು ಮಾತ್ರ ಕೆಲಸವಿದ್ದು ಇನ್ನ ಎರಡು ತಿಂಗಳು ಅವರಿಗೆ ಸಂಬಳವಿಲ್ಲದೆ ಖಾಲಿ ಇರುತ್ತಾರೆ. ಹೀಗಾಗಿ ಅವರಿಗೆ 12 ತಿಂಗಳು ಕೆಲಸವನ್ನು ನೀಡಿ ಸೂಕ್ತ ಸಂಭಾವನೆಯನ್ನು ಸಹ ನೀಡಬೇಕಾಗಿದೆ. ಈ ಸಂಬಂಧ ಸಮಿತಿಯವರು ಆಗಸ್ಟ್ 24ರಂದು ಸರ್ಕಾರಕ್ಕೆ ಅಗ್ರಹ ಮಾಡಿದ್ದಕ್ಕೆ ಮುಖ್ಯ ಕಾರ್ಯದರ್ಶಿಗಳು ಕಡ್ಡಾಯವಾಗಿ ಕನಿಷ್ಠ ಕೋಲಿ ನೀಡಲು ಒಪ್ಪಿ ಕಡತವನ್ನು ಮಂಡಿಸಲು ಹಣಕಾಸು ಇಲಾಖೆಗೆ ಫೈಲ್ ಅನ್ನು ರವಾನಿಸಿದ್ದರು. ಆದರೆ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶೀಘ್ರದಲ್ಲಿ ಅತಿಥಿ ಶಿಕ್ಷಕರ ಪರವಾಗಿ ಮಂಡಿಸಿರುವ ಕನಿಷ್ಠ ಕೊಲ್ಲಿ 12 ತಿಂಗಳು ಸೇವಿಗೆ ಕೊಡಲು ಒಪ್ಪಿ ಅನುಮೋದಿಸಲು ಆರ್ಎಸ್ ಸಮಿತಿ ಆಗ್ರಹಿಸಿದರು.
ರಾಜ ಸರ್ಕಾರ ಒಂದು ಕಡೆ ಅತಿಥಿ ಶಿಕ್ಷಕರನ್ನು ಖಾಯಂ ಮಾಡಿಕೊಳ್ಳದೆ ಇರುವುದು ಒಂದು ಕಡೆಯಾದರೆ ಮತ್ತೊಂದು ಕಡೆ, ಅತಿಥಿ ಶಿಕ್ಷಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಇದಕ್ಕೆ ಶಿಕ್ಷಣ ಸಚಿವರು ಯಾವುದೇ ಕಿಮ್ಮತ್ತನ್ನು ನೀಡದಿರುವುದು ಅತಿಥಿ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳು ಸರ್ಕಾರದಿಂದ ಯಾವುದೇ ಭಾಗ್ಯಗಳನ್ನು ಕೊಡಿ ಎಂದು ಕೇಳಿಲ್ಲ, ಆದರೆ ಗುಣಮಟ್ಟದ ಶಿಕ್ಷಣ ನೀಡುವುದೇ ಶಿಕ್ಷಕರ ಒಂದು ಗುರಿಯಾಗಿದೆ, ಆದರೆ ಶಿಕ್ಷಣ ಕೊಡುವುದರ ಕಡೆ ಗಮನ ಇಲ್ಲದೆ ಕೇವಲ ಭಾಗ್ಯಗಳ ಕಡೆ ಸರ್ಕಾರ ದೃಷ್ಟಿಹರಿಸಿರುವುದು ದುರಂತದ ಸಂಗತಿ ಆಗಿದೆ ಎಂದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶಗಳನ್ನು ಮಾಡದೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಂದಿನ ದಿನಗಳಲ್ಲಿ ಕುತ್ತು ಬರಲಿದೆ. ಅದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಹಾಗೂ ಖಾಸಗಿ ಶಾಲೆಗಳ ಕಡೆಗೆ ಹೆಚ್ಚು ಪ್ರೋತ್ಸಾಹ ನೀಡುವ ಗುಮಾನಿ ಎಲ್ಲೆಡೆಯೋ ಹಬ್ಬಿದೆ. ಕಾರಣ ಬಹುತೇಕ ಶಾಲಾ ಕಾಲೇಜುಗಳು ರಾಜಕೀಯ ಪ್ರತಿನಿಧಿಗಳದ್ದೇ ಇರುವುದರಿಂದ ಹೆಚ್ಚು ಆಸಕ್ತಿ ಖಾಸಗಿ ಶಾಲೆಗಳ ಕಡೆ ತೋರುತ್ತಿರುವುದು ವಿಪರ್ಯಾಸದ ಸಂಗತಿ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಖಜಾಂಚಿ ಜಯಂತ್, ರಾಜ್ಯ ಸಂಯೋಜಕರಾದ ಶ್ರೀವಾರಿ ನಾಗರಾಜ, ಶಿವಶಂಕರ್ , ಕೀರ್ತಿ, ನರಸಿಂಹಮೂರ್ತಿ, ಜಯರಾಮ್, ಸಂಪಯ್ಯ, ನಿರ್ದೇಶಕರಾದ ಉಮೇಶ್, ರವಿಕುಮಾರ್, ರಾಜ್ಯ ಉಪಾಧ್ಯಕ್ಷರಾದ ಹನುಮ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲಾ ಲಿಂಗ, ಸೇರದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು