ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ (JEE ) ಮೇನ್ಸ್ 2024ರ ಮೊದಲ ಸೆಶನ್ನಲ್ಲಿ ಆಕಾಶ್ ಬೈಜುಸ್ ಬೆಂಗಳೂರು ಶಾಖೆಯ 18 ವಿದ್ಯಾರ್ಥಿಗಳು 99ಕ್ಕಿಂತ ಹೆಚ್ಚಿನ ಪರ್ಸೆಂಟೈಲ್ ಹಾಗೂ ಇನ್ನೂ 4 ವಿದ್ಯಾರ್ಥಿಗಳು 98ಕ್ಕಿಂತ ಹೆಚ್ಚಿನ ಪರ್ಸೆಂಟೈಲ್ ಗಳಿಸಿದ್ದಾರೆ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಚಂದನ್ ಚಾಂದ್ ತಿಳಿಸಿದರು.
ಬೆಂಗಳೂರಿನ ರಾಜಾಜಿನಗರದ ಆಕಾಶ್ ಬೈಜುಸ್ ಕೇಂದ್ರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು.ವಿದ್ಯಾರ್ಥಿಗಳಾದ ಸಾನ್ವಿ ಜೈನ್ (99.99), ಕೃಷ್ಣ ಸಾಯಿ ಶಿಶಿರ್ ವುಪ್ಪಲಾ (99.98), ಅಭಿಷೇಕ್ ಜೈನ್ (99.92), ಕುನಾಲ್ ಪರೋಡಾ (99.89), ಕಪಿಲ್ ಪರೋಡಾ (99.54), ಮಾಧುರಿ ನಲ್ಲಬೋಯಿನಾ (99.42), ಕಾನಿಷ್ಕ್ ರವಿ ದೇಸಾಯಿ (99.31) ಅವರ ಸಾಧನೆ ಗಮನಾರ್ಹವಾಗಿದೆ.
ವಿದ್ಯಾರ್ಥಿಗಳು ಅತ್ಯುನ್ನತ ಅಂಕ ಗಳಿಕೆ ಸಾಧಿಸಿರುವುದು ಭಾರತದ ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರ ಅಚಲವಾದ ಬದ್ಧತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಈ ವರ್ಷ ಎಂಜಿನಿಯರಿಂಗ್ ಕೋರ್ಸ್ಗಳಿಗಾಗಿ ಎರಡು ಎಇಇ ಸೆಶನ್ಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತಿದ್ದು, ಮೊದಲ ಸೆಶನ್ನ ಫಲಿತಾಂಶಗಳನ್ನು ಸಂಸ್ಥೆಯು ಬಿಡುಗಡೆ ಮಾಡಿತು.
JEE ನಲ್ಲಿ ಆಕಾಶ್ ಬೈಜೂಸ್ ಸಂಸ್ಥೆ ವಿಶೇಷ ಸಾಧನೆ:
ಜಾಗತಿಕವಾಗಿ ಅತ್ಯಂತ ಸವಾಲಿನ ಪರೀಕ್ಷೆಯಾಗಿರುವ JEE ಯಲ್ಲಿ ಅತ್ಯುನ್ನತ ಸಾಧನೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಆಕಾಶ್ ಬೈಜೂಸ್ ತರಗತಿಗಳಿಗೆ ವಿದ್ಯಾರ್ಥಿಗಳು ಸೇರಿಕೊಂಡಿದ್ದು, ಮೂಲಭೂತ ಪರಿಕಲ್ಪನೆಗಳನ್ನು ಗ್ರಹಿಸಲು ಮತ್ತು ಶಿಸ್ತುಬದ್ಧ ಅಧ್ಯಯನದ ಕಟ್ಟುಪಾಡುಗಳನ್ನು ಅನುಸರಿಸಲು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ. ಈ ಬದ್ಧತೆಯು ಅವರು ಗಳಿಸಿದ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಪ್ರತಿಕ್ರಿಯಿಸಿ, “ಎರಡೂ ಅಂಶಗಳಲ್ಲಿ ನಮಗೆ ಸಹಾಯ ಮಾಡಿದ ಆಕಾಶ್ಗೆ ನಾವು ಕೃತಜ್ಞರಾಗಿರುತ್ತೇವೆ. ಸಂಸ್ಥೆಯ ಸಮಗ್ರ ವಿಷಯ ಮತ್ತು ತರಬೇತಿಯಿಲ್ಲದಿದ್ದರೆ, ಅಲ್ಪಾವಧಿಯಲ್ಲಿ ಹಲವಾರು ವಿಷಯಗಳ ಪರಿಕಲ್ಪನೆಗಳನ್ನು ಕಲಿಯುವುದು ಕಷ್ಟವಾಗುತ್ತಿತ್ತು” ಎಂದರು.
