ಬೆಂಗಳೂರು: ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ವಿಜಯನಗರ ಹಂಪಿನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ”ರಕ್ತದಾನ ಹಾಗೂ ಸಾಮಾನ್ಯ ಆರೋಗ್ಯ ಶಿಬಿರ’ವನ್ನು ಆಯೋಜನೆ ಮಾಡಲಾಗಿತ್ತು.
ಸೋಮವಾರ ಬೆಳಿಗ್ಗೆಯಿಂದ ಸಂಜೆ 5 ಗಂಟೆಯ ವರೆಗೆ ಸುಮಾರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ವೈದ್ಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು, ಅದಕ್ಕೆ ರಾಷ್ಟ್ರೋತ್ಥಾನ ಸಹಾಯದ ಮೂಲಕ ಮಾಡಿರುವುದು ಗಮನಿಸಬಹುದು.
ಎಲೆ ಮರೆ ಕಾಯಿಯಂತೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ. ವರ್ಷದ ಉದ್ದ್ದಕ್ಕೂ ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ದೃಷ್ಟಿಯಿಂದ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.ಬೆಳಗ್ಗೆಯಿಂದ ಸಂಜೆ ವರೆಗೂ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ತದಾನವನ್ನು ಮಾಡಿದರು.
ಉಚಿತ ರಕ್ತದಾನದ ಶಿಬಿರದ ಬಗ್ಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಯುರ್ವೇದಿಕ್ ಎಂಡಿ ಹಾಗು ಪ್ರಾಚಾರ್ಯರಾದ ಡಾ.ಕಿರಣ್ ಎಂ ಗೌಡ್ ಮಾತನಾಡಿ, ಆಯುರ್ವೇದ ಆಸ್ಪತ್ರೆ 1996ರಿಂದ ಪ್ರಾರಂಭವಾಗಿ ಸಾಕಷ್ಟು ವರ್ಷದ ಉದ್ದಕ್ಕೂ ಉಚಿತ ಅನೇಕ ಸೇವೆ ಹಾಗು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಆಸ್ಪತ್ರೆಯು ಆದಿಚುಂಚನಗಿರಿ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ, ಮಠವು ಯಾವಾಗಲೂ ಅನ್ನದಾಸೋಹ, ಅಕ್ಷರ ದಾಸೋಹ ಹಾಗು ಆರೋಗ್ಯ ದಾಸೋಹ ಮಾಡುವುದರಲ್ಲಿ ಮುಂದೆ ಇದೆ. ಕೋರೋನ ಕಾಲದಲ್ಲಿ ನೂರಾರು ಜನ ತಲೇಸೆಮಿ ರೋಗಿಗಳಿಗೆ ಅನುಕೂಲಕರವಾಗಲೆಂದು ರಕ್ತದಾನವನ್ನು ಮಾಡಲಾಗಿತ್ತು, ಸಾಕಷ್ಟು ರಕ್ತ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಗೂ ಅವರ ಅಟೆಂಡರ್ ಗಳಿಗೆ ದಿನದ ಮೂರು ಕಾಲವು ಅನ್ನದಾಸೋಹ ನಡೆಸಿಕೊಂಡು ಬರಲಾಗುತ್ತಿದೆ, ಅದನ್ನು ಮುಂದೆಯೂ ಸಹಾ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ನಡೆಯಲಿದೆ ಎಂದರು.
ನಿತ್ಯ ಪಡೆಯುತ್ತಿದ್ದಾರೆ 300 ರಿಂದ 400 ಜನ ಚಿಕಿತ್ಸೆ
ಪ್ರತಿ ದಿನ 300ರಿಂದ 400 ಜನ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಬೇರೆಕಡೆ ಚಿಕಿತ್ಸೆ ಪಡೆದುಕೊಂಡು ವಿಫಲವಾಗಿರುತ್ತಾರೆ ಅಂಥವರಿಗೆ ಅತ್ಯಾಧುನಿಕ ಆಯುರ್ವೇದ ಚಿಕಿತ್ಸೆ ಮೂಲಕ ಪೈಲ್ಸ್, ಕಣ್ಣು, ಕಿವಿ, ಗಂಟಲು, ಮಹಿಳೆಯರಿಗೆ ಹೆರಿಗೆಯನ್ನು ಆಯುರ್ವೇದಲ್ಲಿ ಗರ್ಭ ಕಮಲ ಎಂಬ ಚಿಕಿತ್ಸೆ ಮೂಲಕ ಬಹಳ ಸುಲಬವಾಗಿ ಹೆರಿಗೆ ಮಾಡುವ ವಿಧಾನವನ್ನು ತಿಳಿದುಕೊಳ್ಳಬಹುದು. ಪಂಚೇಂದ್ರಿಯಗಳಿಗೆ ಸಂಬಧಿಸಿದಂತೆ ಸುಮಾರು 50ಕ್ಕಿಂತ ಹೆಚ್ಚು ರೋಗಿಗಳು ನಿತ್ಯ ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಧ್ಯಮದ ಮೂಲಕ ಕೇಳುವುದೇನೆಂದರೆ ಆಯುರ್ವೇದದಲ್ಲಿ ಯಾರೆಲ್ಲ ಚಿಕಿತ್ಸೆ ಪಡೆಯಬೇಕು ಎನ್ನುವವರು ವಿಜಯನಗರದ ಹಂಪಿನಗರದಲ್ಲಿರುವ ಶ್ರೀ ಕಾಲ ಭೈರವೇಶ್ವರ ಸ್ವಾಮಿ ಆಯುರ್ವೇದ ಆಸ್ಪತ್ರೆಯಲ್ಲಿ ಪಡೆಯಬಹುದೆಂದು ಸಾರ್ವಜನಿಕರಿಗೆ ಕರೆ ನೀಡಿದರು, ಅದರ ಜೊತೆಗೆ ಆಸ್ಪತ್ರೆಯ ದೊರೆಯುವ ಸೌಲಭ್ಯವನ್ನು ಬಹಳ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ರೀತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಸಮಾಜ ಮುಖಿ ಕೆಲಸಕ್ಕೆ ಮಠದ ಶ್ರೀಗಳಿಂದ ಪ್ರೋತ್ಸಾಹ
ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಸುಪ್ರೀತ್ ಎಂ ಜೆ ಮಾತನಾಡಿ, ವೈದ್ಯರ ದಿನಾಚರಣೆ ಆಗಿದ್ದರಿಂದ ಹೆಚ್ಚಿನದಾಗಿ ವೈದ್ಯರೇ ರಕ್ತದಾನ ಮಾಡಿದ್ದಾರೆ, ಜೊತೆಗೆ, ಆಸ್ಪತ್ರೆ ಎಲ್ಲಾ ವಿಭಾಗದವರು, ಸಾರ್ವಜನಿಕರು ರಕ್ತ ದಾನ ಮಾಡುವಲ್ಲಿ ಭಾಗವಹಿಸಿದ್ದರು. ಆಸ್ಪತ್ರೆ ವತಿಯಿಂದ ವರ್ಷದಲ್ಲಿ ಹಲವು ಕಾರ್ಯಾಗಾರಗಳನ್ನು ಹಾಮಿಕೊಳ್ಳಲಾಗುತ್ತದೆ. ಅದರಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಉಚಿತ ಔಷಧಿ ವಿತರಣೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತದೆ. ಸ್ವಾಮೀಜಿಯವರ ಆಶೀರ್ವಾದದಿಂದ ಪ್ರತಿಯೊಂದು ಜನೋಪಯೋಗಿ ಕಾರ್ಯಗಳು ನಡೆಯುತ್ತಿವೆ, ಕೇವಲ ನಮ್ಮ ಆಸ್ಪತ್ರೆಯಲ್ಲಿ ಅಲ್ಲದೆ ಇತರ ಕಡೆಗಳಲ್ಲಿಯೂ ಸಹಾ ಕ್ಯಾಂಪ್ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಆಸ್ಪತ್ರೆಯಿಂದ ಮಾಡುವ ಪ್ರತಿಯೊಂದು ಕಾರ್ಯಾಗಾರಗಳು ಉಚಿತವಾಗಿದ್ದು ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲಿ ಹಾಗೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮೊದಲ ಭಾರಿ ರಕ್ತದಾನ ಮಾಡಿದ್ದೇವೆ!
ಇನ್ನು ವೈದ್ಯರ ದಿನಾಚರಣೆ ಹಿನ್ನೆಲೆ ಆಸ್ಪತ್ರೆ ಯಲ್ಲಿ ಕೆಲಸ ಮಾಡುವ ಯುವ ವೈದ್ಯರಾದ ಶರತ್ ಹಾಗು ದಿವ್ಯ ಅವರು ಮಾತನಾಡಿ, ನಾವು ಮೊದಲ ಭಾರಿಗೆ ರಕ್ತದಾನವನ್ನು ಮಾಡುತ್ತಿದ್ದೇವೆ, ಮೊದಲು ನಮಗೆ ತುಂಬಾ ಭಯವಿತ್ತು, ತದನಂತರ ನಮ್ಮ ಪೋಷಕರಿಗೆ ತಿಳಿಸಿದಾಗ ಧೈರ್ಯದಿಂದ ರಕ್ತದಾನ ಮಾಡಿದ್ದೇವೆ, ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ, ಕಣತಃ ಕ್ಯಾಂಪ್ ಗಳನ್ನು ಮಾಡಬೇಕು, ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು ರಕ್ತವು ಮನುಷ್ಯನಲ್ಲಿ ಪುನರ್ ನಾವೀಕರಣವಾಗಬೇಕು ಆಗ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ರಕ್ತದಾನ ಶಿಬಿರದಲ್ಲಿ ಸಂಸ್ಥೆ ಹಲವು ವೈದ್ಯರು, ದಾದಿಯರು, ಸಿಬ್ಬಂದಿ ವರ್ಗ, ಸಾರ್ವಜನಿಕರು ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿಯೂ ಸಹಾ ಅಂಗ ಸಂಸ್ಥೆ ವತಿಯಿಂದ ಹತ್ತು ಹಲವು ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.