ಬೆಂಗಳೂರು/ ಶಿವಮೊಗ್ಗ/ಬೆಳಗಾವಿ/ ಹಾಸನ/ ರಾಮನಗರ/ ಗಂಗಾವತಿ/ ದೇವಗಂಗೆಯನ್ನು ಭೂಮಿಗೆ ಇಳಿಸಿದಂತಹ ಭಗೀರಥ ಮಹರ್ಷಿಗಳ ಜಯಂತೋತ್ಸವ ವನ್ನೂ ರಾಜ್ಯದ ಮೂಲೆ ಮೂಲೆಗಳಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಗ್ರಾಮಗಳಲ್ಲಿ.. ಹಾಯ ತಾಲೂಕು ತಹಸಿಲ್ದಾರ್ ಅವರ ನೇತೃತ್ವದಲ್ಲಿ.. ಸಮಾಜ ಬಾಂಧವರು ಕಚೇರಿಯಲ್ಲಿ ಭಗೀರಥ ಮಹರ್ಷಿಗಳ ಫೋಟೋ ಇಟ್ಟು ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಫೋಟೋ ಇಟ್ಟು ತಳಿರು ತೋರಣಗಳಿಂದ ಸುಂಗರಿಸಿ.. ಯುವಕರ ಸಂಭ್ರಮಾಚರಣೆ ಮಾಡಿದರು..
ಅದೇ ರೀತಿ ಶಿವಮೊಗ್ಗ ಜಿಲ್ಲಾ ಕೇಂದ್ರವಾದ ಕುವೆಂಪುರಂಗ ಮಂದಿರದಲ್ಲಿ.. ಜಿಲ್ಲಾಡಳಿತ ಜಿಲ್ಲಾ ಕನ್ನಡ ಸಾಂಸ್ಕೃತಿಕ ಇಲಾಖೆ ವತಿಯಿಂದ.. ಜಿಲ್ಲಾ ಉಪ್ಪಾರ ಸಮಾಜ ಆಶ್ರಯದಲ್ಲಿ.. ಶಿವಮೊಗ್ಗ ತಾಲೂಕಿನ ಹತ್ತಿರದ ತಾಲೂಕು ಹಾಗೂ ಹತ್ತಿರ ಗ್ರಾಮಗಳಿಂದ.. ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಿದರು.. ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಶಿವಮೊಗ್ಗ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಬಸಪ್ಪನವರು ವಹಿಸಿದರು ಉದ್ಘಾಟನೆಯನ್ನು ಶಿವಮೊಗ್ಗ ತಾಲೂಕು ತಾಸಿಲ್ದಾರ್ ರಾಜೀವ್ ವಹಿಸಿದರು. ವೇದಿಕೆ ಮೇಲೆ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಎಷ್ಟು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ ದೇವೇಂದ್ರಪ್ಪ.. ಖಜಾಂಚಿ ಕಂಕರಿ ನಾಗರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಸರ್ಕಾರದ ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷರಾದಂತಹ ಚಂದ್ರ ಭೂಪಾಲ್.. ವೇದಿಕೆ ಹಾಜರಿದ್ದರು…
ಕಾರ್ಯಕ್ರಮದಲ್ಲಿ ಬೊಮ್ಮನಕಟ್ಟೆ ಮಂಜುನಾಥ್ ನಿರ್ದೇಶಕರಾದ ರೇಣುಕೇಶ್ ವಂಶಿ ಮೋಹನ್ ಪ್ರದೀಪ್.. ಮೂರ್ತಣ್ಣ. ಹನುಮಂತಪ್ಪ ಯುವ ಸೇನೆ ಮುರಳಿ ಮಾಲತೇಶ್… ಹಾರ್ನಳ್ಳಿ ರವಿಕುಮಾರ್ ಭಾಸ್ಕರ್.. ಕಾಶಿಪುರ ವಿಜಯಕುಮಾರ್ ಗಾಜನೂರು ವಿನಯ್.. ಮುಂತಾದ ಸಮಾಜ ಬಾಂಧವರು ಭಾಗವಹಿಸಿದ್ದರು…
ಇದಕ್ಕೂ ಜಿಲ್ಲಾ ಉಪ್ಪಾರ ಸಂಘದ ಕಚೇರಿಯಲ್ಲಿ ಭಗವಂತ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಕಾರ್ಯಕ್ರಮಕ್ಕೆ ತೆರಳಲಾಯಿತು ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜ ತಟ್ಟೆಹಳಿ ಮಾರ್ಷಟ್ಟಲ್ಲಿ ಹೊಳೆ ಹೊನ್ನೂರು ಆರ್ನಲ್ಲಿ ಕುಮ್ಸಿ ಗಾಜನೂರು ಕಾಶಿಪುರ ಬೊಮ್ಮನಕಟ್ಟೆ… ಬೇಡರ ಹೊಸಳ್ಳಿ.. ಶಿವಮೊಗ್ಗ ನಗರದ ಸಮಾಜ ಬಾಂಧವರಿಗೆ ಶುಭ ಕೊರಲಾಯಿತು.
