ಬೆಂಗಳೂರು: ಶಿಕ್ಷಕರು ಮಾಹಿತಿ ಕಣಜವಿದ್ದಂತೆ, ಸಮಾಜವನ್ನು ತಿದ್ದುವ,ಬದಲಾಯಿಸುವ ಶಕ್ತಿ ಶಿಕ್ಷಕನಿಗಿದೆ. ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರ್ಯತೆಯುಳ್ಳದ್ದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಎಂಜಿನಿಯರಿಂಗ್ ನಿವೃತ್ತ ಪ್ರಾಧ್ಯಾಪಕ ಮತ್ತು ವಿಜ್ಞಾನಿ ಡಾ.ಕೆಪಿಜೆ ರೆಡ್ಡಿ. ಅಭಿಮತ ವ್ಯಕ್ತಪಡಿಸಿದರು .
ನಗರದ ಸಿಎಂಆರ್ ವಿಶ್ವವಿದ್ಯಾಲಯ ಒಎಂಬಿಆರ್ ಬಡಾವಣೆಯಲ್ಲಿರುವ ಸಿಎಂಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮತ್ತು ಗುರುವಂದನೆ ಸ್ವೀಕರಿಸಿ ಐಐಎಸ್ ಸಿ ವಿಜ್ಞಾನಿ ಡಾ.ಕೆಪಿಜೆ ರೆಡ್ಡಿ ಮಾತನಾಡಿದರು. ಸಮಾಜದ ಸರ್ವತೋಮುಖ ಬದಲಾವಣೆಗೆ ತುಡಿಯುವ ಶಿಕ್ಷಕ, ಕಲಿಕೆಯ ಪ್ರಯೋಗಶೀಲತೆಗೆ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಸಮಾಜ ಕಟ್ಟುವ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದು ಎಂದು ಶ್ಲಾಘಿಸಿದರು.
ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡಿದರು.
ನಂತರ ಮಾತನಾಡಿದ ಸಿಎಂಆರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಕೆ.ಸಿ ರಾಮಮೂರ್ತಿ ಅವರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜವೇ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು ಎಂದು ಹೇಳಿದರು.
ಸಿಎಂಆರ್ ವಿಶ್ವವಿದ್ಯಾಲಯದಿಂದ ಹೆಸರಾಂತ ಹಾಗೂ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತದೆ, ಅದೇ ರೀತಿ ಈ ಬಾರಿ ಸಹ ಮೂರು ಜನ ಶಿಕ್ಷಕರಿಗೆ ಅಭಿನಂದನೆ ಹಾಗೂ ಸನ್ಮಾನವನ್ನು ಮಾಡಲಾಯಿತು, ಇನ್ನು ಮುಂದಿನ ವರ್ಷದಲ್ಲಿ ಇದೇ ರೀತಿ ಶಿಕ್ಷಕ ಸಾಧಕರನ್ನು ಗುರುತಿಸಿ ಸನ್ಮಾನ ಹಾಗೂ ಅಭಿನಂದನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರು,ವಿದ್ಯಾರ್ಥಿಗಳ ನಡುವಿನ ಸಂಬಂಧ ಕಳೆದಿಲ್ಲ: ರಾಘವೇಂದ್ರ
ಸಿಎಂಆರ್ ವಿಶ್ವವಿದ್ಯಾಲಯದ ಕುಲತಿ ರಾಘವೇಂದ್ರ ಮಾತನಾಡಿ, ಶಿಕ್ಷಕರು ಹಾಗು ವಿದ್ಯಾರ್ಥಿಗಳ ನಡುವಿನ ಸಂಬಂಧ ಕಳೆದು ಹೋಗಿದೆ ಎಂದು ಹೇಳುತ್ತಾರೆ ಆದರೆ ನಾನು ಒಪ್ಪುವುದಿಲ್ಲ, ಅದು ಹಾಗೆ ಉಳಿಸಿಕೊಂಡಿದೆ, ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ಕೇವಲ ವಿದ್ಯಾರ್ಥಿಗಳಿಂದ ಮಾತ್ರ ಮಾಹಿತಿ ಸಿಗುತ್ತಿತ್ತು, ಆದರೆ ಪ್ರಸ್ತುತ ಕಾಲ ಬದಲಾದಂತೆ ಮಾಧ್ಯಮಗಳು ಸಾಕಷ್ಟು ಇವೆ. ಅದರಿಂದ ಮಾಹಿತಿ ಸಿಗುತ್ತಿವೆ.ಶಿಕ್ಷಕರಿಂದ ಕಲಿಕೆಯನ್ನು ವಿದ್ಯಾರ್ಥಿಗಳು ಯಾವಾಗಲೂ ಎದುರು ನೋಡುತ್ತಾರೆ, ಶಿಕ್ಷಕರು, ವಿದ್ಯಾರ್ಥಿಗಳು ನಡುವಿನ ಸಂಬಂಧ ಹಾಗೆ ಮುಂದುವರೆಯುತ್ತವೆ. ಮೊದಲು ಶಿಕ್ಷಕರನ್ನು ವಿದ್ಯಾರ್ಥಿಗಳು ಬಹಳ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅದೇ ರೀತಿ ಶಿಕ್ಷಕರು ಸಹಾ ವಿದ್ಯಾರ್ಥಿಗಳಿಗೆ ವಿಷಯ ತಿಳಿಯದ ಕಾರಣ ತಿಳಿಸಬೇಕಾಗುತ್ತದೆ.
