ಬೆಂಗಳೂರು: ಸೇನೆ ಮತ್ತು ನಾಗರಿಕ ವಲಯಗಳಲ್ಲಿ ಸೇವೆ ಒದಗಿಸುವ ದಣಿವನ್ನು ಕಾಣದ, ಸ್ವಾರ್ಥವಿಲ್ಲದ, ಸೇವೆಯಲ್ಲಿರುವ ಅತ್ಯಂತ ದಿಟ್ಟ ವ್ಯಕ್ತಿಗಳಾದ ನರ್ಸ್ ಗಳು ಮತ್ತು ತಮ್ಮನ್ನು ಸಂಕಷ್ಟಕ್ಕೆ ಒಡ್ಡಿಕೊಂಡು ಜೀವಗಳನ್ನು ಉಳಿಸುವ ಮತ್ತು ಇತರರನ್ನು ರಕ್ಷಿಸುವ ಅವರಿಗೆ ಸಂದ ಗೌರವವಾಗಿದೆ ಎಂದು ನರ್ಸ್ ಮರಿಯಾ ವಿಕ್ಟೋರಿಯಾ ತಿಳಿಸಿದರು.
ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್ ವಿಜೇತರ ಕುರಿತು ನರ್ಸ್ ಮರಿಯಾ ವಿಕ್ಟೋರಿಯಾ ಜುವಾನ್ ಮಾತನಾಡಿ, “ಫಿಲಿಪ್ಪೀನ್ಸ್ ನ ಸೇನಾ ನರ್ಸ್ ಆಗಿ ನನ್ನ ಪ್ರಯಾಣವು ಸೇವೆಗೆ ನನ್ನ ಸದೃಢ ಬದ್ಧತೆಯನ್ನು ಹೊಂದಿದೆ- ಅದು ಯುದ್ಧ ಪ್ರದೇಶಗಳಲ್ಲಿ ಸೇವೆ ಒದಗಿಸುವುದಿರಲಿ, ವಿಪತ್ತು ಸಂಭವಿಸಿದ ಪ್ರದೇಶಗಳಿರಲಿ ಅಥವಾ ದುರ್ಬಲ ಸಮುದಾಯಗಳಿರಲಿ ಪ್ರತಿ ಪ್ಲಾಟ್ ಪಾರಂನಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದಾಗಿದೆ. ನನ್ನ ಪ್ರಯತ್ನಗಳನ್ನು ಮಾತ್ರವಲ್ಲ, ಬದಲಿಗೆ ನಾನು ಹೆಮ್ಮೆಯಿಂದ ಸೇವೆ ಒದಗಿಸಿದ ಸೈನಿಕರ ಧೈರ್ಯಕ್ಕೆ ಸಂದ ಗೌರವವಾಗಿದೆ ಮತ್ತು ನನಗೆ ದಿನನಿತ್ಯ ಸ್ಫೂರ್ತಿ ತುಂಬುವ ಫಿಲಿಪಿನೊ ಜನರು ಸದೃಢತೆಗೂ ಆಗಿದೆ” ಎಂದರು.
ವಿಜೇತರ ಕುರಿತು ನರ್ಸ್ ಮರಿಯಾ ವಿಕ್ಟೋರಿಯಾ ಜುವಾನ್ ಮಾತನಾಡಿ, “ಫಿಲಿಪ್ಪೀನ್ಸ್ ನ ಸೇನಾ ನರ್ಸ್ ಆಗಿ ನನ್ನ ಪ್ರಯಾಣವು ಸೇವೆಗೆ ನನ್ನ ಸದೃಢ ಬದ್ಧತೆಯನ್ನು ಹೊಂದಿದೆ- ಅದು ಯುದ್ಧ ಪ್ರದೇಶಗಳಲ್ಲಿ ಸೇವೆ ಒದಗಿಸುವುದಿರಲಿ, ವಿಪತ್ತು ಸಂಭವಿಸಿದ ಪ್ರದೇಶಗಳಿರಲಿ ಅಥವಾ ದುರ್ಬಲ ಸಮುದಾಯಗಳಿರಲಿ ಪ್ರತಿ ಪ್ಲಾಟ್ ಪಾರಂನಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವುವಾಗಿದೆ. ಈ ಮಾನ್ಯತೆಯು ನನ್ನ ಪ್ರಯತ್ನಗಳನ್ನು ಮಾತ್ರವಲ್ಲ, ಬದಲಿಗೆ ನಾನು ಹೆಮ್ಮೆಯಿಂದ ಸೇವೆ ಒದಗಿಸಿದ ಸೈನಿಕರ ಧೈರ್ಯಕ್ಕೆ ಸಂದ ಗೌರವವಾಗಿದೆ ಮತ್ತು ನನಗೆ ದಿನನಿತ್ಯ ಸ್ಫೂರ್ತಿ ತುಂಬುವ ಫಿಲಿಪಿನೊ ಜನರು ಸದೃಢತೆಗೂ ಆಗಿದೆ” ಎಂದರು.
