ಬೆಂಗಳೂರು: ಕ್ಯಾನ್ಸರ್ ಒಂದು ಪಿಡುಗಲ್ಲ, ಅಂಟು ರೋಗವಲ್ಲ, ರೋಗದ ಬಗ್ಗೆ ಅಸಡ್ಯದ ಭಾವನೆ ತೆಗೆದು ಹಾಕಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.2ರಂದು (ಭಾನುವಾರ) ಮುಂಜಾನೆ 6.30 ನಡಿಗೆ ಮೂಲಕ ಕ್ಯಾನ್ಸರ್ ಪಿಡುಗು ತೊಲಗಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವಿಧಾನಸೌಧದ ಮುಂದೆ ಅದ್ವಿಕ ಕೇರ್ ಸಂಸ್ಥೆ ಆಯೋಜನೆ ಮಾಡಲಾಗಿದೆ ಎಂದು ಅದ್ವಿಕ ಕೇರ್ ಸಂಸ್ಥೆಯ CAO ರಾಜಶ್ರೀವಾರಿಯರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧದ ಸುತ್ತ ಮುತ್ತ 5 ಕಿಮೀ ವರೆಗೂ 2.0 ನಡಿಗೆ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ನಡಿಗೆ ಮಾಡುವುದರಿಂದ ಮನುಷ್ಯನಿಗೆ ಏನೆಲ್ಲಾ ಅನುಕೂಲಗಳಿವೆ, ನಮ್ಮ ಸಂಸ್ಥೆ ಜೊತೆ ಪ್ರಕ್ರಿಯಾ ಆಸ್ಪತ್ರೆ ಸಹಕಾರದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಒಳಗೆ ಹೇಗೆಲ್ಲಾ ಕಾರ್ಯ ಪ್ರೋರ್ವೃತ್ತರಾಗಬೇಕು ಎಂದು ತಿಳಿಯುವುದು ಅವಶ್ಯಕತೆ ಇದೆ ಎಂದರು. ಇದರಲ್ಲಿ ಯಾರು ಬೇಕಾದರು ಪಾಲಗೊಳ್ಳಬಹುದು, ಆನ್ಲೈನ್ ನಲ್ಲಿ ನೋಂದಣಿ ಮಾಡಲಾಗಿದೆ.
ಪ್ರಕ್ರಿಯೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸೋಮನಾಥ್ ಚಟರ್ಜಿ ಮಾತನಾಡಿ, ಪ್ರಸ್ತುತ ಜನರಿಗೆ ಯಾವುದೇ ಕಾಯಿಲೆ ಬರುವುದಕ್ಕೂ ಮುನ್ನ ಮುಂದಾಲೋಚನೆ ಇರಬೇಕು. ರೋಗದ ಬಗ್ಗೆ ಮುನ್ನೆಚ್ಚರಿಕೆ ಇರಬೇಕೆ ವರತು ಭಯ ಇರಬಾರದು. ಕ್ಯಾನ್ಸರ್ ಹಲವು ಕಾರಣಗಳಿಂದ ಬರುತ್ತದೆ, ಅದರಲ್ಲಿ ಮುಖ್ಯವಾಗಿ ಪ್ರಸ್ತುತ ಜೀವಕ್ರಮ ಸರಿಯಿಲ್ಲದ್ದು ಮುಖ್ಯವಾಗಿದೆ, ಅದರ ಜೊತೆಗೆ ರೋಗದ ಬಗ್ಗೆ ನಿರಾಸಕ್ತಿ, ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆಯದಿರುವುದು ಕಾರಣವಾಗುತ್ತವೆ. ಇತ್ತೀಚೆಗೆ ಸಣ್ಣ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿರುವುದು ಆತಂಕದ ವಿಚಾರವಾಗಿದೆ. ಕ್ಯಾನ್ಸರ್ ಹಲವು ರೀತಿಯಲ್ಲಿ ಕಂಡುಬರುತ್ತದೆ ಸ್ಥನ, ಶ್ವಾಸಕೋಶ, ರಕ್ತದ, ಮೂಳೆ ಕ್ಯಾನ್ಸರ್, ಗಂಟಲು, ಸ್ನಾಯು, ಮೂತ್ರಕೋಶದ ಕ್ಯಾನ್ಸರ್ ಹೀಗೆ ಹತ್ತು ಹಲವು ರೀತಿಯಲ್ಲಿ ಕಂಡುಬರುತ್ತದೆ, ಮೊದಲು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು ಎಂದು ಸಲಹೆ ನೀಡಿದರು.
ಅದ್ವಿಕ್ ಕೇರ್ ಸಂಸ್ಥೆಯ ಟ್ರಸ್ಟಿ ಮೋಹನ್ ವಂಶಿ ಕೃಷ್ಣ ಮಾತನಾಡಿ, ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಸಲುವಾಗಿ ಅದರಲ್ಲೂ ತಂಬಾಕು, ದೂಮಪಾನ, ಮಧ್ಯಪಾನ, ಡ್ರಗ್ಸ್, ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಕಂಡುಬರುತ್ತದೆ, ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತಿದೆ. ನಮ್ಮ ಸಂಸ್ಥೆ ಹಾಗು ಪ್ರಕ್ರಿಯೆ ಆಸ್ಪತ್ರೆಯ ಸಹಯೋಗದೊಂದಿಗೆ ಕ್ಯಾನ್ಸರ್ ರೋಗದ ಗುಣಲಕ್ಷಣ, ನಿವಾರಣೆ ಮಾಡುವ, ಜೀವನ ಕ್ರಮದ ಬಗ್ಗೆ ಸಾಕಷ್ಟು ಮಾಹಿತಿ ತಿಳಿಸಲಾಗುತ್ತದೆ, ಜನರು ಸಹ ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ 2.0 ನಡಿಗೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಫ್ಲ್ಯಾಗ್ ಶಿಪ್ ಮಾಡಲಿದ್ದಾರೆ. ಇದೇ ವೇಳೆ ಸಂಸ್ಥೆಯ ಟ್ರಸ್ಟಿ ಬಾಲ ವಾರಿಯರ್,ಸಂತೋಷ್ ಕೃಷ್ಣ, ಪ್ರಕ್ರಿಯಾ ಆಸ್ಪತ್ರೆಯ ಮುಂದಾಳತ್ವದಲ್ಲಿ ಸಿಇಒ ಡಾ.ಶ್ರೀನಿವಾಸ್ ಚಿರುಕುರಿ ವಾಕಥಾನ್ ನಲ್ಲಿ ಭಾಗವಹಿಸಲಿದ್ದಾರೆ.