ಶ್ರೀದುರ್ಗಮ್ಮ ಶ್ರೀ ಮರಿಯಮ್ಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಜರ್ಷಿ ಭಗೀರಥ ಜಯಂತಿ
ಶ್ರೀದುರ್ಗಮ್ಮ ಶ್ರೀ ಮರಿಯಮ್ಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಜರ್ಷಿ ಭಗೀರಥ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷರಾದ ಎಂ. ಯೋಗೇಶ್ , ಉಪಾಧ್ಯಕ್ಷರಾದ ಶ್ರೀನಿವಾಸ್. ಕಾರ್ಯದರ್ಶಿ ಕಿರಣ್ ಕುಮಾರ್ ಎಸ್.ಈ, ಖಚಾಂಚಿಗಳಾದ ಶಿವಪ್ರಸಾದ್, ಮಾಜಿ ಅಧ್ಯಕ್ಷರಾದ ತೇಜಸ್ವಿ, ನಿರ್ದೇಶಕರಾದ ರಾಜು ಹಾಜರಿದ್ದರು. ಜಯಂತಿ ಪ್ರಯುಕ್ತ ಸಿಹಿ ಹಂಚಲಾಯಿತು.
ಬೆಂಗಳೂರಿನ ಹರಿಹಳ್ಳಿಯಲ್ಲಿ ಭಗೀರಥ ಜಯಂತಿ ಆಚರಣೆ
ಬೆಂಗಳೂರಿನ ಹಾರೋ ಹಳ್ಳಿಯಲ್ಲಿ ಉಪ್ಪಾರ ಸಮಾಜದವರು ಸೇರಿಕೊಂಡು ಭಗೀರಥ ಜಯಂತಿ ಅಚ್ಚುಕಟ್ಟಾಗಿ ಆಚರಣೆ ಮಾಡಿದರು. ಇನ್ನು ಇದೇವೇಳೆ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಹಾರೋ ಹಳ್ಳಿಯಲ್ಲಿ ನೆಲೆಸಿರುವ ಸಮಾಜದವರು ಸೇರಿಕೊಂಡು ವಿಶೇಷವಾಗಿ ಮಹರ್ಷಿಗಳ ಜಯಂತಿ ಆಚರಣೆ ಮಾಡಿದರು, ಇದೇ ವೇಳೆ ಸಮಾಜದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು.
ಹಾಸನದಲ್ಲಿ ಭಗೀರಥ ಜಯಂತಿ ಆಚರಣೆ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಆಡಳಿತ ,ಅರಸೀಕೆರೆ ತಾಲೂಕು ಮತ್ತು ಶ್ರೀ ಭಗೀರಥ ಉಪ್ಪಾರ ಟ್ರಸ್ಟ್ (ರಿ), ಅರಸೀಕೆರೆ ವತಿಯಿಂದ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿನ ಮಕ್ಕಳು SSLC ಮತ್ತು PUC ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಮಾಡಲಾಯಿತು.
ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಗೀರಥ ಜಯಂತಿ ಆಚರಣೆ
ರಾಮನಗರ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಗೀರಥ ಜಯಂತಿ ಆಚರಣೆಯನ್ನಿ ಅಚಿಕ್ಕಟಾಗಿ ಮಾಡಲಾಯಿತು. ಭಗೀರಥ ಮಹರ್ಷಿ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿದರು.
