ಬೆಂಗಳೂರು: ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಕಿರ್ಗಿಸ್ತಾನದಲ್ಲಿ ಅತ್ಯುತ್ತಮ ಅವಕಾಶ ಕಲ್ಪಿಸಲಾಗುತ್ತಿದೆ. ಭಾರತ ಮತ್ತು ಕಿರ್ಗಿಸ್ತಾನ ನಡುವಿನ ಸಹಭಾಗಿತ್ವದಲ್ಲಿ ಈ ಕೋರ್ಸುಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ವೃತ್ತಿ ಶಿಕ್ಷಣಕ್ಕೆ ಉತ್ತಮ ವೇದಿಕೆಯನ್ನು ಒದಗಿಸಲಾಗುತ್ತಿದೆ ಎಂದು ಪಿಜಿ ಮೆಡಿಕಾ ಓವರ್ಸಿಸ್ ನಿರ್ದೇಶಕರಾದ ಮಸೂದ್ ಹುಸೇನ್, ವಾಸೀಫ್ ನಿಸಾರ್ ತಿಳಿಸಿದರು.
ಬೆಂಗಳೂರಿನ ಕಲ್ಯಾಣ್ ನಗರದ ವಿಂಗ್ಸ್ ಹೌಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪಿಜಿ ಮೆಡಿಕಾ ಓವರ್ ಸೀಸ್ ಸಂಸ್ಥೆಯು ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿತು.ಈ ವರ್ಷ 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು, ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸುಗಳಿಗೆ ಸರ್ಕಾರಿ ಕೋಟಾದ ಸೀಟುಗಳು ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಆಕಾಂಕ್ಷೆ ಹೊಂದಿದ್ದರೂ ಸರ್ಕಾರಿ ಕೋಟಾದಲ್ಲಿ ಸೀಟು ಸಿಗದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಿರ್ಗಿಸ್ತಾನದಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡುವ ಕೆಲಸವನ್ನು ಪಿಜಿ ಮೆಡಿಕಾ ಓವರ್ ಸೀಸ್ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಪಿಜಿ ಮೆಡಿಕಾ ಓವರ್ ಸೀಸ್ ಸಂಸ್ಥೆಯು ಕಡಿಮೆ ಆದಾಯವಿರುವ ಕುಟುಂಬಗಳ ಮಕ್ಕಳಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕಿರ್ಗಿಸ್ತಾನ ಸರ್ಕಾರದೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ ಎಂದರು.
ಎಂಸಿಐ ಮಾರ್ಗಸೂಚಿ ಪ್ರಕಾರ ವೈದ್ಯಕೀಯ ಶಿಕ್ಷಣ ಪ್ರವೇಶ
ನೀಟ್ ಪರೀಕ್ಷೆಯಲ್ಲಿ ಎಂಸಿಐ ಮಾರ್ಗಸೂಚಿ ಪ್ರಕಾರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಪ್ರತಿಷ್ಠಿತ ಕಿರ್ಗಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಶುಲ್ಕಗಳೊಂದಿಗೆ ಎಂಬಿಬಿಎಸ್ ಪದವಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಐ ಅರಬೇವ್ ವಿಶ್ವವಿದ್ಯಾಲಯ (ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ) ಮತ್ತು ಕಿರ್ಗಿಸ್ ನ್ಯಾಷನಲ್ ಅಗ್ರೇರಿಯನ್ ಯುನಿವರ್ಸಿಟಿ ಕೆ.ಐ. ಸ್ಕ್ರಯಾಬಿನ್ ಸೇರಿವೆ.
ಕಿರ್ಗಿಸ್ಥಾನದಲ್ಲಿ ವೈದ್ಯಕೀಯ ಯುನಿವರ್ಸಿಟಿಗಳ ವಿವರ:
* ಸೋಲ್ಟೇವ್ ತಲಂಟ್ಕ್ ಬೆಕ್, ಅಫಿಶಿಯಲ್ ರೆಪ್ರೆಸೆಂಟೇಟಿವ್ ಪಿಜಿ ಮೆಡಿಕಾ ಓವರ್ ಸೀಸ್, ಬಿಶ್ಕೆಕ್, ಕಿರ್ಗಿಸ್ತಾನ.
*ಜುಮಾಬೆಕೊವ್ ಜೂಮಾರ್ತ್ ಬೆಕ್, ಅಫಿಶಿಯಲ್ ರೆಪ್ರೆಸೆಂಟೇಟಿವ್ ಪಿಜಿ ಮೆಡಿಕಾ ಓವರ್ ಸೀಸ್, ಬಿಶ್ಕೆಕ್, ಕಿರ್ಗಿಸ್ತಾನ.
*ಇರ್ಗಾಶೆವ್ ಅಲ್ಮಾಝ್ಬೆಕ್, ಫಸ್ಟ್ ವೈಸ್ ರೆಕ್ಟರ್ ಆಫ್ ಕಿರ್ಗಿಸ್ ನ್ಯಾಷನಲ್ ಅಗ್ರೇರಿಯನ್ ಯುನಿವರ್ಸಿಟಿ (ಕೆ.ಐ. ಸ್ಕ್ರೆಯಾಬಿನ್).
*ಐಗುಲ್ ಅಬ್ಡ್ರಾವಾ, ರೆಕ್ಟರ್ ಆಫ್ ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ ಐ ಅರಾಬೆವ್, ಬಿಶ್ಕೆಕ್, ಕಿರ್ಗಿಸ್ತಾನ.
