ಬೆಂಗಳೂರು: ನಗರದ ಹೆಚ್.ಬಿ.ಆರ್. ಲೇಔಟ್ ಆವರಣದ ಹೆಬ್ಬಾಳದಲ್ಲಿ ದಿನಂ ಪ್ರತಿ 40 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಹೊಸದಾಗಿ ನಿರ್ಮಿಸಲಿರುವ ದಿನಂ ಪ್ರತಿ 60 ಎಂ.ಎಲ್.ಡಿ ತ್ಯಾಜ್ಯ ನೀರಿನ ಸಂಸ್ಕರಿಸುವ ಘಟಕಕ್ಕೆ ಭೂಮಿ ಪೂಜೆಯ ಕಾರ್ಯಕ್ರಮವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ಎಂ.ದೇವರಾಜು,ಎಲ್.ಕುಮಾರ ನಾಯಕ್,ಅಪರ ಮುಖ್ಯ ಅಭಿಯಂತರರಾದ ಬಿ.ಎಸ್.ಜಯಲಕ್ಷ್ಮೀ, ಜಲಮಂಡಳಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.
ಹೆಚ್.ಬಿ.ಆರ್. ಲೇಔಟ್, ಲಿಂಗರಾಜಪುರಂ,. ಕೆ.ಜಿ.ಹಳ್ಳಿ, ಕಲ್ಯಾಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರಿನ ಪ್ರಮಾಣವು ಹೆಚ್ಚಾಗಿದ್ದು, ಇದರಿಂದ ಹೆಚ್ಚಿನ ಗಾತ್ರದ ಕೊಳವೆ ಮಾರ್ಗಗಳಿಂದ ಆಗಾಗ್ಗೆ ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿದ್ದು, ಹಾಗೂ ಮಳೆಗಾಲದಲ್ಲಿ ತ್ಯಾಜ್ಯ ನೀರು ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಹರಿಯುತ್ತಿರುತ್ತದೆ. ಈ ಯೋಜನೆಯಿಂದ ಹೆಚ್.ಬಿ.ಆರ್.ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಉಕ್ಕಿ ಹರಿಯುವುದನ್ನು ನಿಯಂತ್ರಿಸಬಹುದಾಗಿದೆ.