ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕೆ ವಿ ನಂಜುಂಡಸ್ವಾಮಿ ಅವರು ಸ್ಪರ್ಧೆ ಮಾಡಿದ್ದು, ಏ.4 ರಂದು ನಾಮ ಪತ್ರ ಸಲ್ಲಿಸಿದ್ದು , ಏಪ್ರಿಲ್ 5ರಂದು ನಾಮ ಪತ್ರ ಅಂಗೀಕಾರವಾಗಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ದಯಾನಂದ ಅವರು ತಿಳಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ ವಿ ನಂಜುಂಡಸ್ವಾಮಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಎಲ್ಲಾ ದಾಖಲೆಗಳು ಸರಿಯಾಗಿದ್ದು ಯಾವುದೇ ಲೋಕ ದೋಷಗಳಿಲ್ಲದೆ ನಮ್ಮ ಉಮೇದುಗಾರಿಕೆಯನ್ನು ಜಿಲ್ಲಾಧಿಕಾರಿಗಳು ಅಂಗೀಕರಿಸಿರುವುದು ಸಂತೋಷಕರ ವಿಚಾರ ಎಂದರು. ಏಪ್ರಿಲ್ 8ರಂದು ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ ಆದರೆ ನಾನು ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದೆ ಸರಿಯುವುದಿಲ್ಲ, ಯಾವುದೇ ಪಕ್ಷದ ಆಸೆ ಆಮಿಷಗಳಿಗೆ ನಾನು ಒಳಗಾಗುವುದಿಲ್ಲ ಎಂದು ನಂಜುಂಡಸ್ವಾಮಿಯವರು ತಿಳಿಸಿದ್ದಾರೆ.
ಕೆ ವಿ ನಂಜುಂಡಸ್ವಾಮಿಯವರು ಅಪ್ಪಟ ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು ಸಹ ಆಗಿದ್ದರು. ಇದೀಗ ಉತ್ತರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವೆ ಹಾಗೂ ಕೇಂದ್ರ ಸಚಿವರಾದಂತಹ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ಬಿಜೆಪಿ ನಾಯಕರ ಹಾಗೂ ಸಂಘಟಕರ, ಮುಖಂಡರ ಆಡಳಿತ ವೈಕರಿಗೆ ಬೇಸತ್ತು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದರಾಗಿದ್ದರು, ಕ್ಷೇತ್ರವಲ್ಲದ ಕ್ಷೇತ್ರಕ್ಕೆ ಬಿಜೆಪಿಯವರು ಅವರ ಒಳ ಕುಮ್ಮಕ್ಕಿನಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಟಿಕೆಟ್ ನೀಡಿರುವುದು ಪಕ್ಷದಲ್ಲಿ ಸಾಕಷ್ಟು ಅಸಮಾಧಾನ ಉಂಟಾಗಿತ್ತು. ಹಾಗಾದರೆ ಬೆಂಗಳೂರು ಉತ್ತರಕ್ಕೆ ಬಿಜೆಪಿಯಲ್ಲಿ ಯಾವ ಸಮರ್ಥ ಅಭ್ಯರ್ಥಿಯು ಇಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ?
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರ ಕೊಡುಗೆ ಏನು? ಸ್ಥಳೀಯ ಮಟ್ಟದಲ್ಲಿ ಎಲ್ಲಿಯೂ ಸಹ ಅವರು ಗುರುತಿಸಿಕೊಂಡಿಲ್ಲ, ಯಾವುದೇ ಸ್ಥಳೀಯ ಸಮಸ್ಯೆಗಳು ಸಹ ಅವರಿಗೆ ಅರಿವಾಗಿಲ್ಲ, ಹೀಗಾಗಿ ಸ್ಥಳೀಯರ ಜನರ ನಾಡಿಮಿಡಿತ ಅವರಿಗೆ ತಿಳಿದಿಲ್ಲ, ಇಂತಹ ವ್ಯಕ್ತಿಯನ್ನು ಈ ಬಾರಿ ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷವು ನೀಡಿರುವುದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಆಘಾತವನ್ನು ತಂದುಕೊಡುತ್ತಾರೆ ಎಂದು ಇದೇ ವೇಳೆ ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಮತದಾರ ಬಾಂಧವರು ಸಂಸತ್ತಿಗೆ ನನ್ನನ್ನು ಆಯ್ಕೆ ಮಾಡಿದರೆ ಮೊಟ್ಟ ಮೊದಲನೇದಾಗಿ ಸ್ಥಳೀಯ ಮಟ್ಟದಲ್ಲಿ ಇರುವ ಸಮಸ್ಯೆಗಳಿಗೆ ಮೊದಲ ಆದ್ಯತೆ ಕೊಡುತ್ತೇನೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದರು.
ಇನ್ನು ಏಪ್ರಿಲ್ 8ರಂದು ಪಕ್ಷೇತರ ಅಭ್ಯರ್ಥಿಯಾಗಿರುವ ಚಿಹ್ನೆ ಚುನಾವಣಾ ಅಧಿಕಾರಿಗಳಿಂದ ಬರಲಿದ್ದು, ತದನಂತರ ನನ್ನ ಚುನಾವಣಾ ಪ್ರಚಾರವನ್ನು ಕ್ಷೇತ್ರದಲ್ಲಿ ಮನೆಮನೆಗೆ ತೆರಳಿ ನನ್ನ ಕೆಲಸ ಕಾರ್ಯಗಳ ಹಾಗೂ ಧ್ಯೇಯ ಉದ್ದೇಶಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತೇನೆ ಎಂದರು. ಬ್ರದರ್ ಪ್ರಭುಗಳು ನನಗೆ ಒಂದು ಅವಕಾಶವನ್ನು ಈ ಬಾರಿ ಚುನಾವಣೆಯಲ್ಲಿ ಕೊಟ್ಟರೆ ಮುಂದೆ ನಿಮಗೆ ಐದು ವರ್ಷಗಳ ಕಾಲ ಸೇವೆ ಮಾಡುವ ಅವಕಾಶ ನನಗೆ ಸಿಗುತ್ತದೆ ಎಂದು ಕ್ಷೇತ್ರದ ಜನರಿಗೆ ತಿಳಿಯಪಡಿಸಿದರು.