ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಗೆ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಮತ್ತು ನಾಯಕತ್ವ ಪ್ರಶಸ್ತಿ ಹಾಗೂ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿಗಳು ಲಭಿಸಿರುತ್ತದೆ.
ಕೆ.ಎಸ್.ಆರ್.ಟಿ.ಸಿ ಯು ಕೈಗೊಂಡಿರುವ ಅತ್ಯುತ್ತಮ ಪ್ರಯಾಣಿಕರ ಸ್ನೇಹಿ, ವಿವಿಧ ಬಸ್ಸುಗಳ ಬ್ರ್ಯಾಂಡಿಂಗ್, ಜನಸ್ನೇಹಿ ನಿರ್ವಹಣೆ ಉಪಕ್ರಮಗಳಿಗಾಗಿ 02 ಪ್ರಶಸ್ತಿಗಳು ಈ ಕೆಳಕಂಡ ವರ್ಗಗಳಲ್ಲಿ
1. Best Transport Company of India
2. Most Trusted Brands (Organization) ಲಭಿಸಿರುತ್ತದೆ.
ಮುಂಬಯಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಟಿ ಬಾಂಬೆ ಸುಧಾ ಚಂದ್ರನ್ ಮತ್ತು ವಾಗ್ಮರೆ ರವರು ನಿಗಮದ ಅರುಣಾ ಎಸ್ ಎನ್, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ ವಿಭಾಗ ಹಾಗೂ ಎಂ ನವೀನ್, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಗಾರ ಬೆಂಗಳೂರು ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಬೆಂಗಳೂರಿನಲ್ಲಿ ನಡೆದ *4th Edition of the Asia Pacific HRM Congress & Awards* ಸಮಾರಂಭದಲ್ಲಿ KSRTCಗೆ “Top Most Organizations with Innovative HR Practices” ಎಂಬ ಗೌರವ ದೊರಕಿತು.
ಈ ಪ್ರಶಸ್ತಿ ಲಭಿಸಿರುವುದು ನೌಕರರ ಕಲ್ಯಾಣ ಕಾರ್ಯಕ್ರಮಗಳು, ತಂತ್ರಜ್ಞಾನ ಆಧಾರಿತ HR ಕ್ರಮಗಳು ಹಾಗೂ ನಿರಂತರ ನವೀನತೆಯೊಂದಿಗೆ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ತೋರಿದ ಶ್ರೇಷ್ಠತೆಯ ಉಪಕ್ರಮ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸ್ಮಿತಿ ಭಟ್ ಡಿಯೊರ, ಸಹ ಸಂಸ್ಥಾಪಕರು ಮತ್ತು COO, AdvantageClub.ai ರವರು ನಿಗಮದ ಶ್ಯಾಮಲಾ, ಉಪ ಮುಖ್ಯ ಕಾನೂನು ಅಧಿಕಾರಿ, ಹಾಗೂ ಶ್ರೀಮತಿ ಶಕುಂತಲಾ, ಕಾನೂನು ಅಧಿಕಾರಿ, ಕೇಂದ್ರ ಕಛೇರಿ, ಬೆಂಗಳೂರು ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.