ಬೆಂಗಳೂರು: ಬೆಂಗಳೂರು ಸರ್ಜಿಕಲ್ ಸೊಸೈಟಿ ಸಂಘಕ್ಕೆ 50 ವರ್ಷ ತುಂಬಿದ ಹಿನ್ನೆಲೆ, 7 ಜನ ಸರ್ಜನ್ ಗಳಿಂದ ಫೋಟೋಗ್ರಾಫಿ, ಪೇಂಟಿಂಗ್ ಎಕ್ಸಿಬಿಷನ್ ಹಮ್ಮಿಕೊಂಡು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಡಾಕ್ಟರ್ ವೆಂಕಟೇಶ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1973 ರಲ್ಲಿ ಸಂಘ ಸ್ಥಾಪನೆಯಾಗಿ ಇಂದಿಗೆ 50 ವರ್ಷ ತುಂಬಿದೆ ಹಿನ್ನೆಲೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ, ವರ್ಣ ರಂಜಿತ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ, ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಪ್ರದರ್ಶನ ನಡೆಸಲಾಗುತ್ತದೆ.
ವೈದ್ಯರು ಕೇವಲ ವೈದ್ಯ ವೃತ್ತಿಯಲ್ಲಿ ತೊಡಗುವುದಲ್ಲದೆ, ಇತರ ಕಲೆಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವದರಿಂದ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಎಂದರು. ಸಂಘದಿಂದ ಈಗಾಗಲೇ ಬೈಕ್ ಕಾರ್ ರ್ಯಾಲಿಗಳನ್ನು ಸಹ ಮಾಡಲಾಗಿದ್ದು ಯೋಗ, ವಾಕ್ತಾನ್ ಸಹ ಈಗಾಗಲೇ ಮಾಡಲಾಗಿದೆ, ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಸಾರ್ವಜನಿಕರು ವೈದ್ಯರ ಬಳಿ ಬರುತ್ತಾರೆ, ಇದೀಗ ನಾವು ಸಾರ್ವಜನಿಕರ ಹತ್ತಿರನೆ ವೈದ್ಯರು ಹೋಗಿ ಹರಿವನ್ನು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಡಾ. ಹಿಮಗಿರೀಶ್ ರಾವ್ ಮಾತನಾಡಿ, ವೈದ್ಯರು ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದಲ್ಲಿ ಕಲೆ ಚಿತ್ರಕಲೆಯಲ್ಲಿಯು ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಪ್ರದರ್ಶನದಲ್ಲಿ ಛಾಯಾಚಿತ್ರ ಹಾಗೂ ಪೇಂಟಿಂಗ್ ಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ, 7 ಜನ ಶಸ್ತ್ರ ಚಿಕಿತ್ಸಕರು ಮಾಡುವ ಕಲೆಗಳಿಂದ ಬಂದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ದೇಣಿಗೆಯಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾಕ್ಟರ್ ಮಂಜುನಾಥ್ ಬಿಡಿ ಉಪಸ್ಥಿತರಿದ್ದರು.