ಮೈಸೂರು:ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದಿಂದ 5 ಚಿನ್ನದ ಪದಕ 3 ನಗದು ಬಹುಮಾನ ಪಡೆದ ಉಪ್ಪಾರ ಸಮಾಜದ ಹೆಮ್ಮೆಯ ಸುಪುತ್ರಿ ಕುಮಾರಿ ಎಂ ಸುಮಾ ಅವರಿಗೆ ಚಾಮರಾಜ ನಗರ ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಎಂ ಜಯಕುಮಾರ್ ಅವರು ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ತಾಲೂಕಿನ ಸರಗೂರುಮೋಳೆ ಗ್ರಾಮದ ಮಹದೇವಸ್ವಾಮಿ ಮತ್ತು ಚಂದ್ರಮ್ಮ ದಂಪತಿಯ ಮಗಳು ಪ್ರಸ್ತುತ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ಏಚಗಳ್ಳಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಿ ಎಂ.ಸುಮಾ ಅವರು ಮೈಸೂರು ವಿವಿಯಲ್ಲಿ ಬಿಎ ಪದವಿಯಲ್ಲಿ ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದು 3 ಚಿನ್ನದ ಪದಕ ಪಡೆದಿದ್ದಾರೆ. ಜೊತೆಗೆ, ಬಿಎ. ಪದವಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2 ಚಿನ್ನ ಮತ್ತು 3 ನಗದು ಬಹುಮಾನ ಪಡೆದುಕೊಂಡಿರುತ್ತಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಪರ್ಡ್ ಭವನದಲ್ಲಿ ನಡೆದ 104 ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕುಲಪತಿಗಳಾದ ಪ್ರೊ ಲೋಕನಾಥ್ ಅವರ ಸಮ್ಮುಖದಲ್ಲಿ 5 ಚಿನ್ನದ ಪದಕದ ಜೊತೆಗೆ 3 ನಗದು ಬಹುಮಾನ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿರುವ ಇವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.