ಇದು ನಾನು ಪ್ರತಿನಿಧಿಸುವ ಸೇನೆ ಮತ್ತು ನಾಗರಿಕ ವಲಯಗಳಲ್ಲಿ ಸೇವೆ ಒದಗಿಸುವ ದಣಿವನ್ನು ಕಾಣದ, ಸ್ವಾರ್ಥವಿಲ್ಲದ, ಸೇವೆಯಲ್ಲಿರುವ ಅತ್ಯಂತ ದಿಟ್ಟ ವ್ಯಕ್ತಿಗಳಾದ ನರ್ಸ್ ಗಳು ಮತ್ತು ತಮ್ಮನ್ನು ಸಂಕಷ್ಟಕ್ಕೆ ಒಡ್ಡಿಕೊಂಡು ಜೀವಗಳನ್ನು ಉಳಿಸುವ ಮತ್ತು ಇತರರನ್ನು ರಕ್ಷಿಸುವ ಅವರಿಗೆ ಸಂದ ಗೌರವವಾಗಿದೆ. ಈ ಗೌರವವು ಅತ್ಯಂತ ಸವಾಲಿನ ಸನ್ನಿವೇಶಗಳಲ್ಲಿ ಸೇವೆ ಒದಗಿಸುವ ಮತ್ತು ನಮ್ಮ ಶ್ರೇಷ್ಠ ವೃತ್ತಿಯ ಎಣೆಯಿರದ ಸಾಮರ್ಥ್ಯ ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದರು.
ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥಾಪಕ ಅಧ್ಯಕ್ಷ ಡಾ.ಅಜಾದ್ ಮೂಪೆನ್ ಮಾತನಾಡಿ, “ಮರಿಯಾ ವಿಕ್ಟೋರಿಯಾ ಜುವಾನ್ ಶುಶ್ರೂಷಣೆಯ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತಾರೆ ಮತ್ತು ಇಡೀ ಜಾಗತಿಕ ಆರೋಗ್ಯಸೇವಾ ಸಮುದಾಯಕ್ಕೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿದೆ. ಆಸ್ಟರ್ ನಲ್ಲಿ ನಾವು ಶುಶ್ರೂಷಕಿಯರು ಆರೋಗ್ಯಸೇವೆಯ ಬೆನ್ನೆಲುಬು ಎಂದು ನಂಬುತ್ತೇವೆ, ಅವರು ಸಹಾನುಭೂತಿಯಿಂದ ಆರೈಕೆ ನೀಡುವುದೇ ಅಲ್ಲದೆ ಇಡೀ ಹೆಲ್ತ್ ಕೇರ್ ಇಕೊಸಿಸ್ಟಂನಲ್ಲಿ ಅಸಾಧಾರಣ ಪಾತ್ರ ವಹಿಸುತ್ತಾರೆ. ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್ಸ್ ಅನ್ನು ವಿಶ್ವದಾದ್ಯಂತ ಜೀವನಗಳನ್ನು ಶ್ರಮಿಸಲು ತಮ್ಮ ಶಕ್ತಿಮೀರಿ ಶ್ರಮಿಸಿದ ನರ್ಸ್ ಕೊಡುಗೆಗಳನ್ನು ಗೌರವಿಸಲು ಪ್ರಾರಂಭಿಸಲಾಗಿದೆ.
ಫಿಲಿಪ್ಪೀನ್ಸ್ ಸೇನಾಪಡೆಗಳ ಮೀಸಲು ಪಡೆಯ ಆರ್ಮಿ ಹೆಲ್ತ್ ಸರ್ವೀಸಸ್ ಅಂಡ್ ಕರ್ನಲ್ ನ ಕನ್ಸಲ್ಟೆಂಟ್ ಶುಶ್ರೂಷಕಿ ಫಿಲಿಪ್ಪೀನ್ಸ್ ದೇಶದ ಮರಿಯಾ ವಿಕ್ಟೋರಿಯಾ ಜುವಾನ್ ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್ 2024ರ ವಿಜೇತರಾಗಿ ಪ್ರಕಟಿಸಲಾಗಿದೆ ಮತ್ತು ಅವರಿಗೆ ರೂ.2 ಕೋಟಿ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತದ ಬೆಂಗಳೂರಿನಲ್ಲಿ ನಡೆದ ಪ್ರದಾನ ಮಾಡಲಾಯಿತು.
ಟಾಪ್ 10 ಫೈನಲಿಸ್ಟ್ ಗಳಲ್ಲಿ ಪ್ರತಿಯೊಬ್ಬರೂ ಮತ್ತು ನಾವು ಈ ವರ್ಷ ಸ್ವೀಕರಿಸಿದ 78,000 ಅರ್ಜಿದಾರರಲ್ಲಿ ಪ್ರತಿಯೊಬ್ಬರೂ ಅವರ ರೋಗಿಗಳಿಗೆ ಮತ್ತು ಅವರ ದೇಶಗಳಲ್ಲಿ ಶುಶ್ರೂಷಕರ ಸಮುದಾಯಗಳಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ. ನಾವು ಈ ಆರೋಗ್ಯಸೇವಾ ನಾಯಕರ ಅಸಾಧಾರಣ ಕೆಲಸವನ್ನು ಗುರುತಿಸಲು ಮತ್ತು ಸಂಭ್ರಮಿಸಲು ಹೆಮ್ಮೆ ಪಡುತ್ತೇವೆ” ಎಂದರು.