*ತಲಾಂಟ್ಬೆಕ್ ಕುರ್ಮಾನ್ಬೆಕ್ ಊಲು, ವೈಸ್ ರೆಕ್ಟರ್ ಆಫ್ ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ ಐ ಅರಾಬೆವ್, ಬಿಶ್ಕೆಕ್, ಕಿರ್ಗಿಸ್ತಾನ.
*ಡ್ಯಾಮಿರ್ ಸುಲೈಮಾನೊವ್, ಪಿಆರ್ ಡೈರೆಕ್ಟರ್ ಆಫ್ ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ ಐ ಅರಾಬೆವ್, ಬಿಶ್ಕೆಕ್, ಕಿರ್ಗಿಸ್ತಾನ.
*ರಕ್ಹತ್ ರಾಯ್ ಕ್ಸಿ, ಹೆಡ್ ಆಫ್ ಇಂಟರ್ ನ್ಯಾಷನಲ್ ಡಿಪಾರ್ಟ್ ಮೆಂಟ್ ಆಫ್ ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ, ಐ ಅರಾಬೆವ್, ಬಿಶ್ಕೆಕ್, ಕಿರ್ಗಿಸ್ತಾನ.
ಕಿಗ್ರಿಸ್ತಾನದೊಂದಿಗಿನ ಈ ಸಹಭಾಗಿತ್ವವು ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಕೈಗೆಟುಕುವ ದರದಲ್ಲಿ ಬೋಧನಾ ಶುಲ್ಕಗಳು, ಅಂತಾರಾಷ್ಟ್ರೀಯ ವೈದ್ಯಕೀಯ ಮಂಡಳಿಗಳಿಂದ ಪದವಿಗಳಿಗೆ ಮಾನ್ಯತೆ, ಆಧುನಿಕ ಮೂಲಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ, ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ, ಕ್ಲಿನಿಕಲ್ ಎಕ್ಸ್ ಪೋಸರ್, ವೈವಿಧ್ಯಮಯ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯ, ಸುರಕ್ಷಿತ ವಾತಾವರಣ ಮತ್ತು ಕಡಿಮೆ ವೆಚ್ಚದ ಜೀವನ ಸೇರಿವೆ. ವಿದ್ಯಾರ್ಥಿಗಳಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ಸಹ ನೀಡಲಾಗುವುದು ಗುಣಮಟ್ಟದ ಆಹಾರ ಒದಗಿಸಲಾಗುವುದು ಅಲ್ಲವೇ ವಸತಿ ವ್ಯವಸ್ಥೆಯಲ್ಲೂ ಸಹ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ದೀಕ್ಷಾದಲ್ಲಿಯೂ ಸಹ ಅವಕಾಶವನ್ನು ನೀಡಲಾಗುತ್ತದೆ. ಕಿರ್ಗಿಸ್ತಾನದಲ್ಲಿ ಮೆಡಿಕಲ್ ಓದಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸೇರಿದಂತೆ ದೇಶದಲ್ಲಿ ವಿಫಲವಾದಂತಹ ಅವಕಾಶಗಳು ದೊರೆಯುತ್ತವೆ ಎಂದರು.
ಸುವ್ಯಸ್ಥಿತವಾದ ಪ್ರವೇಶ ಪ್ರಕ್ರಿಯೆಗಳು, ಕೈಗೆಟುಕುವ ಬೋಧನಾ ಶುಲ್ಕಗಳು, ವಿದ್ಯಾರ್ಥಿವೇತನಗಳು, ಆಂಗ್ಲ ಮಾಧ್ಯಮ ಕೋರ್ಸುಗಳು, ಸುರಕ್ಷಿತ ಕ್ಯಾಂಪಸ್ ಪರಿಸರ ವ್ಯವಸ್ಥೆ, ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಸಹಯೋಗ, ಕ್ಲಿನಿಕಲ್ ತರಬೇತಿ, ವಿದ್ಯಾರ್ಥಿ ಬೆಂಬಲ ಸೇವೆಗಳ ಮೂಲಕ ವೈದ್ಯಕೀಯ ಶಿಕ್ಷಣವನ್ನು ಕೈಗೆಟುಕುವ ಮತ್ತು ಸುರಕ್ಷಿತವಾದ ರೀತಿಯಲ್ಲಿ ಪಡೆಯುವ ವ್ಯವಸ್ಥೆಯನ್ನು ಪಿಜಿ ಮೆಡಿಕಾ ಓವರ್ ಸೀಸ್ ಸಂಸ್ಥೆ ಕಲ್ಪಿಸುತ್ತಿದೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಿರ್ಗಿಸ್ತಾನದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಿರ್ಗಿಸ್ ನ್ಯಾಷನಲ್ ಯುನಿವರ್ಸಿಟಿ ಅಗ್ರಿಯಾನ ಮತ್ತು ಕಿರ್ಗಿಸ್ ಸ್ಟೇಟ್ ಯುನಿವರ್ಸಿಟಿ ಐ ಅರಬೆವ, ಬಿಶ್ಕೆಕ್, ಕಿರ್ಗಿಸ್ತಾನದ ಹಲವಾರು ಪ್ರತಿನಿಧಿಗಳು ಪಾಲ್ಗೊಂಡಿದ್ದರು