ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿ ಹಿನ್ನೆಲೆ ನಗರ ಸಾರಿಗೆ ನಿಗಮದಲ್ಲಿ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ಬೆಂ.ಮ.ಸಾ.ಸoಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ 126ನೇ ಮಹಾ ಪರಿನಿರ್ವಾಣ ದಿನದ ಸರಳ ಸಮಾರಂಭದಲ್ಲಿ , ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿದರು.
ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ.ಜಿ., ಭಾ.ಆ.ಸೇ, ರವರು ಹಾಗೂ ನಿರ್ದೇಶಕರು(ಭ&ಜಾ)ರವರಾದ ಕಲಾಕೃಷ್ಣಸ್ವಾಮಿ, ಭಾ.ಪೋ.ಸೇ. ರವರು ಭಾಗವಹಿಸಿ, ಅನಂತರ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ೨ ನಿಮಿಷಗಳ ಕಾಲ ಮೌನಾಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.