*ಬೆಂಗಳೂರು * : ಜನಪರ ಸರಕಾರದ ನೇತೃತ್ವದಲ್ಲಿ ಬೆಂಗಳೂರು ಜಲಮಂಡಳಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ *ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ತಿಳಿಸಿದರು.*
ಇಂದು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಹಾಗೂ ಓಳಚರಂಡಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ *”ಸರಳ ಕಾವೇರಿ ಹಾಗೂ ಸಂಚಾರಿ ಕಾವೇರಿ”* ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೇಸಿಗೆಯ ಸಂಧರ್ಭದಲ್ಲಿ ಬೇಡಿಕೆ ಹೆಚ್ಚಾಗುವ ಸಂಧರ್ಭದಲ್ಲಿ ಗಗನಕ್ಕೆ ಏರುವ ಟ್ಯಾಂಕರ್ ದರಕ್ಕೆ ಕಡಿವಾಣ ಹಾಕುವುದು ಹಾಗೆಯೇ, ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಸಂಚಾರಿ ಕಾವೇರಿ ಯೋಜನೆಯನ್ನು ಬೆಂಗಳೂರು ಜಲಮಂಡಳಿ ಜಾರಿಗೊಳಿಸಿದೆ. ಇನ್ನು ಮುಂದೆ ಬೆಂಗಳೂರು ನಾಗರೀಕರು ತಮ್ಮ ಬೆರಳ ತುದಿಯಲ್ಲೇ ಶುದ್ದ ಹಾಗೂ ಪ್ರಮಾಣೀಕೃತ ಕಾವೇರಿ ನೀರನ್ನು ಆರ್ಡ್ರ್ ಮಾಡಬಹುದಾಗಿದೆ. ತಂತ್ರಜ್ಞಾನ ಆಧಾರಿತವಾಗಿ ಟ್ಯಾಂಕರ್ ಸೇವೆಯನ್ನು ನೀಡಲು ಇಂತಹದ್ದೊಂದು ಯೋಜನೆಯನ್ನು ಜಾರಿಗೊಳಿಸಿದ ದೇಶದ ಮೊದಲ ಮಂಡಳಿ ಎನ್ನುವುದು ನಮ್ಮ ಹೆಗ್ಗಳಿಕೆಯಾಗಿದೆ. ಇದಕ್ಕಾಗಿ ಬೆಂಗಳೂರು ಜಲಮಂಡಳಿ ಹೊಸ ಮೊಬೈಲ್ ಆ್ಯಪ್ ಹಾಗೂ ವೆಬ್ಸೈಟ್ ಸಿದ್ದಪಡಿಸಿದೆ. ಈಗಾಗಲೇ 250 ಟ್ಯಾಂಕರ್ಗಳನ್ನು ಸಿದ್ದಗೊಳಿಸಲಾಗಿದ್ದು, 55 ಕಾವೇರಿ ಕನೆಕ್ಟ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ. ಸರಿಯಾದ ಸ್ಥಳ, ಸಮಯ ಮತ್ತು ಪ್ರಮಾಣದಲ್ಲಿ ನೀರು ಒದಗಿಸಲು ಬದ್ದರಾಗಿದ್ದೇವೆ. *ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.*
ಬೆಂಗಳೂರು ಜಲಮಂಡಳಿಯಿಂದ ದೇಶದಲ್ಲೆ ಮೊದಲ ಬಾರಿಗೆ ತಂತ್ರಜ್ಞಾನ ಆಧಾರಿತ ಟ್ಯಾಂಕರ್ ಸೇವೆ
