ಬೆಂಗಳೂರು: ಎಸಿಪಿಗೆ ಟ್ವೀಟ್ ಮೂಲಕ ಬೆದರಿಕೆ ಹಾಕಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ನಗರ ಪೊಲೀಸರಿಗೆ ದೂರನ್ನು ಆಪ್ ಆಗ್ರಹ ಮಾಡಿದರು.
ಇತ್ತೀಚಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಕುರಿ ಮಾಂಸ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಪುನೀತ್ ಕೆರೆ ಹಳ್ಳಿಯ ಪರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟ್ ಮೂಲಕ ಎಸಿಪಿ ಚಂದನ್ ರವರಿಗೆ ಬೆದರಿಕೆ ಹಾಕಿರುವ ಕುರಿತಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷ ಹಾಗೂ ವಕೀಲ ಲೋಹಿತ್ ಕುಮಾರ್ ಇಂದು ಆಗ್ರಹಿಸಿದರು.
ಡಿಸಿಪಿ ಪಶ್ಚಿಮ ರವರಿಗೆ ದೂರನ್ನು ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಹಿತ್ ಕುಮಾರ್ ” ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರಿಗೆ ಪ್ರತಾಪ್ ಸಿಂಹ ತಮ್ಮ ಟ್ವೀಟ್ ಖಾತೆ ಮೂಲಕ ಈ ರೀತಿಯ ಬೆದರಿಕೆ ಹಾಕುವುದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ. ಪೊಲೀಸರ ಆತ್ಮಸ್ಥೈರ್ಯವನ್ನು ತನ್ನ ರಾಜಕೀಯ ಬಲದಿಂದ ಕುಗ್ಗಿಸಲು ಪ್ರಯತ್ನ ಸುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.