ಬೆಂಗಳೂರು: 76ನೇ ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಆವರಣದಲ್ಲಿ ಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ಪ್ರಸಾತ್ ಮನೋಹರ್ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 76ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಜಲಮಂಡಳಿಯು 60ನೇ ವರ್ಷದ ಸಾರ್ಥಕ ಸಂಭ್ರಮದಲ್ಲಿದೆ. ಜಲಮಂಡಳಿಯ ಗ್ರಾಹಕರಿಗೆ ನಾವು ಸಲ್ಲಿಸುವ ಸೇವೆಯೇ ಸಂವಿಧಾನಕ್ಕೆ ತೋರುವ ಗೌರವ ಎಂದರು. ನಮ್ಮ ದೇಶದ ಸಂವಿಧಾನದ ಶ್ರೇಷ್ಠತೆಯ ಅಂಶಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಅಭಿಯಂತರರಾದ ಸುರೇಶ, ಮಂಡಳಿಯ ಮುಖ್ಯಅಭಿಯಂತರರುಗಳು, ಅಪರ ಮುಖ್ಯ ಅಭಿಯಂತರರುಗಳು, ಎಂಜನಿಯರ್ ಗಳು, ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಮರಿಯಪ್ಪ,ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ ನೌಕರರ ಸಂಘ ಹೊರತಂದಿರುವ ಡೈರಿಗಳನ್ನು ಬಿಡುಗಡೆ ಮಾಡಲಾಯಿತು.