ಬೆಂಗಳೂರು: ತಲೆಸೀಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ರಕ್ತ ಪೂರೈಕೆ ಮಾಡುವ ಸಲುವಾಗಿ ಬೈಕ್ ಟ್ಯಾಕ್ಸಿ ವೆಲ್ಫೇರ್ ಸಂಘದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು, 100 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿ ಮೊದಲನೇ ಕಾರ್ಯಕ್ರಮದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿರುವ ಬೈಕ್ ಟ್ಯಾಕ್ಸಿ ವೇಲ್ ಫೇರ್ ಸಂಘದ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು ಸಾರ್ವಜನಿಕರು ಸ್ನೇಹಿತರು ಈ ಒಂದು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ಮಕ್ಕಳ ಜೀವ ಉಳಿಸುವ ಕಾರ್ಯಕ್ಕೆ ನೆರವಾದರೂ. ಬೈಕ್ ಟ್ಯಾಕ್ಸಿ ವೆಲ್ ಪೇರ್ ಅಸೋಸಿಯೇಷನ್ ತಂಡಕ್ಕೆ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರ ಸಹಕಾರ ನೀಡಿದೆ. ತಲೆಸೀಮಿಯಾ ರೋಗದ ಮಕ್ಕಳಿಗೆ ಪ್ರತಿ 15 ದಿನಕ್ಕೆ ರಕ್ತ ಬದಲಾಯಿಸಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚು ರಕ್ತ ಬೇಕಾಗುತ್ತದೆ, ಹೀಗಾಗಿ ಅಂತಹ ಮಕ್ಕಳಿಗೆ ರಕ್ತದಾನ ಮಾಡುವ ಮೂಲಕ ಸಂಘದಿಂದ ಕಿರು ಸಹಾಯ ಮಾಡಲಾಗಿದೆ ಎಂದರು.
ಸಂಘದ ಅಧ್ಯಕ್ಷ ಆದಿನಾರಾಯಣ್ ಮಾತನಾಡಿ, ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಸುಮಾರು 100ಕ್ಕಿಂತ ಹೆಚ್ಚು ದಾನಿಗಳು ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ಸಂಘಟನೆಯಿಂದ ಬೈಕ್ ಚಾಲಕರಿಗೆ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಶ್ರಮ್ ಕಾರ್ಡ್ ,ಆಯುಷ್ಮಾನ್ ಕಾರ್ಡ್ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅಲ್ಲದೆ ಸಂಘದ ಕಚೇರಿಯಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತದೆ. ಇದನ್ನು ಚಾಲಕರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಸಂಘದ ವತಿಯಿಂದ ಮಾಡುತ್ತಿರುವ ಕಾರ್ಯಗಳೆಲ್ಲವೂ ಸಹ ಚಾಲಕರಿಗೆ ಸುಲಭವಾಗಿ ಸಿಗಲಿ, ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡುವುದನ್ನು ಸಹ ಉಚಿತವಾಗಿ ಮಾಡಿಕೊಡಲಾಗುತ್ತದೆ ಹಾಗೂ ತಿಳಿಸಲಾಗುತ್ತದೆ ಎಂದರು. ಸಂಘವು ನೂತನವಾಗಿ ಪ್ರಾರಂಭವಾಗಿದೆ, ಹೊಸ ವರ್ಷದ ದಿನದಂದು ರಕ್ತದಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದು ಶ್ಲಾಘನೆ ಹಾಗೂ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ ಸಂಘದ ಮಾರ್ಗದರ್ಶಕರಾದಂತಹ ಅನಿಲ್ ಹಾಗೂ ಸಂಘದ ಅಧ್ಯಕ್ಷರಾದ ಆದಿನಾರಾಯಣ ಹಾಗೂ ಇತರ ಸಂಘದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇನ್ನೂ ಇದೆ ವೇಳೆ ರಾಷ್ಟ್ರೋತ್ಥಾನ ಕೇಂದ್ರದ ವೈದ್ಯರಾದ ಡಾ. ಶೈಲಜಾ ನೇತೃತ್ವದ ತಂಡ ಹಾಗೂ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಯಶಸ್ವಿಗೊಳಿಸಿದರು.