ಇದೇ ರೀತಿಯಲ್ಲಿ ಬಿಡಬ್ಲೂಎಸ್ಎಸ್ಬಿಯಿಂದ ಸಮಾನ ಕಂತುಗಳ (ಇಎಂಐ) ಮೂಲಕ ಕಾವೇರಿ ಸಂಪರ್ಕ ಪಡೆಯುವ ಸರಳ ಕಾವೇರಿ ಯೋಜನೆಯ ಲೋಕಾರ್ಪಣೆ ಮಾಡಲಾಗುತ್ತಿದೆ. ಕಾವೇರಿ ನೀರಿನ ಹೊಸ ಸಂಪರ್ಕದ ‘ಪೊರೇಟಾ’ ಶುಲ್ಕವನ್ನು ಸಮಾನ ಕಂತುಗಳಲ್ಲಿ (ಇಎಂಐ) ಪಾವತಿಸಲು ಜಲಮಂಡಳಿ ಯೋಜನೆ ರೂಪಿಸಿದೆ. 600 ಅಡಿ ಬಿಲ್ಡ್ಅಪ್ ಏರಿಯಾದ ಮನೆಗಳಿಗೆ (ಸಣ್ಣ ನಿವೇಶನದಾರರಿಗೆ) 1,000 ಹಣ ಪಾವತಿಸಿ ಉಳಿದ ಹಣವನ್ನು ಕಂತುಗಳಲ್ಲಿ ಶುಲ್ಕ ಪಾವತಿಸುವ ಸೌಲಭ್ಯ ನೀಡಲಾಗಿದೆ. 600 ಅಡಿಗಳ ಬಿಲ್ಡ್ಅಪ್ ಏರಿಯಾಗಿಂತಲೂ ಹೆಚ್ಚಿನ ಹಾಗೂ ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್ಮೆಂಟ್ ಅಸೋಷಿಯೇಷನ್ಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಮಾನ ಕಂತುಗಳಲ್ಲಿ (ಇಎಂಐ) ಶುಲ್ಕ ಪಾವತಿಸುವ ಸುರ್ವಣಾವಕಾಶನ್ನು ನೀಡುವ “ಸರಳ ಕಾವೇರಿ” ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಂದಿದೆ. ಒಮ್ಮೆಲೆ ಡಿಮ್ಯಾಂಡ್ ನೋಟಿಸ್ ನ ಸಂಪೂರ್ಣ ಹಣ ಸಂಗ್ರಹ ಮಾಡಲು ಸಾಧ್ಯವಾಗದೇ ಇರುವ ಅಪಾರ್ಟ್ಮೆಂಟ್ಗಳಿಗೆ ಅನುಕೂಲವಾಗಲಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅನುಕೂಲ ಮಾಡುವ ಜನಪರ ಕಾಳಜಿಯ ಯೋಜನೆ ಇದಾಗಿದೆ. ಡಿಮ್ಯಾಂಡ್ ನೋಟೀಸ್ನ ಶೇಕಡಾ 20 ರಷ್ಟು ಪಾವತಿಸಿ ಇಎಂಐ ಪಡೆಯಲು ಅವಕಾಶವಿದ್ದು, ಉಳಿದ ಶೇಕಡಾ 80 ರಷ್ಟು ಹಣವನ್ನು ಪಾವತಿಸಲು 12 ತಿಂಗಳ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
*ಬೆಂಗಳೂರು ಜಲಮಂಡಳಿ ಅಧ್ಯಕ್ಷರಾ ಡಾ ರಾಮ್ ಪ್ರಸಾತ್ ಮನೋಹರ್ ಮಾತನಾಡಿ,* https://play.google.com/store/apps/details?id=com.bwssb.user.app ಹಾಗೂ ವೆಬ್ಸೈಟ್ ಮೂಲಕ ಗ್ರಾಹಕರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ನೊಂದಣಿ ಪ್ರಕ್ರಿಯೆಯ ನಂತರ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತಹ ಸಾಮರ್ಥ್ಯದ ಟ್ಯಾಂಕರ್ ಬುಕ್ಕಿಂಗ್ ಮಾಡಬೇಕು. ಬುಕ್ಕಿಂಗ್ ನಂತರ ಆ್ಯಪ್ ಮೂಲಕವೇ ಹಣ ಪಾವತಿಸಬೇಕು. ಹಣ ಪಾವತಿಸಿದ ನಂತರ ಬುಕ್ಕಿಂಗ್ ಕನ್ಪರ್ಮ ಆಗಲಿದೆ. 24 ಗಂಟೆಗಳ ಒಳಗಾಗಿ ಶುದ್ದ ಪ್ರಮಾಣೀತ ಕುಡಿಯುವ ನೀರು ಟ್ಯಾಂಕರ್ ಮೂಲಕ ಮನೆಬಾಗಿಲಿಗೆ ರವಾನೆಯಾಗಲಿದೆ. ಗ್ರಾಹಕರು ಟ್ಯಾಂಕರ್ ಚಲನೆಯನ್ನು ಜಿಪಿಎಸ್ ಲೈವ್ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬೇಡಿಕೆ ಹೆಚ್ಚಾದರೂ ಹೆಚ್ಚುವರಿ ಚಾರ್ಚ್ ಇಲ್ಲದೇ ಗ್ರಾಹಕರು ಬುಕ್ಕಿಂಗ್ ಮಾಡಿದ 24 ಗಂಟೆಯ ಒಳಗಾಗಿ ನೀರು ಸರಬರಾಜು ಮಾಡುವುದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಈ ಬಗ್ಗೆ ಗ್ರಾಹಕರಿಗೆ ತಮ್ಮ ಮೊಬೈಲ್ ಆ್ಯಪ್ ಮೂಲಕ ಹಾಗೂ ಮೆಸ್ಜ್ ಮೂಲಕ ಮಾಹಿತಿ ನೀಡಲಾಗುವುದು. ಅಲ್ಲದೇ, ಗಾಡಿ ಸಂಖ್ಯೆ ಹಾಗೂ ಡ್ರೈವರ್ ಸಂಖ್ಯೆಯೂ ತಲುಪಿಸಲಾಗುವುದು. ಯಾವುದೇ ತೊಂದರೆ ಆದರೆ ಆ ಬಗ್ಗೆ ದೂರು ನೀಡಲು ಸಹಾಯವಾಣಿ ಸೌಲಭ್ಯವೂ ಇರಲಿದೆ ಎಂದರು.
ಸರಳ ಕಾವೇರಿ ಯೋಜನೆ ಮೂಲಕ ನೀರಿನ ಸಂಪರ್ಕ ಪಡೆಯುಲು ಸುಲಭ ಕಂತುಗಳ ಸೌಲಭ್ಯ
*ಶಾಸಕರಾದ ಎಸ್ಟಿ ಸೋಮಖೇಖರ್ ಮಾತನಾಡಿ,* ಬೆಂಗಳೂರು ಜನತೆಗೆ ಶುದ್ದ ಕುಡಿಯುವ ನೀರು ಒದಗಿಸುವ ಜೊತೆಯಲ್ಲಿಯೇ ನಗರವನ್ನು ಶುದ್ದವಾಗಿರಿಸುವ ಕರ್ತವ್ಯದಲ್ಲಿ ಜಲಮಂಡಳಿ ತೊಡಗಿಕೊಂಡಿದೆ. ಟ್ಯಾಂಕರ್ ದರ ಏರಿಕೆಯಿಂದಾಗಿ ತೊಂದರೆಗೀಡಾಗುವಂತಹ ಜನರಿಗೆ ಈ ಯೋಜನೆಗಳು ಬಹಳಷ್ಟು ಉಪಕಾರಿಯಾಗಿರಲಿವೆ. ಬೆಳೆಯುತ್ತಿರುವ ಬೆಂಗಳೂರು ನಗರದ ದಾಹವನ್ನು ತೀರಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳ ದೂರದೃಷ್ಟಿ ಬಹಳ ದೊಡ್ಡದ್ದಾಗಿದೆ. ನೀರಿನ ಬವಣೆ ಹೆಚ್ಚಾಗದೇ ಇರುವ ರೀತಿಯಲ್ಲಿ ಬೆಂಗಳೂರು ಜಲಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು. ಇದೇ ವೇಳೆ 1000 ರೂ ನೀಡಿ ಕಾವೇರಿ ಸಂಪರ್ಕ ಪಡೆದವರಿಗೆ ಪ್ರಮಾಣಪತ್ರ ಹಾಗೂ ಮೀಟರ್ ವಿತರಿಸಲಾಯಿತು.