ಉಳಿದ 9 ಫೈನಲಿಸ್ಟ್ ಗಳು ಕೀನ್ಯಾದ ಆರ್ಕಿಮಿಡಿಸ್ ಮೊಟಾರಿ, ಪಪುವಾ ನ್ಯೂ ಗಿನಿಯಾದ ಜಾನ್ಸಿ ಇನ್ನಿ, ಯು.ಎಸ್.ಎ.ಯ ಲಾರ್ನಿ ಕೊನ್ಲು ಫ್ಲೋರೆನ್ಸಿಯೊ, ಉಗಾಂಡಾದ ಲಿಲಿಯನ್ ನುವಾಬೈನ್, ಯು.ಎ.ಇ.ಯ ನೆಲ್ಸನ್ ಬೌಟಿಸ್ಟಾ, ಭಾರತದ ಸಿಲ್ವಿಯಾ ಪ್ರದೀಪ್ ಕುಮಾರ್ ರಾಣೆ, ಯು.ಎಸ್.ಎ.ಯ ಮಾರ್ಟಿನ್ ಶಿಯವೆಂಟೊಫ್ರಮ್, ಸಿಂಗಪೂರ್ ನ ಹೊಯಿ ಶು ಯಿನ್ ಮತ್ತು ಇಂಗ್ಲೆಂಡ್ ನ ಮೇ ಹ್ಯಾಂಪ್ಟನ್ ಅವರಿಗೂ ನರ್ಸಿಂಗ್ ನಲ್ಲಿ ಅವರ ಕೊಡುಗೆಗೆ ನಗದು ಬಹುಮಾನ ನೀಡಲಾಯಿತು.
ನರ್ಸ್ ಮರಿಯಾ ವಿಕ್ಟೋರಿಯಾ 2021ರಲ್ಲಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಪ್ರಾರಂಭಿಸಿದ್ದು ವಿಶ್ವದಾದ್ಯಂತ ಶುಶ್ರೂಷಕಿಯರು ರೋಗಿಗಳಿಗೆ ನೀಡುವ ಅಸಾಧಾರಣ ಕೊಡುಗೆಯನ್ನು ಗುರುತಿಸುವ ಮತ್ತು ಸಂಭ್ರಮಿಸುವ ಉದ್ದೇಶ ಹೊಂದಿದೆ. 2024ರ ಪ್ರಶಸ್ತಿಗಳ ಆವೃತ್ತಿಯು ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದು 202 ದೇಶಗಳ 78,000ಕ್ಕೂ ಹೆಚ್ಚು ಶುಶ್ರೂಷಕಿಯರು ಭಾಗವಹಿಸಿದ್ದು 2023ರಲ್ಲಿ ಸ್ವೀಕರಿಸಿದ ಅರ್ಜಿಗಳಿಗಿಂತ ಶೇ.50ರಷ್ಟು ಹೆಚ್ಚಳ ಕಂಡಿದೆ.
ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆಜಾದ್ ಮೂಪೆನ್ ವಿಜೇತರನ್ನು ಪ್ರಕಟಿಸಿದರು ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅವರೊಂದಿಗೆ ಖ್ಯಾತ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ, ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರ್ ಯು.ಟಿ. ಖಾದರ್, ಆಸ್ಟರ್ ಡಿಎಂ ಹೆಲ್ತ್ ಕೇರ್ ಇಂಡಿಯಾದ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಲಿಷಾ ಮೂಪೆನ್ ಮತ್ತು ಆಸ್ಟರ್ ಡಿಎಂ ಹೆಲ್ತ್ ಕೇರ್ ನ ಗೌರ್ನೆನ್ಸ್ ಅಂಡ್ ಕಾರ್ಪೊರೇಟ್ ಅಫೇರ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಗ್ರೂಪ್ ಹೆಡ್ ಟಿ.ಜೆ. ವಿಲ್ಸನ್ ಉಪಸ್ಥಿತರಿದ್ದರು.
ಈ ನರ್ಸ್ ಗಳನ್ನು ಅರ್ನ್ಸ್ಟ್ ಅಂಡ್ ಯಂಗ್ ಎಲ್.ಎಲ್.ಪಿ. ನಡೆಸಿದ ಸ್ಕ್ರೀನಿಂಗ್ ಜ್ಯೂರಿ ಮತ್ತು ಗ್ರ್ಯಾಂಡ್ ಜ್ಯೂರಿ ಒಳಗೊಂಡ ಕಠಿಣ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಯಿತು.