ಬೆಂಗಳೂರು : ನಗರದ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕೆ.ಆರ್ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರ 70 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಅದನ್ನು ಪರಿಣಾಮಕಾರಿ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಲು ಮಾಸ್ಟರ್ ಪ್ಲಾನ್ ತಯಾರಿಸಲು ಸೂಚನೆ ನೀಡಲಾಯಿತು.
*ಬಾಡಿಗೆ ಪಾವತಿಸದ ಮಳಿಗೆಗಳಿಂದ ಬಾಕಿ ಹಣ ವಸೂಲಿ ಮಾಡಿ*
ಮಾರುಕಟ್ಟೆ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಮಳಿಗೆಗಳಿವೆ, ಬಾಡಿಗೆ ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಂದ ವಸೂಲಿ ಮಾಡುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೆಲ ಮಹಡಿಯಲ್ಲಿ 529, ಮೊದಲನೇ ಮಹಡಿಯಲ್ಲಿ 494 ಹಾಗೂ ಎರಡನೇ ಮಹಡಿಯಲ್ಲಿ 265 ಸೇರಿದಂತೆ ಒಟ್ಟು 1,288 ಮಳಿಗೆಗಳಿವೆ. ಬಾಡಿಗೆ ಪಾವತಿಸುವ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪ್ರಕರಣವನ್ನು ತ್ವರತವಾಗಿ ಇತ್ಯರ್ಥಪಡಿಸಿಕೊಂಡು ಪಾಲಿಕೆಗೆ ಮಳಿಗೆಗಳಿಂದ ಬರಬೇಕಿರುವ ಬಾಕಿ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ದಿನದ 24 ಗಂಟೆಯೂ ಸ್ವಚ್ಛತೆ ಮಾಡುತ್ತಿರುಬೇಕು. ಪ್ರತಿಯೊಂದು ಮಳಿಗೆಯೂ ಕಡ್ಡಾಯವಾಗಿ ತ್ಯಾಜ್ಯ ಹಾಕಲು ಬಿನ್ ಗಳನ್ನು ಇಟ್ಟುಕೊಳ್ಳಬೇಕು. ಮಾರ್ಷಲ್ ಗಳು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಿ, ನಿಗದಿತ ಸ್ಥಳದಲ್ಲಿಯೇ ತ್ಯಾಜ್ಯ ಹಾಕಲು ಜಾಗೃತಿ ಮೂಡಿಸಲು ಸೂಚನೆ ನೀಡಿದರು.
*ಅತಿಕ್ರಮಣ ಮಾಡಿದವರಿಗೆ ದಂಡ ವಿಧಿಸಿ:*
ಮಳಿಗೆಗಳಿಗೆ ನೀಡಿರುವ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಅದಕ್ಕಿಂದ ಹೆಚ್ಚುವರಿ ಜಾಗ ಅತಿಕ್ರಮಣ ಮಾಡಿಕೊಂಡು ಮಾರಾಟ ಮಾಡುವ ಮಳಿಗೆಗಳಿಗೆ ಕೂಡಲೇ ದಂಡ ವಿಧಿಸಿ ಅತಿಕ್ರಮಣವನ್ನು ತೆರವುಗೊಳಿಸಬೇಕು. ಮತ್ತೆ ಅತಿಕ್ರಮಣ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲು ಸೂಚನೆ ನೀಡಿದರು.
*ದುರಸ್ಥಿ ಕಾರ್ಯ ಮಾಡಿ:*
ಮಾರುಕಟ್ಟೆ ಆವಣದಲ್ಲಿರುವ ಮೆಟ್ಟಿಲುಗಳ ಬಳಿ ಗ್ರಾನೈಟ್ ಹಾಳಾಗಿದ್ದು, ಅದರಿಂದ ಗ್ರಾಹಕರಿಗೆ ಸಮಸ್ಯೆ ಆಗಲಿದೆ. ಆದ್ದರಿಂದ ಕೂಡಲೆ ಎಲ್ಲೆಲ್ಲಿ ಹಾಳಾಗಿದೆ ಎಂಬುದನ್ನು ಪರಿಶೀಲನೆ ಮಾಡಿ ಅಗತ್ಯ ದುರಸ್ತಿ ಕಾರ್ಯವನ್ನು ನಡೆಸಬೇಕು. ಜೊತೆಗೆ ರೂಫ್ ಶೀಟ್ ಹಾಳಾಗಿರುವುದರಿಂದ ನೀರು ಸುರಿಯುವುತ್ತಿದ್ದು, ಇದರಿಂದ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅದನ್ನು ದುರಸ್ಥಿಗೊಳಿಸಲು ಸೂಚನೆ ನೀಡಿದರು. ಅದಲ್ಲದೆ ಮಳೆ ನೀರು ನಿಲ್ಲುವ ಕಡೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
*ಶೌಚಾಲಯ ನಾಗರಿಕರು ಬಳಸುವಂತೆ ಮಾಡಿ:*
ಕೆ.ಆರ್. ಮಾರುಕಟ್ಟೆಯ 1ನೇ ಮಹಡಿಯಲ್ಲಿರುವ ಶೌಚಾಲಯ ಬಳಕೆಯಾಗದೇ ಗಲೀಜಾಗಿದ್ದು, ಜೊತೆಗೆ ಬೀಗ ಹಾಕಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಅದನ್ನು ಇಂದು ಸಂಜೆಯೊಳಗೆ ಸ್ವಚ್ಛಗೊಳಿಸಿ, ನಾಗರಿಕರ ಬಳಕೆಗೆ ಅನುವು ಮಾಡಿಕೊಡಲು ಸೂಚಿಸಿದರು.
ಮಾರುಕಟ್ಟೆಯಲ್ಲಿರುವ ಮತ್ತೊಂದು ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡದೇ ಸಾರ್ವಜನಿಕರ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಇದಕ್ಕೆ ಪರ್ಯಾಯವಾಗಿ ಪಕ್ಕದದಲ್ಲಿನ ಖಾಲಿ ಸ್ಥಳದಲ್ಲಿದ್ದು ಇನ್ನೊಂದು ಶೌಚಾಲಯ ನಿರ್ಮಿಸಲು ಸೂಚಿಸಿದರು. ಹೊಸದಾಗಿ ಶೌಚಾಲಯ ನಿರ್ಮಿಸುವವರೆಗೆ ಇರುವ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು.
*ಅನಧಿಕೃತ ವಸ್ತುಗಳನ್ನು ತೆರವುಗೊಳಿಸಿ*
ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಎರಡನೇ ಮಹಡಿಯಲ್ಲಿ ಅನಧಿಕೃತವಾಗಿ ವಸ್ತುಗಳನ್ನು ಹಾಕಿರುವುದನ್ನು ನೋಡಿ ಕೂಡಲೇ ಅದನ್ನು ತೆರವುಗೊಳಿಸಬೇಕು. ತ್ಯಾಜ್ಯ ಹಾಕುವ ಸ್ಥಳದಲ್ಲಿ ಖಾಲಿ ಇರುವ ಜಾಗದ ಬಗ್ಗೆ ಪರಿಶೀಲಿಸಿ, ಆ ಜಾಗವನ್ನು ಬಳಸಿಕೊಳ್ಳಲು ಕ್ರಮವಹಿಸಲು ಸೂಚಿಸಲಾಯಿತು.
*ಸ್ವಚ್ಛತೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ: ರಾಜೇಂದ್ರ ಚೋಳನ್*
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಮಾತನಾಡಿ, ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲದಿರುವುದನ್ನು ಗಮನಿಸಿದ ಅವರು ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ, ಎಲ್ಲಾ ವಿಭಾಗದ ಆಧಿಕಾರಿಗಳು ಮಾರುಕಟ್ಟೆಯ ಸ್ವಚ್ಛತೆಗಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಿದರು.
ಈ ವೇಳೆ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಕಾರ್ಯಪಾಲಕ ಅಭಿಯಂತರರು, ಬೆಂ.ಘ.ನಿ ನಿಯಮಿತದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.