ಬೆಂಗಳೂರು: ಸಮಾಜದಲ್ಲಿ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಬಾತೃತ್ವವನ್ನೂ ಹೊಂದಿರುತ್ತಾರೆ, ಆದರೆ ಬಾಬಾಸಾಹೇಬರು ಸಂವಿಧಾನ ಬಾತೃತ್ವವನ್ನು ಹೊಂದಿದ್ದರು, ಅದನ್ನು ಚರ್ಚೆಗಳಲ್ಲಿ ಕಾನೂನು ಬಗ್ಗೆ ಮಾತನಾಡಿದ್ದಾರೆ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಭಾರತದ ವಿವಿಯ ಉಪ ಕುಲಪತಿ ಪ್ರೊ. ಡಾ.ಸುಧೀರ್ ಕೃಷ್ಣ ಸ್ವಾಮಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕಾನೂನು ಶಾಲೆಯ ಭಾರತದ ವಿವಿಯ ಉಪ ಕುಲಪತಿ ಪ್ರೊ. ಡಾ.ಸುಧೀರ್ ಕೃಷ್ಣ ಸ್ವಾಮಿ ಅಂಬೇಡ್ಕರ ಅವರು 134ನೇ ಜಯಂತಿ ಉದ್ಘಾಟನೆ ಮಾಡಿ, ಬಾಬಾಸಾಹೇಬ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, CPRI ಸಂಸ್ಥೆ ವಿದ್ಯುತ್ ಉಪಕರಣ ತಯಾರಿಕೆಯಲ್ಲಿ ಸಾಕಷ್ಟು ಹೆಗ್ಗಳಿಕೆ ಗಳಿಸಿದೆ. ಅಂಬೇಡ್ಕರ ಅವರು ಸರ್ವಾಂತರ್ಯಾಮಿ ಆಗಿದ್ದಾರೆ. ಅಂಬೇಡ್ಕರ ಅವರು ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ವಿರೋಧಿಗಳು ಆಗಿದ್ದರು. ಅವರೊಬ್ಬ ಐತಿಹಾಸಿಕ ವಾಗಿ ಉಳಿದಿದ್ದಾರೆ. ಸಮಾಜದಲ್ಲಿ ಒಬ್ಬಬ್ಬರು ಒಂದೊಂದು ಬಾತೃತ್ವವನ್ನೂ ಹೊಂದಿರುತ್ತಾರೆ ಆದರೆ ಬಾಬಾಸಾಹೇಬರು ಸಂವಿಧಾನ ಬಾತೃತ್ವವನ್ನು ಹೊಂದಿದ್ದರು, ಅದನ್ನು ಚರ್ಚೆಗಳಲ್ಲಿ ಕಾನೂನು ಬಗ್ಗೆ ಮಾತನಾಡಿದ್ದಾರೆ.
ಈಗಾಗಲೇ ದೇಶ ಪ್ರಜಾಪ್ರಭುತ್ವ ಪಾಲಿಸುತ್ತಿದೆ, ಅದರ ಜೊತೆಗೆ ಕಾನೂನು ಪಾಲಿಸಬೇಕು, ಸಂವಿಧಾನವನ್ನು ರಾಜಕೀಯದಿಂದ ದೂರವಿಡಬೇಕು. ನಾವೆಲ್ಲರೂ ಕಾನೂನನ್ನು ಗೌರವಿಸಬೇಕು, ಅದು ಹೇಗೆ ಎಂಬುದು ಬಹಳ ಮುಖ್ಯವಾಗಿದೆ. ಸಂವಿಧಾನದಿಂದ ಸಾಕಷ್ಟು ಕ್ರಾಂತಿಗಳು ನಡೆದಿವೆ, ಆದರೆ ರಕ್ತ ಕ್ರಾಂತಿ ಬೇಡ, ಅಂಬೇಡ್ಕರ ಅವರು ರಿಪಬ್ಲಿಕನ್ ಪಾರ್ಟಿ ಪ್ರಾರಂಭ ಮಾಡಿದರು, ಸಂವಿಧಾನದ ಸಾಮಾಜಿಕ ತಳಹದಿ ಹಾಕಿದವರು ಬಾಬಾಸಾಹೇಬರು, ಸಾಮಾಜಿಕ ಸಮಾನತೆಗಾಗಿ ಹೋರಾಡಿದ್ದಾರೆ. ರಾಜಕೀಯ ಒಳಿತಿನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು. ಲಿಬರ್ಟಿ, ಸಮಾನತೆ, ಫೆಟರ್ನಿಟಿ ಬಗ್ಗೆ ತಿಳಿಯಬೇಕು ಎಂದರು.
