ಬೆಂಗಳೂರು: ಜನಸಿರಿ ಫೌಂಡೇಷನ್ ವತಿಯಿಂದ ಅತ್ಯತ್ತಮ ಶಿಕ್ಷಕರು ಪ್ರಶಸ್ತಿ ಪ್ರದಾನ ಹಾಗು 2025ನೇ ಸಾಲಿನ ಜನಸಿರಿ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಯಿತು.
ಬೆಂಗಳೂರಿನ ಮೈಸೂರ್ ಬ್ಯಾಂಕ್ ರೂಪದಲ್ಲಿರುವ ಶಿಕ್ಷಕರ ಸದನದಲ್ಲಿ ಜನಸಿರಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ನಾಗಲೇಖ ಅವರ ಮುಂದಾಳತ್ವದಲ್ಲಿ ರಾಜ್ಯದಲ್ಲಿ ಅದರಲ್ಲೂ ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಪ್ರಶಸ್ತಿಯನ್ನು ಪಡೆದುಕೊಂಡರು. ಶಿಕ್ಷಕರ ಸಾಧನೆಗೆ ಮತ್ತೊಂದು ಮೆಟಲ್ ಎಂಬಂತೆ ಅವರ ಮುಂದಿನ ಗುರಿ ಆಲೋಚನೆಗಳನ್ನು ಉನ್ನತ ಮಟ್ಟಕ್ಕೆ ಕೊಂಡುಯುವಂತ ಕೆಲಸವನ್ನು ಇಂತಹ ಪ್ರಶಸ್ತಿಗಳು ಮಾಡುತ್ತದೆ.
ಇನ್ನೂ ಜನಸಿರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ ಸೋಮಶೇಕರ್ ವಹಿಸಿಕೊಂಡಿದ್ದರು. ಬೆಳಿಗ್ಗೆಯಿಂದ ಸಂಜೆಯ ತನಕ ಸಾಕಷ್ಟು ಸಾಹಿತ್ಯ ಕ್ಷೇತ್ರದಲ್ಲಿ ಕಮ್ಮಟಗಳು, ಕವಿತೆಗಳು, ಚುಟುಕುಗಳು, ವಾಚನಗಳು ನಡೆದವು ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಸಾಕಷ್ಟು ಯುವ ಪ್ರತಿಭೆಗಳು ತಮ್ಮ ಸಾಹಿತ್ಯ ಪ್ರತಿಭೆಗಳನ್ನು ವೇದಿಕೆ ಮೇಲೆ ವ್ಯಕ್ತಪಡಿಸಿದರು.
ಇನ್ನು ಇದೆ ವೇಳೆ ಜನಸಿರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಮಾತನಾಡಿ, ನಾಗಲೇಖ ಅವರು ಸಾಕಷ್ಟು ವರ್ಷಗಳಿಂದ ಜನೋಪಾಯಕಾರಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ, ಸಮಾಜದಲ್ಲಿ ಕಟ್ಟಕಡೆ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಅವರ ಸಾಧನೆಗಳನ್ನು ನಾಡಿನ ಜನರಿಗೆ ತಿಳಿಸುವ ಸಲುವಾಗಿ ಅವರಿಗೆ ಪ್ರಶಸ್ತಿಗಳನ್ನು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ವರ್ಷ ನೀಡುತ್ತಾ ಬರುತ್ತಿದ್ದಾರೆ, ಈ ಬಾರಿ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿರುವ ಶಿಕ್ಷಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಕ್ರಮವನ್ನು ಹಮ್ಮಿಕೊಂಡಿದ್ದು ಹೆಗ್ಗಳಿಕೆ ವಿಚಾರವಾಗಿದೆ, ಅವರ ಸಮಾಜಮುಖಿ ಕಾರ್ಯಗಳು ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿ ಅವರಿಗೆ ಸದಾ ನಾವು ಪ್ರೋತ್ಸಾಹದಾಯಕವಾಗಿ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.
ಇನ್ನು ಕಗ್ಗಲಿಪುರ ಪೊಲೀಸ್ ಸ್ಟೇಷನ್ ನ ಪೊಲೀಸ್ ಅಧಿಕಾರಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾಗಲೇಖ ಅವರು ಸಾಕಷ್ಟು ವರ್ಷಗಳಿಂದ ನಮಗೆ ಚಿರಪಡಿಸಿದರು ಅವರ ಸಮಾಜಮುಖಿ ಕೆಲಸ ಕಾರ್ಯಗಳು ನಮಗೆ ಬಹಳ ಸಂತೋಷವನ್ನು ತಂದಿವೆ ಅವರ ಕೆಲಸ ಕಾರ್ಯಗಳು ಸಾಮಾನ್ಯ ಜನರಿಗೆ ಉಪಯೋಗವಾಗಲಿ ಹಾಗೆ ಎಲೆಮರೆಕಾಯಿಯಂತೆ ಸಾಧನೆ ಮಾಡುತ್ತಿರುವವರಿಗೆ ಹಾಗೂ ದುಡಿಯುತ್ತಿರುವವರಿಗೆ ಮತ್ತಷ್ಟು ಪ್ರೋತ್ಸಾಹದಾಯಕವನ್ನು ನೀಡುತ್ತಿರುವ ನಾಗಲೇಖ ಅವರು ಮುಂದಿನ ದಿನಗಳಲ್ಲಿ ಇಂತಹ ಅನೇಕ ಸಮಾಜ ಮುಖ ಕೆಲಸಗಳನ್ನು ಮಾಡಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.
ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಹಾಗೂ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು ತರಹಹೆವಾರಿ ನೃತ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದವರನ್ನು ರಂಜಿಸಿದರು. ಇನ್ನೂ ಇದೆ ವೇಳೆ ಕಾರ್ಯಕ್ರಮದಲ್ಲಿ ಬಾಲ ಚೇತನ ಮಕ್ಕಳ ಮಾಸಪತ್ರಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಈ ಪುಸ್ತಕದ ಮುಖ್ಯ ಉದ್ದೇಶ ಮಕ್ಕಳನ್ನು ಗುರಿಯಾಗಿಸಿಕೊಂಡು ಅದರಲ್ಲೂ ಸಹ ಮೊಬೈಲ್ ಬಳಕೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಬರಲಾಗಿದೆ ಇದು ಮಕ್ಕಳಿಗೆ ಸೂಕ್ತವಾಗಿದ್ದು ಬಹಳ ಉಪಯೋಗಕಾರಿ ಆಗಿದೆ ಎಂದರು.
ಕಾರ್ಯಕ್ರಮಕ್ಕೆ ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಚಿನ್ನಪ್ಪ ವೈ ಚಿಕ್ಕಹಾಗಡೆ ಸೇರಿದಂತೆ ಅನೇಕ ಗಣ್ಯರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ, ನಾಗಲೇಖ ಅವರಿಗೆ ಶುಭ ಕೋರಿದರು.