ಬೆಂಗಳೂರು: ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್ (ASRTU) ಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಹಯೋಗದೊಂದಿಗೆ ಸ್ಥಾಯಿ ಸಮಿತಿ (ತಾಂತ್ರಿಕ ಮತ್ತು ಉಗ್ರಾಣ) & 209ನೇ ಬೆಲೆ ಪರಿಷ್ಕರಣೆ ಉಪ ಸಮಿತಿ ಸಭೆಯನ್ನು ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ನಡೆಸಲಾಯಿತು.
ಸ್ಥಾಯಿ ಸಮಿತಿಯ (ಟೆಕ್ಣಿಕಲ್ . ಮತ್ತು ಸ್ಟೋರ್ಸ್) ಸಭೆಯಲ್ಲಿ ತೈಲ ವಿತರಣಾ ಘಟಕಗಳ ಸುಧಾರಣೆಗೆ ಸಂಬಂಧಿಸಿದಂತೆ ವಾಹನ ಎಂಜಿನಿಯರಿಂಗ್ನಲ್ಲಿ ವಿವಿಧ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಗಳು, ಬಸ್ಗಳ ಮೇಲ್ಛಾವಣಿ ಸೋರಿಕೆಯನ್ನು ತಪ್ಪಿಸಲು, ರಸ್ತೆ ಸುರಕ್ಷತೆ ಮತ್ತು ನಿರ್ವಹಣೆ ಅಭ್ಯಾಸಕ್ಕಾಗಿ ಸಹಾಯಕ ದೀಪಗಳು, ಇತರೆ ತಂತ್ರಜ್ಞಾನಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ವಿ.ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ರವರ ಅಧ್ಯಕ್ಷತೆಯಲ್ಲಿ ಶ್ರೀ. ಮುಕುಲ್ ಗಾಂಧಿ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ಗುಜರಾತ್ SRTC, ಡಾ.ಕೆ ನಂದಿನಿದೇವಿ, ಭಾಆಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ ), ಕೆ ಎಸ್ ಆರ್ ಟಿ ಸಿ, ಡಾ. ಸೂರ್ಯ ಕಿರಣ್ ಕಾರ್ಯನಿರ್ವಾಹಕ ನಿರ್ದೇಶಕರು ASRTU ಮತ್ತು ಡೈರೆಕ್ಟರ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ಪೋರ್ಟ್ (CIRT), ಶ್ರೀ.ಆರ್ಆರ್ಕೆ ಕಿಶೋರ್ ನಿರ್ದೇಶಕರು ASRTU ಮತ್ತು ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಉಗ್ರಾಣ ಬಿಡಿ ಭಾಗಗಳ ಮಾರಾಟಗಾರರ ಡೈರೆಕ್ಟರಿಯನ್ನು ಬಿಡುಗಡೆ ಮಾಡಲಾಯಿತು. ಇದರಿಂದ ಬಿಡಿಭಾಗಗಳ ಖರೀದಿಯಲ್ಲಿ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಲಿದೆ ಎನ್ನಲಾಗಿದೆ.
ಭೇಟಿಯ ಸಮಯದಲ್ಲಿ, ಎಂಡಿ ಗುಜರಾತ್ ಎಸ್ಆರ್ಟಿಸಿ ಮತ್ತು ಇತರ ಪ್ರತಿನಿಧಿಗಳು ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರ ವಿಭಾಗದ ಡಿಪೋಗಳು, ಕೆಬಿಎಸ್ ಬಿಐಎಸ್ ನಿಲ್ದಾಣಕ್ಕೆ ಭೇಟಿ ನೀಡಿದರು ಮತ್ತು ನಮ್ಮ ಕಾರ್ಗೋ ಟ್ರಕ್ಗಳನ್ನು ಸಹ ವೀಕ್ಷಿಸಿದರು.
ಸಭೆಯಲ್ಲಿ ಆಂಧ್ರಪ್ರದೇಶ ಎಸ್ಆರ್ಟಿಸಿ, ಗುಜರಾತ್ಎಸ್ಆರ್ಟಿಸಿ, ಮಹಾರಾಷ್ಟ್ರ ಎಸ್ಆರ್ಟಿಸಿ, ತೆಲಂಗಾಣ ಎಸ್ಆರ್ಟಿಸಿ, ತಮಿಳುನಾಡುಎನ್ಎಸ್ಟಿಸಿ, ಕೆಕೆಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಮತ್ತು ವಿವಿಧ ನಿಗಮಗಳ ಅಧಿಕಾರಿಗಳು ಭಾಗವಹಿಸಿದ್ದರು.