ಉಪ್ಪಾರ ಸಮಾಜದವರು ಸೇರಿದಂತ ಅಧಿಕಾರಿ ವರ್ಗದವರು ಒಂದೆಡೆ ಸೇರಿಕೊಂಡು ಭಗೀರಥ ಮಹರ್ಷಿಗಳ ಕೊಡುಗೆಯನ್ನು ಕೊಂಡಾಡಿದರು. ಉಪ್ಪಾರ ಸಮುದಾಯ ಜನರಿಗೆ, ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಗಂಗಾವತಿ: ಶ್ರೀ ಭಗೀರಥ ಜಯಂತೋತ್ಸವ ಆಚರಣೆ
ನಗರದ ಶ್ರೀ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ಜಯಂತೋತ್ಸವವನ್ನು ಉಪ್ಪಾರ ಸಮಾಜದ ಬಾಂಧವರಿಂದ ಆಚರಣೆ ಮಾಡಲಾಯಿತು.ಎಲ್ಲರಲ್ಲಿ ಹಾಲಿನಂತೆ ಬೆರೆಯುವ ಗುಣವುಳ್ಳ ಉಪ್ಪಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ಸರಕಾರ ಸೂಕ್ತ ಅನುದಾನ ಒದಗಿಸುವ ಮೂಲಕ ಆರ್ಥಿಕ ನೆರವಿಗೆ ಮುಂದಾಗಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಹೇಳಿದರು.
ಅವರು ನಗರದ ಶ್ರೀ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಉಪ್ಪಾರ ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಆರ್ಥಿಕ ಉನ್ನತಿ ಹೊಂದಬೇಕೆಂದರು.ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಸಮಾಜ ಬಾಂಧವರು ಅಭಿವೃದ್ಧಿ ಹೊಂದಬೇಕಿದೆ ಭಗೀರಥನಂತೆ ಸತತ ಪ್ರಯತ್ನದೊಂದಿಗೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕೆಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪ್ರಯತ್ನಿ ಶೀಲರಿಗೆ ಶ್ರೀ ಭಗೀರಥ ಮಾರ್ಗದರ್ಶಿಯಾಗಿದ್ದಾನೆ, ಆತನ ಆದರ್ಶ, ಪೂರ್ವಜರು ಸಾಧಿಸದ್ದನ್ನು ಯಶಸ್ವಿಗೊಳಿಸಿ, ಘನಘೋರ ತಪಸ್ಸಿನ ಮುಖೇನ ತನ್ನ ದೇವಗಂಗೆ ಭೂಮಿಗೆ ತರಿಸಿದ ಭಗೀರಥ, ಹಠ, ಛಲ, ತಾಳ್ಮೆ ಹಾಗು ಮನವೊಲಿಕೆಯ ಗುಣದಿಂದ ಜಗತ್ಪçಸಿದ್ಧಿ ಹೊಂದಿದ್ದಾನೆ. ಪವಿತ್ರ ಗಂಗಾನದಿ ನೀರು ಔಷಧಿಗುಣ ಹೊಂದಿದ ಸರ್ವಕಾಲಿಕ ಶ್ರೇಷ್ಠ ಜಲ ಎಂದೇ ವೈಜ್ಞಾನಿಕವಾಗಿ ಪರಿಗಣಿಸಲ್ಪಟ್ಟಿದೆ ಎಂದರು.