*ಬೆಂಗಳೂರಿನಲ್ಲಿ ನಡೆದ 9ನೇ ವಾರ್ಷಿಕ “ಸಾಧ್ಯತೆಗಳ ವಾರ” ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿಗಳಿಗೆ ನೆರವಾಗಲು ಸ್ವಯಂ ಸೇವಕರಾದ ಆ್ಯಬ್ವೀ ಉದ್ಯೋಗಿಗಳು.
*ಬೆಂಗಳೂರಿನ ಲಕ್ಕಸಂದ್ರದ ಬಿಬಿಎಂಪಿ ಶಾಲೆಯಲ್ಲಿ ಮಕ್ಕಳೊಂದಿಗೆ 9ನೇ ವರ್ಷದ ಸ್ವಯಂ ಸೇವಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
*ಸ್ಥಳೀಯವಾಗಿ ಬದಲಾವಣೆ ತರಲು ಜಾಗತಿಕ ಮಟ್ಟದಲ್ಲಿ ಉದ್ಯೋಗ ನೀಡುವುದು. 150 ಕ್ಕಿಂತ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿ.
*ಆ್ಯಬ್ವೀ ಸಂಸ್ಥೆಯಿಂದ ಜಾಗತಿಕ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರ
_____________________________________
ಬೆಂಗಳೂರು: ದೊಡ್ಡ ದೊಡ್ಡ ಸಂಸ್ಥೆಗಳು ಹಾಗೂ ಉದ್ಯೋಗಿಗಳು ಕೇವಲ ಹಣ, ಶೋಿಗಳಿಗೆ ಶ್ರೀಮಂತಿಕೆಗಷ್ಟೇ ಸೀಮಿತವಾಗದೆ, ಬಡವ ,ನಿರ್ಗತಿಕ, ವಿಕಲಾಂಗರಿಗೇ,ಯುವಕರಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ, ಎಲ್ಲವನ್ನೂ ಉಳ್ಳವರು,ಪ್ರಜ್ಞಾವಂತರು ಮಾಡಿದಾಗ ಮಾತ್ರ ಗ್ರಾಮ, ಹಳ್ಳಿ,ರಾಜ್ಯ,ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು Abbvie ಸಂಸ್ಥೆಯ ಎಂಡಿ, ಜಿಎಂ ಸುರೇಶ್ ಪಟ್ಟತಿಲ್ ತಿಳಿಸಿದರು.
ಬೆಂಗಳೂರಿನ ಲಕ್ಕಸಂದ್ರದ ಬಿಬಿಎಂಪಿ ಶಾಲೆಯಲ್ಲಿ ಮಕ್ಕಳೊಂದಿಗೆ 9ನೇ ವರ್ಷದ ಸ್ವಯಂ ಸೇವಕರ ದಿನವನ್ನು ಒಂದು ದಿನದ ಮಟ್ಟಿಗೆ ವಿಶೇಷವಾಗಿ ಆಚರಿಸಲಾಯಿತು. ನಂತರ ಮಾತನಾಡಿದ ಅವರು, 9 ವರ್ಷಗಳ ಕಾಲ ಆ್ಯಬ್ವೀ ಜಾಗತಿಕವಾಗಿ ಬಯೋಫಾರ್ಮಾಸ್ಯೂಟಿಕಲ್ ಕಂಪನಿಯಾಗಿದೆ, 9 ವರ್ಷಗಳ ಕಾಲ ಸಾಧ್ಯತೆಗಳ ವಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.