ವಿದ್ಯಾರ್ಥಿಗಳನ್ನುಅಭಿನಂದಿಸಿದ ಆಕಾಶ್ ಬೈಜುಸ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು, “ಸಮಗ್ರ ತರಬೇತಿ ಮತ್ತು ಕಲಿಕೆಯ ನವೀನ ಪರಿಹಾರಗಳ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಮತ್ತು ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಮಾಡಲು ಆಕಾಶ್ ಬೈಜು ಅವರು ತೋರುತ್ತಿರುವ ಬದ್ಧತೆಗೆ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಯು ನಿದರ್ಶನವಾಗಿದೆ. ಮುಂದಿನ ಪ್ರಯತ್ನಕ್ಕೆ ಮತ್ತು ಅವರ ಭವಿಷ್ಯಕ್ಕೆ ನಾವು ಅವರಿಗೆ ಶುಭ ಹಾರೈಸುತ್ತೇವೆ” ಎಂದು ಹೇಳಿದರು.
JEE ಪರೀಕ್ಷೆ ಬಗ್ಗೆ:
ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಅನೇಕ ಅವಕಾಶಗಳನ್ನು ಒದಗಿಸಲು JEE (ಮೇನ್ಸ್) ಅನ್ನು ಎರಡು ಸೆಶನ್ ಗಳಲ್ಲಿ ವಿನ್ಯಾಸಗೊಳಿಸಲಾಗಿದೆ. JEE ಅಡ್ವಾನ್ಸ್ಡ್ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಗಳಿಗೆ ಪ್ರವೇಶವನ್ನು ಸುಗಮಗೊಳಿಸಿದರೆ, ಎಇಇ ಮೇನ್ಸ್ ಭಾರತದಾದ್ಯಂತ ಹಲವಾರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (NITಗಳು) ಮತ್ತು ಇತರ ಕೇಂದ್ರ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಗೇಟ್ ವೇ ಆಗಿ ಕಾರ್ಯನಿರ್ವಹಿಸುತ್ತದೆ. JEE ಅಡ್ವಾನ್ಸ್ಡ್ ಬರೆಯಲು JEE ಮೇನ್ನಲ್ಲಿ ಭಾಗವಹಿಸುವುದು ಅಗತ್ಯವಾಗಿರುತ್ತದೆ.
ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವಿವಿಧ ಸ್ವರೂಪದ ಕೋರ್ಸ್ಗಳ ಮೂಲಕ ಸಮಗ್ರ IIT-JEE ತರಬೇತಿಯನ್ನು ಆಕಾಶ್ ಬೈಜುಸ್ ನೀಡುತ್ತದೆ. ಇತ್ತೀಚೆಗೆ, ಕಂಪ್ಯೂಟರ್ ಆಧಾರಿತ ತರಬೇತಿಯನ್ನು ಅಭಿವೃದ್ಧಿಪಡಿಸುವತ್ತ ಆಕಾಶ್ ಗಮನ ಹರಿಸಿದೆ. ಇದರ ನವೀನ ಐಟ್ಯೂಟರ್ ( iTutor) ವೇದಿಕೆಯು ಚಿತ್ರೀಕರಿಸಿದ ವೀಡಿಯೊ ಉಪನ್ಯಾಸಗಳನ್ನು ನೀಡುತ್ತದೆ, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ತಪ್ಪಿಹೋದ ಪಾಠಗಳನ್ನು ಮತ್ತೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಅಣಕು ಪರೀಕ್ಷೆಗಳು ನೈಜ ಪರೀಕ್ಷೆಯ ಪರಿಸ್ಥಿತಿಗಳನ್ನು ಅನುಕರಿಸುತ್ತವೆ, ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವಿದ್ಯಾರ್ಥಿಗಳಿಗೆ ಅವುಗಳ ಪರಿಚಯ ಮಾಡಿಕೊಟ್ಟು, ವಿಶ್ವಾಸದೊಂದಿಗೆ ಸಜ್ಜುಗೊಳಿಸುತ್ತವೆ.