ಬೆಂಗಳೂರು: ಆಚಾರ್ಯ ಪಾಠ ಶಾಲೆಯ ಶಿಕ್ಷಣ ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಆಟದ ಮೈದಾನದಲ್ಲಿ ನೆರವೇರಿಸಲಾಯಿತು.
ಇನ್ನು ಎಪಿಎಸ್ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಂದ ತರಹೇವಾರಿ ನೃತ್ಯ ಪ್ರದರ್ಶನವನ್ನು ಸಹ ಏರ್ಪಾಡು ಮಾಡಲಾಯಿತು, ಮಕ್ಕಳು ನೃತ್ಯ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಿದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಆಗಿರುವ ಕಟ್ಟೆ ಸತ್ಯನಾರಾಯಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ನಾನು ಇದೇ ಶಾಲೆಯಲ್ಲಿ 1970ರ ಹಿಂದೆ ವಿದ್ಯಾಭ್ಯಾಸ ಮಾಡಿ ಶಿಕ್ಷಣವನ್ನು ಕಲಿತಿದ್ದೇನೆ, ನನಗೆ ಶಿಕ್ಷಣ ಕಲಿಸಿದ ಮಹಾನ್ ಸಂಸ್ಥೆಯಾಗಿದೆ, ಅಲ್ಲವೇ ಸಾವಿರಾರು ಜನರಿಗೆ ಇವತ್ತಿನ ಕಾಲದಲ್ಲಿ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾ ಕೇಂದ್ರವಾಗಿದೆ. ಇಂತಹ ಶಾಲೆಗಳನ್ನು ಯಾರು ಸಹ ಮರೆಯಬಾರದು, ಅದೇ ರೀತಿ ಸಂಸ್ಥೆಯಲ್ಲಿ ಓದಿರುವ ಅದೆಷ್ಟೋ ಜನ ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ ಎಂದು ಶಾಲೆಯ ಹಳೆ ನೆನಪುಗಳನ್ನು ಮೆಲುಕ ಹಾಕಿದರು.
ಇನ್ನು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದಂತಹ ಡಾ. ವಿಷ್ಣುಭರತ ಆಲಂಪಲ್ಲಿ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಎರಡು ವಿಶೇಷವಾದಂತಹ ರಾಷ್ಟ್ರೀಯ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಒಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಹಬ್ಬವನ್ನು ಶಿಕ್ಷಕರು ಸೇರಿದಂತೆ ಮಕ್ಕಳು ಅದ್ದೂರಿ, ವೈಭವಪೇರಿತವಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಲಾಗುವುದು, ಅದರ ಜೊತೆಗೆ ಕಾಲೇಜಿನ ಬೋಧಕ ವರ್ಗ ಶ್ರಮವಹಿಸಿ ಮಕ್ಕಳಿಗೆ ಪಾಠ ಪ್ರವಚನಗಳನ್ನು ನೀಡುತ್ತಿದ್ದಾರೆ, ಹೀಗಾಗಿ ಎಪಿಎಸ್ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿರುವುದು ಗೊತ್ತಾಗುತ್ತದೆ.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಚಾರ್ಯ ಪಾಠಶಾಲೆ ಎಜುಕೇಶನಲ್ ಟ್ರಸ್ಟ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 90 ವರ್ಷಗಳ ಅಮೋಘ ಮತ್ತು ಸಾರ್ಥಕ ಸೇವೆ ಪೂರ್ಣಗೊಳಿಸಿದೆ. ಇದೇ ವೇಳೆ ಎಪಿಎಸ್ ಮೈದಾನದಲ್ಲಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಸಿಎ ಡಾ.ವಿಷ್ಣು ಭರತ್ ಆಲಂಪಲ್ಲಿ, ಪ್ರಧಾನ ಕಾರ್ಯದರ್ಶಿ ಪ್ರೊ.ಎ. ಪ್ರಕಾಶ್, ಟ್ರಸ್ಟಿ ಸಿಎ ಎಪಿ ಆಚಾರ್ಯ , ಅಭಿಮಾನಿ ಟ್ರಸ್ಟಿ ಎ ಆರ್ ಆಚಾರ್ಯ, ಪ್ರಾಂಶುಪಾಲರಾದ ನಾಗರಾಜ್ ಎಸ್ . ಉಪ ಪ್ರಾಂಶುಪಾಲರಾದ ಎಚ್. ಎಸ್ ರಂಜಿನಿ, ಎಪಿಎಸ್ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.