ಬೆಂಗಳೂರು: ಜಕ್ಕೂರು ಕೆರೆ ಉಳಿಸಲು ಕೈಗೊಂಡಿರುವ ಪುನರುಜ್ಜೀವನ ಕಾರ್ಯಕ್ಕೆ ಯುನೈಟೆಡ್ ಕಿಂಗ್ ಗಮ್ ನಾ ಐಸಿಇ(ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್) ತಂಡವು ಮೆಚ್ಚುಗೆ ವ್ಯಕ್ತಪಡಿಸಿದೆ.
ಯುಕೆಯ ಐಸಿಇ(ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್) ಅಧ್ಯಕ್ಷರಾದ ಫ್ರೊ. ಡಾ. ಅನುಷಾ ಶಾ ರವರು ಇಂದು ಅಟ್ಕಿನ್ಸ್ ತಂಡದೊಂದಿಗೆ ಜಕ್ಕೂರು ಕೆರೆಗೆ ಭೇಟಿ ನೀಡಿದರು. ಈ ವೇಳೆ ಪ್ರಮುಖ ಅಂತಾರಾಷ್ಟ್ರೀಯ ವಿನ್ಯಾಸ ಸಲಹಾ ಸಂಸ್ಥೆಯಾಗಿರುವ ಆಟ್ಕಿನ್ಸ್ ರವರು ಕೆರೆಯ ಪುನರುಜ್ಜೀವನದ ಪ್ರಕ್ರಿಯೆಯನ್ನು ನೋಡಿ ಪಾಲಿಕೆ ಕೆರೆ ವಿಭಾಗದಿಂದ ಕೆರೆ ಪುನರುಜ್ಜೀವನದ ಪ್ರಯತ್ನಗಳಲ್ಲಿ ಅಳವಡಿಸಿಕೊಂಡಿರುವ ಸುಸ್ಥಿರ ತಂತ್ರಜ್ಞಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಕೆರೆಗಳ ಪಾತ್ರ ಪ್ರಮುಖವಾಗಿದ್ದು, ಜಕ್ಕೂರು ಕೆರೆಯ ಸಂಪೂರ್ಣ ಅಭಿವೃದ್ಧಿ, ಜೌಗು ಪ್ರದೇಶದ ಅಭಿವೃದ್ಧಿ ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ಸಂಗ್ರಹಿಸಿಕೊಂಡರು. ಮುಂದಿನ ಪೀಳಿಗೆಗೆ ಉತ್ತಮ ಕಾರ್ಯ ಕೈಗೊಂಡಿದ್ದು, ಇದೇ ರೀತಿ ಇನ್ನೂ ಹೆಚ್ಚಿನ ಕೆರೆಗಳಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಪಾಲಿಕೆ ಅಧಿಕಾರಿಗಳು ಮಾಹಿತಿ ಒದಗಿಸಿದರು.
ದೇಶದ ವಿವಿಧ ಭಾಗಗಳಿಂದ ನಿಗಮಗಳು, ಪರಿಸರವಾದಿಗಳು, ಸರೋವರ ಸಂರಕ್ಷಣಾ ತಜ್ಞರು ಮತ್ತು ಅಂತರರಾಷ್ಟ್ರೀಯ ವಿನ್ಯಾಸ ಸಲಹೆಗಾರರು, ಹವಾಮಾನ ನಿಯಂತ್ರಣ ಇಲಾಖೆಗಳೊಂದಿಗೆ ಜಕ್ಕೂರು ಕೆರೆ ಪುನರುಜ್ಜೀವನ, ಪುನಃಶ್ಚೇತನ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಲು ತಂಡಗಳು ಭೇಟಿ ನೀಡಲಿವೆ.
ಈ ವೇಳೆ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಕ್ಷತ್, ಸಹಾಯಕ ಅಭಿಯಂತರರಾದ ಲತೀಫ್, ಯುಕೆಯ ಯುಕೆಯ ಐಸಿಇನ ಉಪಾಧ್ಯಕ್ಷರಾದ ಪ್ರೊ. ಡಾ. ಅನುಷಾ ಶಾ, ಅಟ್ಕಿನ್ಸ್ ತಂಡದ ಪ್ರತಿನಿಧಿಗಳು ಉಪಸ್ಥಿತರಿದ್ದರು.