ಬೆಂಗಳೂರು: ಬೆಂಗಳೂರಿನ ಹವಾಮಾನ ಕ್ರಿಯೆಯ ಗುರಿಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿರುವ ವ್ಯಕ್ತಿಗಳು, ಸಮುದಾಯಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶೈಕ್ಷಣಿಕ ಸಂಸ್ಥೆಗಳನ್ನು ಗುರುತಿಸಿ ಆಚರಿಸಲು ಈ ಬ್ಲೂ ಗ್ರೀನ್ ಪ್ರಶಸ್ತಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
ಹವಾಮಾನ ಸವಾಲುಗಳನ್ನು ನಿಭಾಯಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿರುವ ಅನೇಕರು ಮಾಡಿರುವಂತಹ ಪ್ರಯತ್ನಗಳನ್ನು ಗುರುತಿಸಲು ಈ ಪ್ರಶಸ್ತಿಯ ಗುರಿಯಾಗಿದೆ. ಈ ಕೊಡುಗೆಗಳನ್ನು ಅಂಗೀಕರಿಸುವ ಮೂಲಕ, ಹವಾಮಾನ ಕ್ರಿಯಾಕೋಶವು ಅರ್ಥಪೂರ್ಣ ಪರಿಹಾರಗಳ ಕಡೆಗೆ ಹೆಚ್ಚಿನ ಜನರನ್ನು ಸೇರಲು ಪ್ರೇರೇಪಿಸುತ್ತದೆ
ಯಾರು ಅರ್ಜಿ ಸಲ್ಲಿಸಬಹುದು?
ಬ್ಲೂಗ್ರೀನ್ ಅವಾರ್ಡ್ಸ್ ವೇದಿಕೆಯು ಎಲ್ಲರನ್ನು ಸ್ವಾಗತಿಸುತ್ತದೆ. ಸಂಶೋಧಕರು, ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ವ್ಯಕ್ತಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಬದ್ಧವಾಗಿರುವ ಸಮುದಾಯಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ:
• ಆಸಕ್ತರು ತಮ್ಮ ಅರ್ಜಿಗಳನ್ನು ಫೆಬ್ರವರಿ 15, 2025 ರೊಳಗೆ ಗೂಗಲ್ ಫಾರ್ಮ್ ಮೂಲಕ ಸಲ್ಲಿಸಬಹುದು. ಹವಾಮಾನ ಕ್ರಿಯಾಕೋಶ ವೆಬ್ಸೈಟ್ನಲ್ಲಿಯೂ ಲಿಂಕ್ ಲಭ್ಯವಿದೆ – https://apps.bbmpgov.in/bcap/#engage
• ತಜ್ಞರ ಸಮಿತಿಯು ಅವರು ಮಾಡಿರುವಂತಹ ಕಾರ್ಯವೈಖರಿಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.
• ಉತ್ತಮ ಯೋಜನೆಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಅಂಗೀಕರಿಸಲಾಗುತ್ತದೆ
ಈ ಉಪಕ್ರಮದ ಭಾಗವಾಗಿ, ಬೆಂಗಳೂರಿನ ಎಲ್ಲಾ ಬ್ಲೂ ಗ್ರೀನ್ ಯೋಜನೆಗಳನ್ನು ಒಳಗೊಂಡ ಕಾಫಿ ಟೇಬಲ್ ಪುಸ್ತಕವನ್ನು ಪ್ರಕಟಿಸಲಾಗುವುದು. ಈ ಪುಸ್ತಕವು ನಗರದಾದ್ಯಂತ ನಡೆಯುತ್ತಿರುವ ನವೀನ ಮತ್ತು ಪ್ರಭಾವಶಾಲಿ ಕೆಲಸವನ್ನು ಪ್ರದರ್ಶಿಸುವ ಮೂಲಕ ಸಾಮೂಹಿಕ ಕ್ರಿಯೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ನಿಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಸುಸ್ಥಿರ ಬೆಂಗಳೂರನ್ನು ನಿರ್ಮಿಸಲು ಕೊಡುಗೆ ನೀಡಲು ಈ ಅನನ್ಯ ಅವಕಾಶವನ್ನು ಕಳೆದುಕೊಳ್ಳಬೇಡಿ.