ಬೆಂಗಳೂರು: ಚಿದಾನಂದ ಅವಧೂತರ ಚರಿತ್ರೆಗಳು ಇಂದಿನ ಕಾಲಘಟ್ಟಕ್ಕೆ ಬಹಳ ಬೇಕಾಗಿದೆ, ಜ್ಞಾನ ಸಿಂಧು ಪುಸ್ತಕ ಇಂದಿರಾ ಯುವ ಸಾಹಿತಿಗಳಿಗೆ ಕಪಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳುವಷ್ಟು ವಿಚಾರಧಾರೆಗಳು ಈ ಪುಸ್ತಕದಲ್ಲಿ ಇವೆಯೆಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಟ್ರಸ್ಟಿ ಶಮಾನಂದ ಪೂಜಾರಿ ಅವರು ತಿಳಿಸಿದರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜ್ಞಾನ ಸಿಂಧು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದವರು, ಜ್ಞಾನ ಸಿಂಧು ಗ್ರಂಥವನ್ನು ಪರಿಚಯ ಮಾಡಿ ಮಾತನಾಡಿ, 800 ಪುಠಗಳ ಬೃಹತ್ ಗ್ರಂಥ, ಎರಡು ಗ್ರಂಥಗಳು ಬೃಹತ್ ಆಗಿವೆ, ಇವೆರಡರಲ್ಲಿ ಚಿದಾನಂದ ಅವಧೂತರ ಚರಿತ್ರೆಗಳು ಬಹಳ ಪ್ರಾಮುಖ್ಯತೆ ಹೊಂದಿದ್ದಾರೆ. ಸಮಸ್ತ ವೇದಾಂತ ಸಾರವನ್ನು ಈ ಗ್ರಂಥದಲ್ಲಿ ಹೇಳಿದ್ದಾರೆ. ಮಾಲಿಂಗ ರಂಗರ ಗ್ರಂಥದಲ್ಲಿ ವೇದಾಂತಗಳನ್ನು ಒಳಗೊಂಡಿವೆ. ಮಂಗಳದೊಂದಿಗೆ ಗ್ರಂಥಗಳನ್ನು ಪ್ರಾರಂಭ ಮಾಡಿದ್ದಾರೆ. ಈ ಗ್ರಂಥದಲ್ಲಿ ಹೇಳುವವರಿಗೆ, ಕೇಳುವವರಿಗೆ, ಸೇರಿದಂತೆ ಎಲ್ಲಾರಿತಿಯಲ್ಲಿಯೂ ಸಹಾ ಮಂಗಳವಾಗಲಿ ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಲಕ್ಷಣವನ್ನು ಹೇಳಿದ್ದಾರೆ. ವಿವೇಕ ಮತ್ತು ವೈರಾಗ್ಯ ಎರಡನ್ನೂ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಸದ್ಗುರುನಾಥ್ ಆದವನು ಗುರುವಾಗಿರಬೇಕು ಅಂದರೆ ಒಳಗೂ, ಹೊರಗೂ ಅಂತರಂಗ, ಬಹಿರಂಗದಲ್ಲಿ ವಿರಕ್ತನಾಗಿರಬೇಕು, ಅಂತವರಿಗೆ ಗುರು ಆಗಿರಬೇಕು. ಸಾಧು, ಯೋಗಿಗಳು, ಕಾವಿಗಳನ್ನ್ನು ಯಾರು ನಂಬಬೇಡಿ, ಐವರು ಗುರುಗಳಲ್ಲ ಎಂದು ಜ್ಞಾನ ಸಿಂಧು ಗ್ರಂಥದಲ್ಲಿ ಹೇಳಿದ್ದಾರೆ. ನಾವು ಬಂದಿರುವುದು ಸಾಧನೆಯ ಆದಿ, ಪ್ರಯತ್ನದ ಆದಿಯಾಗಿದೆ.
