ಬೆಂಗಳೂರು: ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ ನಾಗರೀಕರಿಗೆ ಅಡತಡೆಯಿಲ್ಲದ, ಅನುಕೂಲಕರ ಪಾದಚಾರಿ ಮಾರ್ಗ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಯಾ ವಲಯಗಳ, ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.
*ಪೂರ್ವ ವಲಯ:*
ಪೂರ್ವ ವಲಯದಲ್ಲಿ ಪುಲಕೇಶಿನಗರ ವಿಭಾಗದ ವಾರ್ಡ್ 31ರ ಕುಶಾಲ್ ನಗರದ ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಯಿತು. ಸಿ.ವಿ ರಾಮನ್ ನಗರ ವಿಭಾಗದ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಮುಂದುವರೆದಂತೆ, ಸರ್ವಜ್ಞ ನಗರ ವಿಭಾಗದಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಹಾಗೂ ಶಿವಾಜಿನಗರ ವಿಭಾಗದ ವಸಂತನಗರದಲ್ಲಿ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮತ್ತು ಉಳಿದ ವಿಭಾಗಗಳಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಲಾಯಿತು.
*ಪಶ್ಚಿಮ ವಲಯ:*
ಪಶ್ಚಿಮ ವಲಯದ ಗೋವಿಂದರಾಜನಗರ ಉಪವಿಭಾಗ ವ್ಯಾಪ್ತಿಯ ವಾರ್ಡ್ 104 ರ ಗೋವಿಂದರಾಜನಗರ ಮತ್ತು ವಾರ್ಡ್ 125 ರ ಮಾರೇನಹಳ್ಳಿ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿರುವ ಸಿ.ಹೆಚ್.ಬಿ.ಎಸ್ ಬಡಾವಣೆ, 8ನೇ ಮುಖ್ಯರಸ್ತೆ ಎಂ.ಸಿ ಬಡಾವಣೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸರ್ವಿಸ್ ರಸ್ತೆ ಇತ್ಯಾದಿ ಅಡ್ಡ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುವುದರೊಂದಿಗೆ, ಒತ್ತುವರಿದಾರರಿಂದ ಸುಮಾರು ರೂ. 7,100/- ಗಳ ದಂಡದ ಮೊತ್ತವನ್ನು ವಸೂಲಿ ಮಾಡಲಾಯಿತು.
*ದಕ್ಷಿಣ ವಲಯ:*
ದಕ್ಷಿಣ ವಲಯದ ಕಲಾಸಿಪಾಳ್ಯದ ಕುಂಬಾರಗುಂಡಿಯಲ್ಲಿ, ಬಿಟಿಎಂ ಲೇಔಟ್ ನ 7ನೇ ಮುಖ್ಯರಸ್ತೆ, ಹೊಸಕೆರೆ ಹಳ್ಳಿ ಮುಖ್ಯರಸ್ತೆ, ಜಯನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ವಲಯದ ಶ್ರೀನಗರದಲ್ಲಿ, ನ್ಯೂ ಟಿಂಬರ್ ಯಾರ್ಡ್ ಲೇ ಔಟ್ ನ 2ನೇ ಅಡ್ಡರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಮುಂದುವರೆದಂತೆ, ಪದ್ಮನಾಭನಗರ ವಿಭಾಗದ ವಾರ್ಡ್ ಸಂಖ್ಯೆ 166, ಕರಿಸಂದ್ರದಲ್ಲಿ ಸಂಗೀತ ಪ್ಯಾಕೇಜ್ ಎಂಬ ಅಂಗಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಅಂಗಡಿ ಮಾಲೀಕರಿಗೆ ರೂ.10,000/- ಹತ್ತು ಸಾವಿರ ದಂಡ ವಿಧಿಸಿ, ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಯಿತು.
