ದಕ್ಷಿಣ ಕನ್ನಡ,ಹೊನ್ನಾವರ: ಬಿಜೆಪಿಯ ಸದಸ್ಯತ್ವ ಅಭಿಯಾನ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದು, ಅದೇ ರೀತಿ ಹೊನ್ನಾವರದಲ್ಲಿ ಸಹ ಅದ್ದೂರಿಯಾಗಿ ಬಹಳ ವೇಗವಾಗಿ ಸಾರ್ವಜನಿಕರಿಗೆ ಬಿಜೆಪಿಯ ಮಾಹಿತಿಯನ್ನು ಹೇಳುವ ಮೂಲಕ ಅದರ ಸಿದ್ಧಾಂತಗಳನ್ನು ಹೇಳುವ ಮೂಲಕ ಕೆಲಸ ಕಾರ್ಯಗಳನ್ನು ಹೇಳುವ ಮುಖಾಂತರ ಸದಸ್ಯತ್ವ ಅಭಿಯಾನವನ್ನು ಬಿಜೆಪಿ ನಾಯಕರು ಮುಖಂಡರು ಕಾರ್ಯಕರ್ತರು ಮಾಡುತ್ತಿದ್ದಾರೆ.
ಹೊನ್ನಾವರ ಮಂಡಲ ಓಬಿಸಿ ಮೋರ್ಚಾ ವತಿಯಿಂದ ಇಂದು ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿ ಬಡಗಣಿ. ಅಗ್ರಹಾರ. ಕಲ್ಕಟ್ಟಿ.ಹಳದಿಪುರ ಭೂತಗಳಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಮೇಘಾ ಅಭಿಯಾನ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಎಸ್.ಹೆಗಡೆ ರವರ ಮತ್ತು ಹೊನ್ನಾವರ ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷರಾದ ಗೋವಿಂದ ಗೌಡ ರವರ ನೇತೃತ್ವದಲ್ಲಿ. ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಜೇಂದ್ರ ನಾಯ್ಕ ಉಪಸ್ಥಿತಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯೋಗಿಶ ಮೇಸ್ತಾ.ಗಣಪತಿ ಗೌಡ.ಪಕ್ಷದ ಪ್ರಮುಖರಾದಎಂ ಎಸ್ ಹೆಗಡೆ.ಎನ್ ಎಸ್ ಹೆಗಡೆ , ಮಹಾಬಲೇಶ್ವರ ಮಡಿವಾಳ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜು ಗೌಡ ಹಳದಿಪುರ ಸುಭಾಸ್ , ದೇವೇಂದ್ರ ಹಾಗೂ ಓಬಿಸಿ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು