ಬೆಂಗಳೂರು: ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗೆ ಉದ್ಯೋಗ ನೀಡುವ ಸಂಬಂಧ ಫೋನ್ ಪೇ CEO ಅಸಂಬದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಸಮೀರ್ ನಿಗಮ್ ಅವರು ಭಾನುವಾರ ಕ್ಷಮೆಯನ್ನು ಟ್ವೀಟ್ ಮೂಲಕ ಕೀಳಿದ್ದಾರೆ.
ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲು ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರ ಮಸೂದೆಯಲ್ಲಿ ಅಂಗೀಕಾರ ಮಾಡಿ ಅಧಿವೇಶನದಲ್ಲಿ ಆದೇಶ ಮಾಡಲಾಗಿತ್ತು. ಖಾಸಗಿ ವಲಯದಲ್ಲಿ ಭಾರಿ ಮಟ್ಟದಲ್ಲಿ ಚರ್ಚೆಯಾಗಿತ್ತು, ಇನ್ನು ಇದೇ ವೇಳೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅವರು ಕರ್ನಾಟಕ ಮೀಸಲಾತಿ ಕಾಯಿದೆ ಜಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾಗಿತ್ತು.
ಈ ಸಂಬಂಧ ಪರ ವಿರೋಧಗಳು ಕೂಗು ಎದ್ದಿದ್ದವು, ರಾಜ್ಯದ ಜನತೆ ಫೋನ್ ಪೇ ವಹಿವಾಟನ್ನು ನಿಲ್ಲಿಸುವುದಾಗಿ ಹೇಳಿದ್ದರು, ಇದನ್ನು ಅರಿತ ಸಿಇಒ ನಾನು ಯಾವ ಉದ್ದೇಶದಿಂದಲೂ ಹೇಳಿಲ್ಲ, ನನ್ನ ಕಾಮೆಂಟ್ ಬಗ್ಗೆ ಕರ್ನಾಟಕದ ಜನತೆಗೆ ನೋವಾಗಿದ್ದರೆ ಕ್ಷಮೆಯನ್ನು ಯಾಚಿಸುತ್ತೇನೆ ಎಂದು ಸಾಮಾಜಿಕ ಜಾಲ ತಾಣ X ನಲ್ಲಿ ಕ್ಷಮೆ ಕೇಳಿದ್ದಾರೆ.
ಕರ್ನಾಟಕ ಮೀಸಲಾತಿ ಬಿಲ್ ನಲ್ಲಿ ಏನಿದೆ?
2024 ಕರ್ನಾಟಕ ಮೀಸಲಾತಿ ಮಸೂದೆ ಜಾರಿಗೆ ತಂದಿದ್ದು, ಅಧಿವೇಶನದಲ್ಲಿ ಜಾರಿಗೆ ಬಂದಿದೆ, ಕಂಪನಿ ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕನ್ನಡಿಗನಿಗೆ ಶೇ 50ರಷ್ಟು ಮೀಸಲಾತಿಯನ್ನು ಎಲ್ಲಾ ಇಂಡಸ್ಟ್ರೀಸ್ ನಲ್ಲಿ ನೀಡಬೇಕು,ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು, ಇನ್ನುಳಿದ ಶೇ.70ರಷ್ಟು ಕರ್ನಾಟಕದದಲ್ಲದವರಿಗೆ ನೀಡಬೇಕು ಎಂಬುದು ಮಸೂದೆಯಲ್ಲಿ ಸ್ಪಷ್ಟವಾಗಿದೆ.
ಸಮೀರ್ ಗೆ ಕಂಟಕವಾಗಿದ್ದ ಟ್ವೀಟ್!
ನಾನು 47 ವರ್ಷದವನು ಕರ್ನಾಟಕದಲ್ಲಿ 15 ವರ್ಷಗಳ ಕಾಲ ಜೀವನ ಮಾಡಿಲ್ಲ, ನಮ್ಮ ತಂದೆ ಒಬ್ಬ ಭಾರತೀಯ ಜಲಸಾರಿಗೆಯಲ್ಲಿ ಕೆಲಸ ಮಾಡಿದವರು, ಎಲ್ಲಾ ದೇಶಗಳಲ್ಲಿ ಕೆಲಸ ಮಾಡಿದ್ದಾರೆ, ನಮ್ಮ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಬರುವುದಿಲ್ಲ, ನಾನು ಕಂಪನಿಗಳನ್ನು ಕಟ್ಟಿದ್ದೇನೆ, ಭಾರತದಾದ್ಯಂತ 25 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ, ನಮ್ಮ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗದ ಆಸೆ ಇಲ್ಲ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿ ರಾಜ್ಯದ ಜನತೆಯ ನಿಂದನೆಗೆ ಒಳಗಾಗಿದ್ದ.
ರಾಜ್ಯದ ಜನತೆ ಸಾಮಾಜಿಕ ಜಾಲತಾಣದಲ್ಲಿ ಫೋನ್ ಪೇ ಸಿಇಒ ಸಮೀರ್ ಅವರಿಗೆ ಟ್ವೀಟ್ಗಳ ಮಳೆಯನ್ನು ಸುರಿಸಿದ ಹಿನ್ನೆಲೆ ಎಚ್ಚತ್ತು ನಾಡಿನ ಜನರಲ್ಲಿ ಕ್ಷಮೆ ಕೋರಿದ್ದಾನೆ.