ಬೆಂಗಳೂರು: ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಮಾಡುವುದು ರೂಡಿಯಲ್ಲಿದೆ. ಆದರೆ ಸಂವಿಧಾನ ಬಳಗದಿಂದ ಏಪ್ರಿಲ್ 13 ಮಧ್ಯರಾತ್ರಿ ವಿಶೇಷವಾಗಿ ರಾಜ್ಯದಲ್ಲಿಯೇ ಮೊದಲ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಸಂವಿಧಾನ ಬರೆದ ಅಧ್ಯಕ್ಷ ಜಯಕಾಂತ ಚಾಲುಕ್ಯ ತಿಳಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು, ರಾಜ ದೇಶದಲ್ಲಿ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡುವುದು ರೂಢಿಯಲ್ಲಿದೆ ಆದರೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಂವಿಧಾನ ಬಳಗದಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ 13ರ ಮಧ್ಯರಾತ್ರಿಯಂದ ವಿಶೇಷವಾಗಿ ಆಚರಣೆ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲ ಸಂಘಟನೆಯಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಹೊಸ ವರ್ಷ ಆಚರಣೆಯನ್ನು ಪ್ರತಿವರ್ಷವು ಸಹ ಡಿಸೆಂಬರ್ 31ರಂದು ಜನಸಾಮಾನ್ಯರೆಲ್ಲರೂ ಸಹ ಮಧ್ಯರಾತ್ರಿಯಿದ ಆಚರಣೆ ಮಾಡುತ್ತಾರೆ, ಆದರೆ ದೇಶದ ನಾಗರಿಕರು, ಹಿಂದುಳಿದವರು ಜನಸಾಮಾನ್ಯರು ಆಚರಿಸಬೇಕೆಂದಂತಹ ದಿನ ಎಂದರೆ ಏಪ್ರಿಲ್ 14ರಂದು ಅಂದರೆ ಅಂದು ಅಂಬೇಡ್ಕರ್ ಜಯಂತಿ ಇದೆ ಎಲ್ಲಾ ದಲಿತರಿಗೂ ಹೊಸ ವರ್ಷ ಆಚರಣೆ, ಹೀಗಾಗಿ ಅಂಬೇಡ್ಕರ್ ಜಯಂತಿಯನ್ನು ವೈಭವೀಕರಣವಾಗಿ ಅದ್ಭುತವಾಗಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಒಂದು ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಮಾಡುತ್ತಿದ್ದು ಎಲ್ಲಾ ರಾಜಕೀಯ ಮುಖಂಡರು, ನಾಯಕರು, ಅಧಿಕಾರಿ ವರ್ಗದವರು, ನಾಡಿನ ಚಿಂತಕರು, ಹೋರಾಟಗಾರರು, ಅನೇಕ ದಲಿತ ಪರ ಸಂಘಟನೆಗಳು ಅಂಬೇಡ್ಕರ್ ಅಭಿಮಾನಿಗಳು ಸಂವಿಧಾನದ ಅಭಿಮಾನಿಗಳು, ಜನಸಾಮಾನ್ಯರು ಎಲ್ಲಾ ಧರ್ಮದವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.