ಬೆಂಗಳೂರು: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2025 ಕ್ಕೆ (Special Intensive Revision (SIR) of Electoral Roll) ಸಂಬಂಧಿಸಿದಂತೆ ತರಬೇತಿ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2025 ಕ್ಕೆ (Special Intensive Revision (SIR) of Electoral Roll) ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ ಕಛೇರಿ, ಶೇಷಾದ್ರಿ ರಸ್ತೆ, ಬೆಂಗಳೂರು ಇಲ್ಲಿ ಮತದಾರರ ನೊಂದಣಾಧಿಕಾರಿ (EROs) ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ (AEROs) ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
*ಮುಖ್ಯ ಚುನಾವಣಾಧಿಕಾರಿಗಳಾದ ಶ್ರೀ ವಿ. ಅನ್ಬುಕುಮಾರ್* ರವರು ಮಾತನಾಡಿ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2025 ಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತರಬೇತಿಗೆ ಹಾಜರಿದ್ದ ಎಲ್ಲಾ *ಮತದಾರರ ನೊಂದಣಾಧಿಕಾರಿ (EROs) ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ (AEROs) ರವರಿಗೆ ಸೂಚಿಸಿದರು.*
ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀಮತಿ ಪ್ರೀತಿ ಗೆಹ್ಲೋಟ್, ನಗರ ಪಾಲಿಕೆಗಳ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್, ಶ್ರೀ ರಮೇಶ್ ಕೆ.ಎನ್., ಅಭಿವೃದ್ಧಿ ಅಪರ ಆಯುಕ್ತರುಗಳಾದ ಶ್ರೀ ನವೀನ್ ಕುಮಾರ್ ರಾಜು, ಶ್ರೀ ದಿಗ್ವಿಜಯ್ ಬೋಡ್ಕೆ, ಲೋಖಂಡೆ ಸ್ನೇಹಲ್ ಸುಧಾಕರ್, ಶ್ರೀ ದಲ್ಜಿತ್ ಕುಮಾರ್, ಶ್ರೀ ಲತಾ ಆರ್., ರವರು ಹಾಜರಿದ್ದರು. ಮಾಸ್ಟರ್ ಟ್ರೈನರ್ ಜಯಮಾಧವ್ ಅವರು ತರಬೇತಿ ನೀಡಿದರು.