ಬೆಂಗಳೂರು: ಆರೋಹಣ ಸಂಗೀತ ಸಂಸ್ಥೆಯಿಂದ ಬಡ ಹೃದ್ರೋಗಿಗಳ ಮಕ್ಕಳಿಗೆ ಶಸ್ತ್ರಚಿಕಿತ್ಸೆಗೆ ನೆರವಾಗಲು ಜಿಪಿ ನಗರದ ಆರ್ ವಿ ಡೆಂಟಲ್ ಸಭಾಂಗಣದಲ್ಲಿ ವಿದೂಷಿ ಸಂಗೀತ ಕಟ್ಟಿಯವರು ಪರಂಪರಾ ಸಂಗೀತ ಸಂಜೆ ನಡೆಸಲಾಯಿತು.
ಹೆಸರಾಂತ ಸಂಗೀತ ವಿದೊಕ್ಷಿ ಸಂಗೀತ ಕಟ್ಟಿ ಹಾಗೂ ಅವರ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ, ಗಜಲ್, ಲಾವಣಿ, ಕನ್ನಡ ಹಾಗೂ ಹಿಂದಿ ಸಿನಿಮಾ ಗೀತೆಗಳ ಗಾಯನವನ್ನು ಬಹಳ ಸೊಗಸಾಗಿ ನಡೆಸಿಕೊಟ್ಟರು.
ರೋಟರಿ ಬೆಂಗಳೂರು ಜೆಪಿ ನಗರ ಸಂಸ್ಥೆಯಿಂದ ಸಿಎಸ್ ಆರ್ ಯೋಜನೆಯ ಅಡಿಯಲ್ಲಿ ಆರೋಹಣ 23- 24 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ನಮ್ಮ ಸೇವೆ ಮಾಡುತ್ತಿದ್ದೇವೆ. ರೋಟರಿ ಬೆಂಗಳೂರು ಸಂಸ್ಥೆ ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಅದರಲ್ಲಿ ಶಾಲೆಗಳ ಅಭಿವೃದ್ದಿ, ಮೂಲಭೂತ ಸೌಕರ್ಯ ಒದಗಿಸುವುದು, ಬಡವರಿಗೆ ವೈದ್ಯಕೀಯ ಸೇವೆ, 30ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್ ಯಂತ್ರ ಪೂರೈಕೆ, ಅಸ್ಪತ್ರೆಗಳಿಗೆ ಡೆಂಟಲ್ ಉಪಕರಣಗಳ ಕೊಡುಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಖಾಸಗಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ, ರಕ್ತ ದಾನದ ಶಿಬಿರ , ಮಹಿಳೆಯರಿಗೆ ಹೊಲಿಗೆ ಯಂತ್ರ ಸೇರಿದಂತೆ ಹತ್ತು ಹಲವು ಸಮಾಜದ ಮುಖಿಯಾಗಿ ಕೆಲಸಗಳನ್ನು ಮಾಡಿಕೊಂಡು ಜನಪರವಾಗಿ ಕಾಯಕ ನಡೆಸುತ್ತಿದ್ದಾರೆ.
ಬಡ ಮಕ್ಕಳ ಆರೋಗ್ಯಕ್ಕೆ ಬೇಕಾದ ಹಣಕಾಸಿನ ನೆರವಿನ ಸೌಲಭ್ಯ ಒದಗಿಸುವ, ಯಾರಿಗೆ ಮೂಲಭೂತ ಸಮಸ್ಯೆ ಇದೆ ಎಂದು ತಿಳಿದು ಸಹಾಯ ಮಾಡಲಾಗುತ್ತದೆ, ಕೊಡುಗೈ ದಾನಿಗಳು ಮಕ್ಕಳಿಗೆ ಬೇಕಾದ ವೈದುಕೀಯ ಸೇವೆಗೆ ಪ್ರತ್ಯಕ್ಷ, ಪರೋಕ್ಷ ವಾಗಿ ನೆರವಾಗುತ್ತಿದ್ದಾರೆ.
ಸಂಗೀತ ಕಾರ್ಯಕ್ರಮವನ್ನು ರೋಟರಿ ಬೆಂಗಳೂರು ಕ್ಲಬ್ ಆಯೋಜನೆ ಮಾಡಲಾಗಿತ್ತು, ಪ್ರತ್ಯಕ್ಷ ಹಾಗೂ ಪರಕ್ಷವಾಗಿ ಸಹಾಯ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಇದೇ ವೇಳೆ ರೋ.ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಕಾರ್ಯದರ್ಶಿಗಳಾದ ರಾಜೇಶ್ ಕುಮಾರ್, ರೋ. ರವಿ, ರೋ ರವಿ ಜಿಎಂ ಸೇರಿದಂತೆ ರೋಟರಿ ಬೆಂಗಳೂರು ಸದಸ್ಯರು, ಮತ್ತಿತ್ತರರು ಉಪಸ್ಥಿತರಿದ್ದರು.