ನಮ್ಮ ಸಂಸ್ಥೆಯಿಂದ ಮಾಡುವ ಸಮಾಜಮುಕಿ ಕೆಲಸ ಕಾರ್ಯಗಳು CSR ನ ಅಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಮಾಡಲಾಗುತ್ತಿದೆ, ಇದು ಜಾಗತಿಕ ಮಟ್ಟದ ಸ್ವಯಂಸೇವಕ ಕಾರ್ಯಕ್ರಮವಾಗಿದ್ದು, ಸ್ಥಳೀಯ ಸಮುದಾಯಗಳಿಗೆ ನೆರವು ನೀಡಲು ಉದ್ಯೋಗಿಗಳೆಲ್ಲಾ ಒಂದಾಗಿ ದುಡಿಯುವ ಉದ್ದೇಶವನ್ನು ಹೊಂದಿದೆ. 2024ರ 10ನೇ ಜೂನ್ ನಿಂದ 50 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸಾವಿರಾರು ಆ್ಯಬ್ವೀ ಉದ್ಯೋಗಿಗಳು ವಿಶ್ವಾಸಾರ್ಹವಾದ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಸಮುದಾಯ ಪಾಲುದಾರರ ಜೊತೆ ಸಹಯೋಗ ಮಾಡಿಕೊಂಡು ಸ್ಥಳೀಯ ಸಮುದಾಯಗಳಿಗೆ ಪ್ರಯೋಜನ ಒದಗಿಸುವ ಮತ್ತು ಆ ಮೂಲಕ ಪ್ರಪಂಚದಾದ್ಯಂತ ಇರುವ ಸಾವಿರಾರು ಮಂದಿಯ ಮೇಲೆ ಪರಿಣಾಮ ಬೀರುವ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷ, ಮುಂಬೈ, ಚೆನ್ನೈ, ನವದೆಹಲಿ ಮತ್ತು ಬೆಂಗಳೂರು ನಗರಗಳಲ್ಲಿ ಬಹು ನಿರೀಕ್ಷಿತ ‘ವೀಕ್ ಆಫ್ ಪಾಸಿಬಿಲಿಟೀಸ್’ (ಸಾಧ್ಯತೆಗಳ ವಾರ) ಕಾರ್ಯಕ್ರಮ ನಡೆದಿದೆ.
ಶಾಲೆಯ ಮಕ್ಕಳಿಗೆ ಕ್ರಿಯಾಶೀಲ ಚಟುವಟಿಕೆ
ಇನ್ನು ಶಾಲೆಯ 150 ಕ್ಕಿಂತ ಗಂಡು ಹಾಗು ಹೆಣ್ಣು ಮಕ್ಕಳಿಗೆ Abbavie ಸಂಸ್ಥೆಯ ಸದಸ್ಯರಿಂದ ವಿಶೇಷ ರೀತಿಯ ಚಟುವಟಿಕೆ ಮಾಡಿಸಲಾಯಿತು. ಮಕ್ಕಳ ಕೈಯಲ್ಲಿಯೇ ಹಳೆಯ ಬಟ್ಟೆಗಳಿಂದ ಮರುಬಳಕೆಯಾಗುವ, ಉಪಯೋಗಿಸುವ ಬಗ್ಗೆ ತಿಳಿಸುವ ಮೂಲಕ ಮಕ್ಕಳಿಂದಲೇ ಮಾಡಿಸಿದರು. ಮತ್ತೆ ಕೆಲವು ಮಕ್ಕಳು ಬಟ್ಟೆಗಳ ಮೇಲೆ ಡ್ರಾಯಿಂಗ್ ಮಾಡುವ ,ಚಿತ್ರಗಳನ್ನು ಬಿಡಿಸುವ, ಅವರದೇ ಕಲೆಯನ್ನು ಕಲೆಯ ಕುಂಚದಲ್ಲಿ ಸಾದರಪಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು.ಇದರಿಂದ ಇಡೀ ಒಂದು ದಿನ ಮಕ್ಕಳ ಜೊತೆಯಲ್ಲಿಯೇ ಮಕ್ಕಳಾಗಿ ದಿನಕಳೆದಿದ್ದನ್ನು ನೋಡಬಹುದು. ಫಾಸ್ಟ್ ಫ್ಯಾಶನ್ ಮತ್ತು ಜವಳಿ ತ್ಯಾಜ್ಯದಿಂದ ಉಂಟಾಗುವ ಸಮಸ್ಯೆಗಳು’ ಎಂಬ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಟಿ-ಶರ್ಟ್ ಅನ್ನು ಸರಳವಾಗಿ ಹೇಗೆ ಬಟ್ಟೆಯ ಚೀಲ ಮಾಡಬಹುದು ಎಂಬುದರ ಕುರಿತು ತರಬೇತಿ ನೀಡಿದರು. ದ್ವಿತೀಯಾರ್ಧದಲ್ಲಿ, ಸ್ವಯಂಸೇವಕರನ್ನು 1 ಅಥವಾ 2 ವಿದ್ಯಾರ್ಥಿಗಳ ಜೊತೆ ಸೇರಿಸಿ ಅವರಿಗೆ ಟಿ-ಶರ್ಟ್ ಅನ್ನು ಸರಳವಾಗಿ ಬಟ್ಟೆಯ ಚೀಲ ಮಾಡುವ ಕುರಿತು ತರಬೇತಿ ನೀಡಲಾಯಿತು. ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ನೀಡಲಾಯಿತು.
