ಬೆಂಗಳೂರು :ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ವತಿಯಿಂದ ಜುಲೈ 4ಮತ್ತು 5ನೇ ರಂದು ಹಿಂದೂ ಸ್ವಾಭಿಮಾನಿ ರಥಯಾತ್ರೆ ಹಮ್ಮಿಕೊಂಡಿದ್ದು ಈ ವೇಳೆ ಹಿಂದೂ ಪರ ಹೋರಾಟ, ಹಿಂದೂ ಸಂಘಟನೆ ಶ್ರಮಿಸಿದರಿಗೆ ಹಿಂದೂ ಮಹಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದರು.
ಇದರಿಂದಲೇ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದವರು, ಮಹಾಸಭಾದಿಂದ ಸ್ವಾಭಿಮಾನಿ ರಥ ಯಾತ್ರೆಯನ್ನು ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗೆ ಶ್ರಮಿಸಿದವರಿಗೆ ಇಂದು ಮಹಾನ್ ಪ್ರಸ್ಥಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಚಕ್ರಪಾಣಿ ಮಹಾರಾಜ್ ರವರು, ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಗಳು, ಶ್ರೀ ಬ್ರಹ್ಮಾಂಡ ಗುರೂಜಿರವರು, ಶ್ರೀ ನಿಶ್ಚಲಾನಂದ ಸ್ವಾಮಿಗಳು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಮನೋಜ್ ಅಲುಂಗಲ್ ರವರು ಉದ್ಘಾಟನೆ ನೇರವೆರಿಸುವರು.
ಜುಲೈ 5ರಂದು ಬೆಳಗ್ಗೆ 9ಗಂಟೆಗೆ ರಾಜ್ಯಪಾಲರ ಭೇಟಿ ಮನವಿ ಪತ್ರ ಸಲ್ಲಿಕೆ ಹಾಗೂ ಸಂಜೆ 3ಗಂಟೆಗೆ ಕಾಡುಮಲ್ಲೇಶ್ವರ ದೇವಸ್ಥಾನ ವಿಶೇಷಪೂಜೆ ಸಲ್ಲಿಸಿ, 6ಗಂಟೆಗೆ ಅರಮನೆ ಮೈದಾನ ಕಿಂಗ್ಸ್ ಕೋರ್ಟ್ ನಲ್ಲಿ ಸಭಾ ಕಾರ್ಯಕ್ರಮ ನಡೆದಲಾಗುತ್ತದೆ ಎಂದು ತಿಳಿದರು.
ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ವಕೀಲರಾದ ಜಗದೀಶ್,ಯುವಕ ಸಭಾ ರಾಜ್ಯ ಅಧ್ಯಕ್ಷರಾದ ವಿಶ್ವನಾಥ್, ಮಹಿಳಾ ಮುಖಂಡರುಗಳಾದ ಸುನೀತಬಾಯಿ, ಸವಿತಾ, ಉಮಾ, ಮಂಜುಳರವರು ಭಾಗವಹಿಸಿದ್ದರು.
ಎರಡು ದಿನಗಳ ಕಾಲ ಹಿಂದೂಗಳ ಮಹಾ ಸಂಘಟನೆ ಸ್ವಾಭಿಮಾನಿ ರಥಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.