ಬೆಂಗಳೂರು: ರಕ್ಷಾ ಬಂಧನ ಹಬ್ಬವು ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯ ಆಚರಿಸುವ ವೇಳೆ ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯಂತಹ ಪೌಷ್ಟಿಕ ಆಹಾರಗಳನ್ನು ಬಳಸುವ ಮೂಲಕ ಈ ರಕ್ಷಾ ಬಂಧನವನ್ನು ಇನ್ನಷ್ಟು ಅರ್ಥವಾಗಿಸಿ.
ರಕ್ಷಾ ಬಂಧನವು ಹಬ್ಬದ ಋತುವಿಗೆ ನಾಂದಿ ಹಾಡುವುದರೊಂದಿಗೆ ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯದ ಸಂಭ್ರಮವನ್ನು ಆಚರಿಸುತ್ತದೆ, ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ತಮ್ಮ ಸಹೋದರಿಯರನ್ನು ಬೆಂಬಲಿಸುವುದಾಗಿ ಮತ್ತು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ, ಅವರ ಆರೋಗ್ಯ ಮತ್ತು ಸಂತೋಷವನ್ನು ಕಾಪಾಡುವುದಾಗಿ ಭರವಸೆ ನೀಡುತ್ತಾರೆ.
ಹಬ್ಬಗಳು ಮತ್ತು ಆಚರಣೆಗಳ ಮಧ್ಯೆ, ನಿಮ್ಮ ಆರೋಗ್ಯದ ಮೇಲೆ ಸಿಹಿ ತಿನಿಸುಗಳು ಮತ್ತು ಅನಾರೋಗ್ಯಕರ ಖಾದ್ಯಗಳು ಬೀರುವ ಪ್ರಭಾವವನ್ನು ಪರಿಗಣಿಸದೆಯೇ ಅವುಗಳನ್ನು ಅತಿಯಾಗಿ ಸೇವಿಸುವುದು ಸಾಮಾನ್ಯವಾಗಿದೆ. ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆಯು ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯದ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಸೂಕ್ತವಾದ ಆಹಾರದ ಆಯ್ಕೆಗಳನ್ನು ಮಾಡುವುದು ಮಹತ್ವದ್ದಾಗಿದೆ.
ಆರೋಗ್ಯ ದೃಷ್ಟಿಯಿಂದ, ಬಾದಾಮಿಯಂತಹ ಆರೋಗ್ಯಕರ ಆಯ್ಕೆಗಳನ್ನು ಪರಿಗಣಿಸಲು ಮರೆಯದಿರಿ. ಬಾದಾಮಿಯು ಅತ್ಯಂತ ಪೌಷ್ಟಿಕವಾಗಿದೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಡಿಎಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಹೃದಯದ ಅತ್ಯುತ್ತಮ ಆರೋಗ್ಯ ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲದೇ, ಸಂಸ್ಕರಿಸಿದ ಸಕ್ಕರೆಯ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವುದನ್ನು ಪರಿಗಣಿಸಿ ಮತ್ತು ಎಣ್ಣೆಯಲ್ಲಿ ಕರಿದ ಖಾದ್ಯಗಳ ಬದಲಿಗೆ ಬೇಯಿಸಿದ ಖಾದ್ಯ ನಿಮ್ಮ ಆಯ್ಕೆಯಾಗಿರಲಿ. ಚಿಂತನಶೀಲ ಆಯ್ಕೆಗಳ ಮೂಲಕ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಆಚರಣೆಗಳನ್ನು ಆನಂದಿಸಬಹುದು.
ರಕ್ಷಾ ಬಂಧನದಲ್ಲಿ ಸಿಹಿ ಖಾದ್ಯ ಅಗ್ರಗಣ್ಯ
ಪೋಷಣೆ ಮತ್ತು ಸ್ವಾಸ್ಥ್ಯ ಸಲಹೆಗಾರ್ತಿ ಶೀಲಾ ಕೃಷ್ಣಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡುತ್ತಾ, “ರಕ್ಷಾ ಬಂಧನದ ಸಂದರ್ಭದಲ್ಲಿ ಸಿಹಿಖಾದ್ಯಗಳು ಅಗ್ರಗಣ್ಯವಾಗಿವೆ. ಆದರೆ, ಅನೇಕರು ರಕ್ತದ ಸಕ್ಕರೆ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮವನ್ನು ನಿರ್ಲಕ್ಷಿಸುತ್ತಾರೆ. ಸಕ್ಕರೆಯುಕ್ತ ಪದಾರ್ಥಗಳ ಅತಿಯಾದ ಸೇವನೆಯು ಗ್ಲೂಕೋಸ್ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಮಧುಮೇಹ ಅಥವಾ ಪೂರ್ವ-ಮಧುಮೇಹ ಸ್ಥಿತಿಯನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅನುಭವಿ ಪೌಷ್ಟಿಕತಜ್ಞೆಯಾಗಿ, ಬಾದಾಮಿ, ತಾಜಾ ಹಣ್ಣುಗಳು, ಇತ್ಯಾದಿ ನೈಸರ್ಗಿಕ, ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುವ ಮೂಲಕ ವಿವೇಚನಾಯುಕ್ತ ಆಹಾರ ಸೇವನೆಯ ಅಭ್ಯಾಸವನ್ನು ಬೆಳಸಿಕೊಳ್ಳಲು ನಾನು ಶಿಫಾರಸು ಮಾಡುತ್ತೇನೆ. ಬಾದಾಮಿಯು ಪ್ರೋಟೀನ್ ಮತ್ತು ಆಹಾರದ ನಾರಿನಂಶವನ್ನು ಸಮೃದ್ಧವಾಗಿ ಹೊಂದಿದೆ, ಇದು ಆರೋಗ್ಯಕರ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಬಾದಾಮಿಯನ್ನು ಆರೋಗ್ಯಕರ ಆಹಾರದ ಭಾಗವಾಗಿಸಿಕೊಳ್ಳುವುದರಿಂದ ಗ್ಲೈಸೆಮಿಕ್ ಮತ್ತು ಹೃದಯದ ಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಟೈಪ್ II ಮಧುಮೇಹ ಮತ್ತು ಪೂರ್ವ-ಮಧುಮೇಹ ಹೊಂದಿರುವ ಭಾರತೀಯರ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ” ಎಂದು ಹೇಳಿದರು.