ಬೆಂಗಳೂರು: ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ರಾಜಾಜಿನಗರದ ಇಸ್ಕಾನ್ ಮಂದಿರದಲ್ಲಿ ತೆಪ್ಪೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. .
ಇಸ್ಕಾನ್ ಬೆಂಗಳೂರು ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ತೆಪ್ಪೋತ್ಸವವನ್ನು ಆಚರಿಸಲಾಯಿತು. ಇನ್ನು ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಧ ಕೃಷ್ಣರನ್ನು ಪಲ್ಲಕ್ಕಿಯಲ್ಲಿ ಕಲ್ಯಾಣಿ (ದೇವಾಲಯದ ಕೆರೆಗೆ) ತರಲಾಯಿತು. ಭಕ್ತರು ಕೀರ್ತನೆಗಳಲ್ಲಿ ಭಾಗವಹಿಸಿ ಸಂತೋಷದಿಂದ ನರ್ತನ ಮಾಡಿದರು. ಅಲ್ಲದೆ ಇಸ್ಕಾನ್ ಮಂದಿರದಲ್ಲಿ ಪ್ರದಕ್ಷಣೆ ಹಾಕುವ ಮೂಲಕ ಉತ್ತಮ ಮೂರ್ತಿಯನ್ನು ಮೆರವಣಿಗೆ ಮಾಡಿದರು.
ಬ್ರಹ್ಮೋತ್ಸವವು ಇಸ್ಕಾನ್ ಬೆಂಗಳೂರಿನ ಪ್ರಮುಖ ಹಬ್ಬವಾಗಿದೆ, ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಇಸ್ಕಾನ್ ಬೆಂಗಳೂರಿನ ಪ್ರತಿ ವರ್ಷದ ಮಹತ್ವಪೂರ್ಣ ಉತ್ಸವವಾಗಿದ್ದು, ರಾಧ ಕೃಷ್ಣರ ಸ್ಥಾಪನೆಯು 1997ರಲ್ಲಿ ಚೈತ್ರ ಮಾಸದ ಪೂರ್ವಾಷಾಢ ನಕ್ಷತ್ರದಂದು ನಡೆದ ಸ್ಮರಣೀಯ ಘಟನೆಯಾಗಿರುವುದರಿಂದ ಈ ಹಬ್ಬವು ವಿಶೇಷ ಮಹತ್ವ ಪಡೆದಿದೆ.