ಬೆಂಗಳೂರು: ಮಹಿಳೆ ಗರ್ಭಿಣಿಯಾದಾಗಿನಿಂದ 24 ವಾರಗಳ ವರೆಗೆ ಕೇವಲ 2 ಭಾರಿ ಮಾತ್ರ ಸ್ಕ್ಯಾನಿಂಗ್ ಮಾಡುವ ಪ್ರಕ್ರಿಯೆ ಇದೆ, ಅದಕ್ಕಿಂತ ಹೆಚ್ಚು ಭಾರಿ ಮಾಡುವುದಾದರೆ ಇದರಲ್ಲಿರುವ ಮಗುವಿಗೆ ಸಂಸ್ಯೆ ಇದೆ ಎಂದು muskcon ಸಂಸ್ಥೆಯ ಅಧ್ಯಕ್ಷೆ ಡಾ.ಪ್ರೀತಿ ವೆಂಕಟೇಶ್ ಅವರು ತಿಳಿಸಿದರು.
ಬೆಂಗಳೂರಿನ ನಿಮಾನ್ಸ್ ಸಭಾಂಗಣದಲ್ಲಿ ಕರ್ನಾಟಕ ವೈದ್ಯಕೀಯ ಅಲ್ಟ್ರಾಸೌಂಡ್ ಸಂಸ್ಥೆಯ 29ನೇ ವಾರ್ಷಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿ, ಗರ್ಭವಸ್ಥೆಯಲ್ಲಿನ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಪತ್ತೆ ಹಚ್ಚುವ, ಸ್ಕ್ಯಾನಿಂಗ್ ಮಾಡುವ ವಿಧಾನದ ಬಗ್ಗೆ 2 ದಿನಗಳ ಕಾಲ ಸೆಮಿನಾರ್ ಹಮ್ಮಿಕೊಳ್ಳಲಾಗಿತ್ತು, ಅದರಲ್ಲಿ ತಿಳಿಸಿದರು. ಇಂದಿನ ಪ್ರಸ್ತುತ ದಿನ್ಮಾನಕ್ಕೆ ಸ್ಕ್ಯಾನಿಂಗ್ ಬಹಳ ಅವಶ್ಯಕತೆ ಇದೇ, ಸ್ಕ್ಯಾನಿಂಗ್ ಮಾಡುವುದರಿಂದ ಮಗುವಿನ ಬೆಳವಣಿಗೆ, ರೋಗ ಲಕ್ಷಣ ತಿಳಿಯಲಾಗುತ್ತದೆ ಎಂದರು.
Muskcon ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ ಎಸ್ ರಾಮಮೂರ್ತಿ ಅವರು ಮಾತನಾಡಿ, ದೀನ್ ದಿಂದ ದಿನಕ್ಕೆ ಆಧುನಿಕ ತಂತ್ರಜ್ಞಾನ ಬೃಹತ್ ಆಗಿ ಬೆಳೆದಿದೆ. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಭ್ರೂಣದಲ್ಲಿರುವ ಮಗುವಿನ ಆರೋಗ್ಯ ಪತ್ತೆಹಚ್ಚುವ ಸೂಕ್ಷ್ಮ ಕೆಲಸವನ್ನು ಮಾಡುವುದು ಕಷ್ಟಕರ ಸಂಗತಿ, ಮನುಷ್ಯನ ಹೊರಭಾಗದಲ್ಲಿ ಸ್ಕ್ಯಾನಿಂಗ್ ಮಾಡಿ ರೋಗ ಪತ್ತೆ ಹಚ್ಚುವ ಕೆಲಸವನ್ನು ನೋಂದಾವಣಿ ಆಗಿರುವ ಸ್ಕ್ಯಾನಿಂಗ್ ಕೇಂದ್ರದಲ್ಲಿ ಮಾಡಲಾಗುತ್ತದೆ. ಅದಕಾಗಿ ನಿತ್ಯ ವಿವಿಧ ಕಂಪನಿಗಳು ಹೊಸ ಹೊಸ ಆವಿಷ್ಕಾರಗಳಳ್ಳ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸ್ಕ್ಯಾನಿಂಗ್ ಯಂತ್ರಗಳನ್ನು ಪರಿಚಯ ಮಾಡಲಾಯಿತು.