ಉಪ್ಪಾರ ಸಮಾಜದ ಗಂಗಾವತಿ ತಾಲೂಕು ಅಧ್ಯಕ್ಷ ವೆಂಕಟೇಶ್ ಅಮರಜ್ಯೋತಿ ಮಾತನಾಡಿ, ಜಾತಿ ಜನಗಣತಿಯಲ್ಲಿ ಉಪ್ಪಾರ ಸಮಾಜವನ್ನು ಕಡಿಮೆ ತೋರಿಸಲಾಗಿದೆ. ಜನಗಣತಿ ಸರಿಯಾಗಿ ಆಗಿಲ್ಲ, ಸಮಾಜ ಬಾಂಧವರು ರಾಜ್ಯದಾದ್ಯಂತ ಸುಮಾರು 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಸೋರಿಕೆ ಮಾಹಿತಿ ಪ್ರಕಾರ ಕೇವಲ ಏಳು ಲಕ್ಷ ಎಂದು ತೋರಿಸಲಾಗಿದೆ ಸರಕಾರ ಆಗಿರುವ ನ್ಯೂನ್ಯತೆ ಸರಿಪಡಿಸಲು ಮತ್ತೊಮ್ಮೆ ಗಣತಿ ಮಾಡಬೇಕು, ಉಪ ಜಾತಿಗಳ ಪರಿಗಣಿಸಬೇಕೆಂದು ಒತ್ತಾಯಿಸಿದರು. ನಗರಸಭಾ ಸದಸ್ಯ ನೀಲಕಂಠಪ್ಪ ಕಟ್ಟಿಮನಿ ಮಾತನಾಡಿ, ದೇವಗಂಗೆಯನ್ನು ಧರೆಗಿಳಿಸಿ ಜೀವಕೋಟಿ ದಾಹ ತಣಿಸಿದ ಶ್ರೀ ಭಗೀರಥ ಜೀವ ಸಂಕುಲಕ್ಕೆ ವರದಾನವಾಗಿದ್ದು, ಆತನ ಕಾರ್ಯವೈಖರಿ ಮಾದರಿ ಎಂದರು.
ನಗರಸಭೆ ನೂತನ ಅಧ್ಯಕ್ಷೆ ಹೀರಾಬಾಯಿ, ವಿಐಪಿ ಮೆಲೋಡಿಸ್ನ ಪಂಪಾಪತಿ ಇಂಗಳಗಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ದರೋಜಿ ದಾನಪ್ಪ, ಹಾಲಿ ಸದಸ್ಯರಾದ ವಾಸುದೇವ ನವಲಿ, ಸೋಮನಾಥ ಬಂಡಾರಿ, ತಾಲೂಕಾ ಉಪ್ಪಾರ ಸಮಾಜದ ಗೌರವಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಕಾರ್ಯಧ್ಯಕ್ಷ ಮುಕ್ಕಣ್ಣ ಮಾನಳ್ಳಿ, ಉಪಾಧ್ಯಕ್ಷ ಗೋವಿಂದಪ್ಪ ಹುಲಿಗಿ, ಕಾರ್ಯದರ್ಶಿ ಗೋವಿಂದಪ್ಪ ಚಿಲಕಟ್ಟು, ಕಾರ್ಯಕಾರಿ ಸದಸ್ಯ ಗೋಪಾಲ ಇಂಗಳಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶರಣಪ್ಪ ಕಟ್ಟಿಮನಿ, ಸದಸ್ಯ ಹುಲಿಗಿ ಯಮನೂರಪ್ಪ, ಮುಖಂಡರಾದ ರಾಮಣ್ಣ ಕುರಿತಲಿ, ಯಂಕಪ್ಪ ಹುಲಿಗಿ, ಯಂಕಪ್ಪ ಚಿಲಕಟ್, ನಾಗರಾಜ್ ಇಂಗಳಗಿ, ನಾಗರಾಜ್ ಬಳಗನೂರು, ರಂಗಪ್ಪ ಕಟ್ಟಿಮನಿ, ನಾರಾಯಣಪ್ಪ ಎಮ್ಮಿ, ಯುವ ಮುಖಂಡರಾದ ಮಂಜುನಾಥ ಕಟ್ಟಿಮನಿ, ಆದಾಪುರ ಹನುಮಂತಪ್ಪ, ಹನುಮಂತಪ್ಪ ಮಾನಹಳ್ಳಿ.ಭೀಮೇಶ್ ಉಪ್ಪಾರ, ವಿ.ಸುರೇಶ್ ಯಲ್ಲಪ್ಪ ಚಳ್ಳಾರಿ, ಗವಿಸಿದ್ದಪ್ಪ ದೇವರಮನಿ ಸೇರಿದಂತೆ ಸಮಾಜದ ಮುಖಂಡರು ಮತ್ತು ಹಿರಿಯರು ಭಾಗವಹಿಸಿದ್ದರು.