ಕೇವಲ ಸಮಾಜದಲ್ಲಿನ ಸಮಾನತೆ, ಜಾತಿ ವ್ಯವಸ್ಥೆ, ಬಗ್ಗೆ ಹೋರಾಟ ಮಾಡಿರಲಿಲ್ಲ ಅದರ ಜೊತೆಗೆ ಆರ್ಥಿಕತೆ ಬಗ್ಗೆಯೂ ತಿಳಿದುಕೊಂಡಿದ್ದರು. ಅಂದಿನ ಪ್ರಧಾನಿ ನೆಹರು ಅವರು ಜೊತೆ ಅಂಬೇಡ್ಕರ ಅವರು ಸಮಾನತೆಯಲ್ಲಿ ರಾಷ್ಟ್ರ ಕಟ್ಟಲು ಮುಂದಾಗಿದ್ದರು ಎಂಬುದು ಬಹಳ ಮುಖ್ಯವಾಗಿತ್ತು.
ಸುಧಾಕರ್ ರೆಡ್ಡಿ ಎಸ್, cpri ನಿರ್ದೇಶಕರು ಮಾತನಾಡಿ, ಅಂಬೇಡ್ಕರ ಅವರ ಕೊಡುಗೆ ದೇಶಕ್ಕೆ ಬಹಳ ಇದೆ, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು, ಸಂವಿಧಾನ ಕಟ್ಟಿದವರು, ಅಸ್ಪಶ್ಯತೆ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಮೇಲ್ ಜಾತಿ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದಾರೆ, ಯಾರು ಮೇಲ್ವರ್ಗದವರು ಯಾರು ಕೆಳವರ್ಗದವರು ಎಂಬುದನ್ನು ಕಿತ್ತು ಹಾಕಿದವರು.ಕಡು ಬಡತನದಲ್ಲಿ ಹುಟ್ಟಿ ದೇಶಕ್ಕೆ ಮಾದರಿಯಾಗಿದ್ದಾರೆ. ಅಂಬೇಡ್ಕರ ಅವರನ್ನು ಬಣ್ಣಿಸಿದರು.
CPRI ನ ಮಹಾ ನಿರ್ದೇಶಕರಾದ ಸವಾಲೇ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಬರೋಡ ಶಾಲೆಯಲ್ಲಿ ಓದುತ್ತಿಬೇಕಾದರೆ ಸಾಕಷ್ಟು ಅವಮಾನವನ್ನು ಅನುಭವಿಸಿದ್ದಾರೆ ಮೇಲ್ವರ್ಗದವ ರಿಂದ . ಅವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಅದರಲ್ಲೂ ಮಹಾರಾಷ್ಟ್ರ ಸರ್ಕಾರ ಪುಸ್ತಕ ಹೊರತಂದಿದೆ. ಜಾತಿ ಅಸಮಾನತೆಯಲ್ಲಿ ಇದ್ದಾಗ ಅಂಬೇಡ್ಕರ ಅವರು ಅವಮಾನ, ಅಪಮಾನ ಅನುಭವಿಸಿದ್ದಾರೆ. ಲಾಹೋರಿನಲ್ಲಿ ಜಾತೀಯತೆ ಬಗ್ಗೆ ಮಾತನಾಡಲು ಕರೆಸಿದಾಗ ಅಂಬೇಡ್ಕರ ಅವರು ಮಾತನಾಡಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸು ಮೂಲಕ ಮೇಲ್ವರ್ಗದವರ ಶೆಡ್ಡು ಹೊಡೆದಿದ್ದಾರೆ.
ಕುಡಿಯುವ ನೀರಿಗೂ ಅಂಬೇಡ್ಕರ್ ಮಾನಸಿಕವಾಗಿ ಕಷ್ಟ ಅನುಭವಿಸಿದ್ದಾರೆ. ಅಂಬೇಡ್ಕರ ಅವರನ್ನು ಎಲ್ಲರೂ ನೆನಸಿಕೊಳ್ಳಬೇಕು, ದೇಶದಲ್ಲಿ ತಲೆದೋರಿದ್ದ ಜಾತಿ ಅವ್ಯವಸ್ಥೆಯಲ್ಲಿ ದಲಿತರಿಗೆ ಮೇಲೇಳಲು ಧೈರ್ಯ ತುಂಬಿ ಹೇಳಿದ್ದರು.
CPRI ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗದ CBSC ಮತ್ತು ICSC ಮಕ್ಕಳು SSLC ಹಾಗೂ PUC ಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುಜ್ಜಲ ಬಾಲರಾಜು, CPRI ನ ಅಡಿಷನಲ್ ನಿರ್ದೇಶಕ, ಪ್ರೊ.ಡಾ.ಸುಧೀರ್ ಕೃಷ್ಣ ಸ್ವಾಮಿ ಕಾನುನು ಶಾಲೆಯ ಉಪ ಕುಲಪತಿ
ಸವಾಲೇ CPRI ನ ಸಾಮಾನ್ಯ ನಿರ್ದೇಶಕರು ಸೇರಿ ಮತ್ತಿತರು ಉಪಸ್ಥಿತರಿದ್ದರು.