ಶಿಶುವಿನಲ್ಲಿನ ರೋಗ ಲಕ್ಷಣಗಳ ತಿಳಿಯುವ ಬಗ್ಗೆ ಸ್ಕ್ಯಾನಿಂಗ್ ಮಾಡುವ ವಿಧಾನ, ಸಮಸ್ಯೆ, ಸವಾಲು, ಉಪಯೋಗಗಳ ಬಗ್ಗೆ ನುರಿತ ತಜ್ಞೆಯರು, ಸ್ಕ್ಯಾನಿಂಗ್ ಕೇಂದ್ರದ ಪ್ರತಿನಿಧಿಗಳಿಂದ ಮಗುವಿನ ಬೆಳವಣಿಗೆ ಬಗ್ಗೆ ಸ್ಕ್ಯಾನಿಂಗ್ ಮಾಡುವ ವಿಧಾನ ಬಗ್ಗೆ 2 ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಚರ್ಚಿಸಿ ತಿಳಿಸಲಾಯಿತು. ನಿತ್ಯ ಸಾಕಷ್ಟು ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಸ್ಕ್ಯಾನಿಂಗ್ ಯಂತ್ರಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ, ಒಂದು ರೀತಿಯಲ್ಲಿ ಸ್ಕ್ಯಾನಿಂಗ್ ಎಕ್ಸ್ಪರ್ಟ್ ಗಳಿಗೆ ಅನುಕೂಲವಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಡಾ.ಚಿತ್ರ ಗಣೇಶ್ ಮಾತನಾಡಿ, ಬಹಳ ಮುಖ್ಯವಾದ ವಿಚಾರವಾದ ಗರ್ಭಿಣಿಯರಲ್ಲಿ ಮಗುವಿನ ಲಿಂಗ ಪತ್ತೆಹಚ್ಚುವ ವಿಚಾರದ ಬಗ್ಗೆ ಮಾತನಾಡಿ, ರಾಜ್ಯದ ಕಾನೂನು ಸುವ್ಯವಸ್ಥೆ ಬಹಳ ಕಠಿಣವಾಗಿದೆ. ನಮ್ಮ ಸಂಸ್ಥೆಯ ಸದಸ್ಯರು ಯಾರು ಇಂತಹ ಕೃತ್ಯ ಎಸಗಿಲ್ಲ, ನಮಗೆ ಬಂದಿರುವ ಮಾಹಿತಿ ಪ್ರಕಾರ ಈಗ ಸಿಕ್ಕಿರುವ ಟೆಕ್ನಿಷಿಯನ್, ವೈದ್ಯರು, ಸ್ಕ್ಯಾನಿಂಗ್ ಎಕ್ಸ್ಪರ್ಸ್ ಗಳು ಯಾರು ಪರಿಣತಿ ಹೊಂದಿದವರಲ್ಲ ಎಂಬುದು ತಿಳಿದುಬಂದಿದೆ.ಅದರ ಬಗ್ಗೆಯೂ ಸಾಕಷ್ಟು ಚರ್ಚೆಗಳು ನುರಿತರಿಂದ ನಡೆದವು.
ಇನ್ನು ಕಾರ್ಯಕ್ರಮಕ್ಕೆ ಪಾಂಡಿಚೆರಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ, ಗುಜರಾತ್, ಅಹಮದಾಬಾದ್, ದೆಹಲಿ ಸೇರಿದಂತೆ200ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗಿವಹಿಸಿದ್ದರು. ಅನೇಕ ಸ್ಕ್ಯಾನಿಂಗ್ ವಿಚಾರಧಾರೆಗಳ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಡಾ.ಮನೀಸ್ ರಹೇಜ್ ಉಪಸ್ಥಿತರಿದ್ದರು.