ಬೆಂಗಳೂರು:ಪದ್ಮನಾಭನಗರ ವಿಧಾನಸಭಾ: ಗಣೇಶಮಂದಿರ ವಾರ್ಡ್: ಬನಶಂಕರಿ 2ನೇ ಹಂತದ ಬೃಂದಾವನ ಉದ್ಯಾನವನ ಅವರಣದಲ್ಲಿ ದೇವಗಿರಿ ನಗೆ ಯೋಗಕೂಟ ವಿಶ್ವ ಮಹಿಳಾ ದಿನಾಚರಣೆಯನ್ನು *ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಲಕ್ಷ್ಮಿ ಉಮೇಶ್, ಬಿಜೆಪಿ ಮುಖಂಡರಾದ ಉಮೇಶ್ ಕಬ್ಬಾಳ್ ರವರು* ಮತ್ತು ಶ್ಯಾಮಲ ಶಣೈ, ವಿಜಯಲಕ್ಷ್ಮಿರಾಜಣ್ಣ, ಪ್ರಭ ಅಮರನಾಥ್, ವಿಜಯಲಕ್ಷ್ಮಿ ನಟರಾಜನ್, ಸುರೇಖಾ ಪ್ರಭುರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ದೇವಗಿರಿ ನಗೆ ಯೋಗಕೂಟದ ಮಹಿಳೆಯರಿಂದ ಗೀತೆಗಾಯನ, ಕೋಲಾಟ, ಗಾದೆ ಮಾತುಗಳು, ರಸಪ್ರಶ್ನೆ ಮತ್ತು ಭರತನಾಟ್ಯ, ನಾಟಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇವಗಿರಿ ನಗೆ ಯೋಗಕೂಟದಲ್ಲಿ 60ವರ್ಷ ಮೇಲ್ಪಟ್ಟ ಮಹಿಳೆಯರು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿಯ ನಾಗರಿಕರು ಜೀವನದ ಸಂತೋಷ, ಹುಮಸ್ಸು ನಿಂದ ಇರಲು ವಯಸ್ಸು ಅಡ್ಡಿಯಿಲ್ಲ ಎಂದು ಪ್ರದರ್ಶನ ಮಾಡಿದರು.
ಲಕ್ಷ್ಮಿ ಉಮೇಶ್ ರವರು ಮಾತನಾಡಿ ಮಹಿಳೆ ತಾಯಿ, ತಂಗಿ, ಅಕ್ಕ, ಸೂಸೆ ಯಾಗಿ ಇಡಿ ಕುಟುಂಬ ಮತ್ತು ಸಮಾಜದ ಅಭಿವೃದ್ದಿಗೆ ಶ್ರಮಿಸುವಳು.
ರಾಜಕೀಯ ಕ್ಷೇತ್ರದಲ್ಲಿ ಶೇಕಡ 50ರಷ್ಟು ಮೀಸಲಾತಿ ಇರುವ ಕಾರಣದಿಂದ ಮಹಿಳೆಯರಿಗೆ ರಾಜಕೀಯ ರಂಗದಲ್ಲಿ ಉತ್ತಮ ಅವಕಾಶ ಸಿಗುತ್ತಿದೆ.
ಕಿತ್ತೂರು ರಾಣಿ ಚನ್ನಮ್ಮ, ಓನಕೆ ಓಬವ್ವ, ಇಂದು ದೇಶದ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು, ಇಸ್ರೋ ರಾಕೆಟ್ ಉಡಾವಣೆಯಲ್ಲಿ ರೂಪ ಎಂಬ ಮಹಿಳೆ ಪ್ರಮುಖ ಪಾತ್ರವಹಿಸಿದ್ದರು, ಇನ್ಪೋಸಿಸ್ ಪೌಂಡೇಷನ್ ಸುಧಾಮೂರ್ತಿರವರು ರಾಜ್ಯಸಭಾ ಸದಸ್ಯರಾಗಿ ನೇಮಕರಾಗಿದ್ದಾರೆ ಮಹಿಳೆಯರು ಇಂದು ಪುರುಷರಷ್ಟೆ ಸರಿಸಮಾನವಾಗಿ ಸಾಧನೆ ಮಾಡಿದ್ದಾಳೆ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮಾರ್ಗದರ್ಶನ ಮತ್ತು ಜನರ ಪ್ರೀತಿ,ವಿಶ್ವಾಸ, ಸಹಕಾರದಿಂದ ಗಣೇಶ ಮಂದಿರ ವಾರ್ಡ್ ನಲ್ಲಿ ಬಿಬಿಎಂಪಿ ಸದಸ್ಯೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತು.
ವಿಶ್ವ ಮಹಿಳಾ ದಿನಾಚರಣೆ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.