ಬೆಂಗಳೂರು: ಮೈಸೂರು ರಸ್ತೆಯ ಬ್ಯಾಟರಾಯನ ಪುರದಲ್ಲಿರುವ ಶ್ರೀ ಶಾರದಾ ವಿದ್ಯಾಪೀಠ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ವೇದಿಕೆ ಮೇಲೆ ನೃತ್ಯಕ್ಕೆ ಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದ ಬಿಡಿಎ ಮಾಜಿ ಉಪ ನಿರ್ದೇಶಕರಾದ ಆರ್ ವಿ ಕಾಂತರಾಜ್ ನೆರವೇರಿಸಿದರು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಬಿವಿ ಪಾಟೀಲ್ ಪಾಂಡು, ಅಧ್ಯಕ್ಷರಾದ ಎನ್ ಕಾಮರಾಜ್ , ಶಾಲೆಯ ಮುಖ್ಯೋಪಾಧ್ಯಾಯರಾದ ಪಿ ಪೂಂಗುಜಲಿ ಉಪಸ್ಥಿತರಿದ್ದರು.
ಶಾಲೆಯ ಆಡಳಿತಾಧಿಕಾರಿಯಾರದ ಕೆ ರಾಮಕೃಷ್ಣಯ್ಯ ಮಾತನಾಡಿ, ಸುಮಾರು 55 ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ, ನರ್ಸರಿಯಿಂದ ಡಿಗ್ರೀ ವರೆಗೆ ಮಕ್ಕಳಿಗೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ, ಬಡವರಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ಶಿಕ್ಷಣವನ್ನು ನೀಡಲಾಗುತ್ತದೆ.
ಬ್ಯಾಟರಾಯನಪುರದಲ್ಲಿ ಬಹುತೇಕವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಯಾವುದೇ ಆದಾಯವನ್ನು ಬಯಸದೆ ಗುಣಮಟ್ಟದ ವಿಧ್ಯಾಭ್ಯಾಸ ನೀಡಲಾಗುತ್ತದೆ. ದುರಭ್ಯಾದಕ್ಕೆ ಒಳಗಾಗಿರುವ, ಸಮಾಜದಲ್ಲಿ ಕಟ್ಟಕಡೆಯ ಮಕ್ಕಳು ಈ ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ, 50 ವರ್ಷಗಳ ಹಿಂದೆ 30 ಜನರಿದ್ದ ಮಕ್ಕಳು ಇದೀಗ 1200 ಜನ ಮಕ್ಕಳು ಓದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಾಥಮಿಕ, ಪ್ರೌಢ,puc, ಕಾಲೇಜು ಸರ್ಕಾರದ ಅನುದಾನದಲ್ಲಿ ನಡೆಯುತ್ತಿದೆ. ಇಂಗ್ಲಿಷ್ ಮಾಧ್ಯಮ ಶಾಲೆ ಅನುದಾನ ರಹಿತವಾಗಿ ನಡೆಯುತ್ತಿದೆ ಎಂದು ಶಾಲಾ ಕಾಲೇಜು ನಡೆದುಬಂದ ಹಾದಿಯನ್ನು ತಿಳಿಸಿದರು.
ಇನ್ನು ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದರಿಂದ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು. ವೇದಿಕೆಯಲ್ಲಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿ ನೆರೆದಿದ್ದವರನ್ನು ಪುಳಕಿತರನ್ನಗಿಸಿದರು.