ಶಿಕ್ಷಕರು ಹಾಗು ವಿದ್ಯಾರ್ಥಿಗಳ ಸಂಬಂಧ ಬಹಳ ಪರಂಪರೆಯಿಂದಲೂ ಸಹ ನಡೆದುಕೊಂಡು ಬಂದಿದೆ ಅದು ಹಾಗೆ ಮುಂದುವರೆಯುತ್ತದೆ, ಸಿಎಂಆರ್ ವಿಶ್ವವಿದ್ಯಾನಿಲಯದಲ್ಲಿ ಸುಮಾರು ಮಹಾನ್ 400 ಜನ ಶಿಕ್ಷಕರಿದ್ದು ಅದರಲ್ಲಿ ಅವರ ಪ್ರಾಮಿಣ್ಯತೆ ಆಧಾರದ ಮೇಲೆ 70 ಜನರಿಗೆ ಸನ್ಮಾನವನ್ನು ಮಾಡಲಾಯಿತು. ಅದರ ಜೊತೆ ಜೊತೆಯಲ್ಲಿಯೇ ಹೆಸರಾಂತ ಶಿಕ್ಷಕರನ್ನು ಕರೆಯಿಸಿ ಅವರಿಗೆ ಸನ್ಮಾನವನ್ನು ಸಹ ಸಿಎಂ ಅವರ ಸಂಸ್ಥೆಯಿಂದ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕರುಗಳನ್ನು ಆಡಳಿತ ಮಂಡಳಿ ಸನ್ಮಾನಿಸಿತು.
ಪ್ರೊ.ಕೆಪಿಜೆ ರೆಡ್ಡಿ, ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಎಂಜಿನಿಯರಿಂಗ್ ನಿವೃತ್ತ ಪ್ರಾಧ್ಯಾಪಕರು ಮತ್ತು ವಿಜ್ಞಾನಿ, ಪ್ರೊ.ಆರ್.ಎಸ್ ದೇಶಪಾಂಡೆ,ಮಾಜಿ ನಿರ್ದೇಶಕರು, ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೆಂಜ್,ಬೆಂಗಳೂರು. ಡಾ.ಕೆ.ಎನ್ ವೆಂಕಟ ಕೃಷ್ಣ ರಾವ್, ಮಾಜಿ ರಿಜಿಸ್ಟ್ರಾರ್, ಕುವೆಂಪು ಯೂನಿವರ್ಸಿಟಿ, ಕರ್ನಾಟಕ. ಇವರುಗಳನ್ನು ಡಾ.ಕೆ.ಸಿ ರಾಮಮೂರ್ತಿ, ಐಪಿಎಸ್ ( ನಿವೃತ್ತಿ), ಮಾಜಿ ರಾಜ್ಯಸಭಾ ಸದಸ್ಯರು, ಅಧ್ಯಕ್ಷರು ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಇವರು ಸನ್ಮಾನಿಸುವ ಮೂಲಕ ಶಿಕ್ಷಕ ಸಮುದಾಯಕ್ಕೆ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಪ್ರೊಚಾನ್ಸಲರ್ ಜಯದೀಪ್ ಕೆ.ಆರ್ ರೆಡ್ಡಿ, ಕಲಪತಿ ಡಾ.ಹೆಚ್.ಪಿ ರಾಘವೇಂದ್ರ ಅವರು ಸೇರಿದಂತೆ ಡೀನ್ ಗಳು ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.