ಸ್ವಯಂಸೇವಕರಾಗಿ ಬೆಂಗಳೂರಿನಲ್ಲಿರುವ ನಮ್ಮ ಸ್ಥಳೀಯ ಸಮುದಾಯಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಉರ್ದು ಶಾಲೆಯ ಕುರಿತು ತಿಳಿಸಿದ ಐವಾಲಂಟಿಯರ್ ಸಂಸ್ಥೆಯ ಜೊತೆ ಸಹಯೋಗ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು, “ನಮ್ಮ ವಾರ್ಷಿಕ ‘ವೀಕ್ ಆಫ್ ಪಾಸಿಬಿಲಿಟೀಸ್’ ಕಾರ್ಯಕ್ರಮದ ಸಮಯದಲ್ಲಿ ಸಾವಿರಾರು ಆ್ಯಬ್ವೀ ಉದ್ಯೋಗಿಗಳು ತಮ್ಮ ಸ್ಥಳೀಯ ಸಮುದಾಯಗಳಿಗೆ ನೆರವಾಗುತ್ತಾರೆ” ಎಂದು ಹೇಳಿದರು.
ಸ್ಥಳೀಯ ಬದಲಾವಣೆ ತರಲು ಜಾಗತಿಕ ಮಟ್ಟದಲ್ಲಿ ಉದ್ಯೋಗ ನೀಡುವುದು
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆ್ಯಬ್ವೀ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ನತಾಶಾ ತಿವಾರಿ, “ಆ್ಯಬ್ವೀ ಫೌಂಡೇಶನ್ ವಿವಿಧ ಸ್ವಯಂಸೇವಕ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಗಳಲ್ಲಿ ಬದಲಾವಣೆ ಮಾಡಲು ಜಾಗತಿಕವಾಗಿ ಉದ್ಯೋಗಿಗಳನ್ನು ಒಂದುಗೂಡಿಸುತ್ತದೆ. ಆ ಮೂಲಕ ಸಮುದಾಯಗಳ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಒಳಿತಿಗೆ ಹಾಗೂ ಪರಿಸರಕ್ಕೆ ಒಳಿತು ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುವುದು” ಎಂದು ಹೇಳಿದರು.
ಔಷಧಗಳು ಮತ್ತು ಪರಿಹಾರೋತ್ಪನ್ನಗಳನ್ನು ರಚಿಸುವುದರ ಮೇಲೆ ಗಮನಹರಿಸಿರುವ ಜಾಗತಿಕ ಬಯೋಫಾರ್ಮಾಸ್ಯೂಟಿಕಲ್ ಕಂಪನಿ ಆಗಿರುವ ಆ್ಯಬ್ವೀ (Abbvie) ಒಂಭತ್ತನೇ ವಾರ್ಷಿಕ ‘ವೀಕ್ ಆಫ್ ಪಾಸಿಬಿಲಿಟೀಸ್’ (ಸಾಧ್ಯತೆಗಳ ವಾರ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಯಾವ ಕೆಲಸ ಕಾರ್ಯಗಳ ಬಗ್ಗೆ ಮಾಡಿದರೆ ಒಳಿತು ಎಂಬ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ ಎಂದರು.