*ದಾಸರಹಳ್ಳಿ ವಲಯ:*
ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ಉಪವಿಭಾಗದಲ್ಲಿ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
*ಮಹದೇವಪುರ ವಲಯ:*
ಮಹಾದೇವಪುರ ವಲಯದ ದೊಡ್ಡನೆಕ್ಕುಂದಿ, ಬಿ.ನಾರಾಯಣಪುರ ವಾರ್ಡ್, ಬ್ರೂಕ್ ಫೀಲ್ಡ್ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು ಹಾಗೂ ವಲಯ ವ್ಯಾಪ್ತಿಯ ಪಟ್ಟಂದೂರು, ಎಇಸಿಎಸ್ ಬಡಾವಣೆ, ಕಲ್ಕೆರೆ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ನಡೆಸಲಾಯಿತು.
*ಯಲಹಂಕ ವಲಯ:*
ಯಲಹಂಕ ವಲಯದ ಬೆಟ್ಟಹಳ್ಳಿ ಲೇಔಟ್ ನ ಜಿಕೆವಿಕೆ ಹಾರ್ಟಿಕಲ್ಚರ್ ಜಂಕ್ಷನ್, ಕೆಂಪೇಗೌಡ ವಾರ್ಡ್ 01, ಎಂ.ಎಸ್ ಪಾಳ್ಯದ ವಾರ್ಡ್ 03, ಕಾಫಿ ಬೋರ್ಡ್ ಮುಖ್ಯರಸ್ತೆಯಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ವಲಯದ ಅಮೃತಹಳ್ಳಿಯ ಮುಖ್ಯರಸ್ತೆಯಲ್ಲಿ ಅನಧಿಕೃತ ಒ.ಎಫ್.ಸಿ ಕೇಬಲ್ ತೆರವುಗೊಳಿಸಲಾಯಿತು.
ಮುಂದುವರೆದಂತೆ, ವಲಯದ ನಂಜಪ್ಪ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರಿಂದ ರೂ.9,000/- ಗಳ ದಂಡದ ಮೊತ್ತವನ್ನು ವಸೂಲಿ ಮಾಡಲಾಯಿತು.
*ರಾಜರಾಜೇಶ್ವರಿನಗರ ವಲಯ:*
ರಾಜರಾಜೇಶ್ವರಿ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಶಂಕರನಾಗ್ ವೃತ್ತದಿಂದ (ಬಿಬಿಎಂಪಿ ಕಚೇರಿ ಹತ್ತಿರ) ಸ್ಯಾಟಲೈಟ್ ಕ್ಲಬ್ ಸರ್ಕಲ್ ಕೊಮ್ಮಘಟ್ಟ ಮುಖ್ಯರಸ್ತೆವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಬಿಡಿಎ ಕಾಂಪ್ಲೆಕ್ಸ್ ಅನ್ನಪೂರ್ಣೇಶ್ವರಿ ನಗರದ ದೇವಸ್ಥಾನದ ರಸ್ತೆಯಿಂದ ಮುದ್ದಿನಪಾಳ್ಯ ಮುಖ್ಯರಸ್ತೆವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ವೇಳೆ ಅಂಗಡಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಗಳ ಬಳಕೆ ಕಂಡುಬಂದಿದ್ದು, ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು, 26 ಪ್ರಕರಣಗಳಿಂದ ರೂ. 31,600/- ಗಳ ದಂಡ ವಸೂಲಿ ಮಾಡಲಾಯಿತು ಹಾಗೂ ಇದೇ ವೇಳೆ ರಸ್ತೆ ಪಕ್ಕದಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ಕಸ ಎಸೆಯುತ್ತಿರುವ 25 ಪ್ರಕರಣಗಳಿಂದ ರೂ.62,500/- ಗಳ ದಂಡ ವಸೂಲಾತಿ ಮಾಡಲಾಯಿತು.
*ಬೊಮ್ಮನಹಳ್ಳಿ ವಲಯ:*
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಯೆಲಚೇನಹಳ್ಳಿ, ವಸಂತಪುರ ವ್ಯಾಪ್ತಿ, ರಾಜ್ಯೋತ್ಸವನಗರ ಹಾಗೂ ಉತ್ತರ ಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ವೇಳೆ ವಲಯಗಳ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಮಾರ್ಷಲ್ಗಳು, ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.