ಬೆಂಗಳೂರು: ಕರ್ನಾಟಕ ರಾಜ್ಯ ಸಂವಿಧಾನ ಬಳಗದಿಂದ ಡಾ. ಬಿಅರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯನ್ನು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಸಂಭ್ರಚರಣೆ ಮಾಡಿದರು.
ದಲಿತರ ಪಾಲಿನ ಹೊಸ ಆಶಾಕಿರಣ, ಹೊಸ ವರ್ಷಾಚರಣೆಯನ್ನು ಅಂಬೇಡ್ಕರ್ ಅವರ ಹುಟ್ಟಿದ ದಿನದಂದು ಆಚರಣೆ ಮಾಡಲಾಗುತ್ತದೆ, ಏಪ್ರಿಲ್ 13ರಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ವರ್ಲ್ಡ್ ನಾಲೆಡ್ಗ್ ಅಕ್ಷರದಲ್ಲಿ ಕೇಕ್ ಕತ್ತರಿಸುವ ಮೂಲಕ ವಿಭಿನ್ನವಾಗಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ದಲಿತ ಹೋರಾಟಗಾರ ವೆಂಕಟಸ್ವಾಮಿ ಮಾತನಾಡಿ, ಈ ದೇಶದಲ್ಲಿ ಅಂಬೇಡ್ಕರ್ ಜನ್ಮ ತಾಳದಿದ್ದಾರೆ ಏನಾಗುತ್ತಿತ್ತು?, 134 ವರ್ಷದಿಂದ ಪ್ರಜ್ವಲಿಸುತ್ತಿದ್ದಾರೆ ಅಂಬೇಡ್ಕರ್, ಅಂಬೇಡ್ಕರ್ ಅವರ ವ್ಯಕ್ತಿತ್ವ ತಿಳಿದಿರುವುದು ಎಲ್ಲರಿಗೂ ಗೊತ್ತು, 126ನೆ ಜಯಂತಿಯನ್ನು ವಿಶ್ವ ಜ್ಞಾನದ ದಿನ ಎಂದು ಕರೆದಿದೆ WHO, ಅನೇಕ ವಿವಿಗಳು ಬುದ್ಧಿ ಜೀವಿ ಎಂದು ಅಂಬೇಡ್ಕರ್ ಅವರಿಗೆ ಗೌರವ ಕೊಡಲಾಗಿದೆ. ಅವರ ಬೆಳಕನ್ನು ಯಾರು ತಡೆಯಲು ಸಾಧ್ಯವಿಲ್ಲ.
ಅಂಬೇಡ್ಕರ್ ಅವರು ಹುಟ್ಟಿದ್ದೇ ಕಷ್ಟಕರ ಸನ್ನಿವೇಶದಲ್ಲಿ , ಆದರೆ ವಿಶ್ವಕ್ಕೆ ಜ್ಞಾನದ ದೀಪವಾಗಿ ಬೆಳೆದು ಮಾದರಿಯಾಗಿದ್ದಾರೆ. ದಲಿತರಿಗೆ ಜ್ಞಾನ ದೀಪವಾಗಿ ಬೆಳಕುತ್ತಿದ್ದಾರೆ ನಿತ್ಯವೂ, ಇಂತಹ ದಲಿತರೆಲ್ಲರು ಒಂದೊದು ರೂಪಾಯಿ ಕೂಡಿ ಹಾಕಿ ಚಿನ್ನದ ಪ್ರತಿಮೆಯನ್ನು ಮುಂದಿನ ದಿನಗಳಲ್ಲಿ ಮಾಡಬೇಕಾಗಿದೆ ಎಂಬುದು ನಮ್ಮ ಆಸೆಯಾಗಿದೆ ಎಂದರು.
ಪೊಲೀಸ್ ಅಧಿಕಾರಿ ಸಿದ್ದರಾಜು ಮಾತನಾಡಿ, ಮನುಷ್ತ್ವದ ಘನತೆ ತರುವ ಕೆಲಸ ಮಾಡಿದರೆ, ಅಂಬೇಡ್ಕರ್ ಅವರು ಬದುಕುವ ಹಕ್ಕನ್ನು ಎಲ್ಲರಿಗೂ ಎಲ್ಲಾ ರೀತಿಯಿಂದಲೂ ಕೊಟ್ಟಿದ್ದಾರೆ. ಸಂವಿಧಾನದ ದ್ಯೆಯೋದ್ದೇಶಗಳೇನು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅವರ ಕೊಡುಗೆಗಳು ಜಗತ್ತಿಗೆ ಗೊತ್ತಿದೆ, ವಿಪರ್ಯಾಸವೆಂದರೆ ದೇಶದ ನಾಗರಿಕರಿಗೆ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ, ಅದು ದುರದೃಷ್ಟಕರ ಸಂಗತಿ ಎಂದರು. ದೇಶದ ಸಂಪತ್ತು ಸಮ ಬಾಳುವಿನಲ್ಲಿ , ಕರ್ನಾಟಕ ನಿಪ್ಪಾಣಿಯಲ್ಲಿ ಬಹಿಕೃತ ಹಿತಕಾರಿಣಿ ಸಭಾವನ್ನು ಅಂದೆ ಮಾಡಿದ್ರು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರ ಆಶಯಗಳನ್ನು ಎಲ್ಲರೂ ಮೈಗುಡಿಸಿಕೊಳ್ಳಬೇಕಾಗಿದೆ. ಕೇವಲ ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲದೆ ಸರ್ವ ಜನಾಂಗಕ್ಕೂ ಸಹ ಶಾಂತಿಯ ತೋಟವಾಗಿ ಬೆಳಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಬಳಗದ ಅಧ್ಯಕ್ಷ ಚನ್ನಕೇಶವ ಚಾಲುಕ್ಯ, ಹೋರಾಟಗಾರ ವೆಂಕಟಸ್ವಾಮಿ, ಮೋಹನ್ ರಾಜ್, ಮದನ್ ಪಟೇಲ್, ಡಿಸಿಪಿ ಸಿದ್ದರಾಜು, ರುದ್ರೇಶ್, ಮಹೇಂದ್ರ ಮಂಕಾಳೆ, ವೆಂಕಟರಮಣ ಬಾಬ ಸೇರಿದಂತೆ ಅನೇಕ ದಲಿತಪರ ಸಂಘಟನೆಗಳ ಮುಖಂಡರು, ನಾಯಕರು, ಕಾರ್ಯಕರ್ತರು ಭಾಗಿ ಯಾಗಿದ್ದರು.