ಪುಸ್ತಕದ ಕತೃ ಆದ ಸಂಪಾದಕರಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಮಾತನಾಡಿ,ಪ್ರತಿ ವರ್ಷ ಜೂನ್ 5ರಂದು ಎಲೆಮರೆಕಾಯಿತಂತೆ ದುಡಿದಿರುವ ಸಾಹಿತಿಗಳಿಗೆ ಪ್ರಶಸ್ತಿನ್ನೀಡುವ ಕಾಯಕ ಮಾಡಿಕೊಂಡು ಬರಲಾಗುತ್ತಿದೆ, ಪ್ರತಿಷ್ಠಾನ ಸ್ಥಾಪನೆಯಾಗಿ 10 ವರ್ಷವಾಗಿದೆ. ಗೋವರ್ಧನ ಅವರು ಸಾಕಷ್ಟು ಬರವಣಿಗೆ, ಸಾಹಿತ್ಯ ಸೇರಿದಂತೆ ಅನೇಕ ವಿಚಾರಗಳಲ್ಲಿ ವಿಶೇಷವಾಗಿದೆ ಅಂತಹವರನ್ನು ಗುರುತಿಸುವ ಕೆಲಸ ಮಾಡಲಾಗಿದೆ, ಅದರಲ್ಲಿ ಕರ್ನಾಟಕ ಸರ್ಕಾರ ಇಂತಹವರನ್ನು ಗುರುತಿಸಬೇಕು. ಜ್ಞಾನ ಸಿಂಧು ಗ್ರಂಥ ಸಾಕಷ್ಟು ಹಿಂದೆಮುಂದೆ, ಅಸ್ಪಷ್ಟವಾಗಿತ್ತು, ಅದನ್ನು ಮೊಂಡು ತಿಂಗಳ ಕಾಲ ಸಂಕಲನ ಮಾಡಿ, 6 ಸಾಲಿನಲ್ಲಿರುವ ಷಟ್ಪದಿಯನ್ನು 4 ಸಾಲುಗಳಿಗೆ ಇಳಿಸಿ ಮಾಡಿದ ಕೆಲಸವಾಗಿದೆ. ಒಂದು ಗ್ರಂಥ ಬೇರೆಯಬೇಕಾದರೆ, ಶಾಸ್ತ್ರ, ಅಧ್ಯಯನ,ಭಾಷೆ ಗಳು ಬಹಳ ಮುಖ್ಯವಾಗಿದ್ದವು, ಚಿದಾನಂದ ಅವಧೂತರ ಮೇಲೆ ಹೆಚ್ಚು ಗ್ರಂಥಿಗಳು ಬಂದಿಲ್ಲ, ಮುಂದಿನದಿನಗಳಲ್ಲಿ ಬರಬೇಕು, ಇದು ನನ್ನ 101ನೇ ಕೃತಿಯಾಗಿದೆ. ಈ ಕೃತಿಗೆ ಆರೋಡ ಮಠ,ಸಿದ್ದಾರೂಢ ಮಠಕ್ಕೆ ಹೆಚ್ಚು ಬೇಕಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವೂಡೇ ಪಿ ಕೃಷ್ಣ ಮಾತನಾಡಿ, ನಾಡಿನಲ್ಲಿ ಯಾರಾದರೂ ಬಹುರೂಪಿ ವಿದ್ವಾಂಸರು ಇದ್ದಾರೆ ಎಂದರೆ ಮಲ್ಲೇಪುರಂ ವೆಂಕಟೇಶ್ ಒಬ್ಬರು, ಆಧ್ಯಾತ್ಮಿಕ ಕೃತಿಗಳನ್ನು ರಚಿಸಿದ್ದಾರೆ, ಯೋನಿಷತ್, ವೇದಾಂತದ ಸರವಾಗಿದೆ. ಇದನ್ನು ಓದಬೇಕಾದರೆ ಆದ್ಯಮಿಕ ಚಿಂತನೆ,ಪಾರಾಯಣ ಬೇಕು, ವೈರಾಗ್ಯ ನು ಹೊಂದಿದವರು ಮಾತ್ರ ಓದಲು ಸಾಧ್ಯ. ಗುರುಗಳ ಆಶಯದಲ್ಲಿ ಇಂತಹ ಗ್ರಂಥಗಳನ್ನು ಓದಬೇಕು, ಆಗ ಮಾತ್ರ ಅದಕ್ಕೆ ಒಂದು ಶ್ರೇಷ್ಠ ತೆ ಸಿಗುತ್ತದೆ.
ಮಲ್ಲೇಪುರಂ ಅವರು ಗೋವರ್ಧನ ಅವರಿಗೆ ಸಾಹಿತ್ಯದಲ್ಲಿ ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಮಲ್ಲೇಪುರಂ ಅವರು ನನ್ನ ಓದಿಗೆ ಅವರ ಗ್ರಂಥಿಗಳು ಸಾಕಷ್ಟು ಸಹಾಯವಾಗಿದೆ. ಅವರ ಹುಟ್ಟುಹಬ್ಬದಂದು ಅವರ ಗ್ರಂಥಗಳನ್ನು ಲೋಕಾರ್ಪಣೆ ಮಾಡುವ ಕೆಲಸವನ್ನು ಪೋತೇ ಅವರು ಮಾಡುತ್ತಿದ್ದಾರೆ. ದೇಹಕ್ಕೆ ಯಾವುದೆ ಹೊನ ವಾದರೆ ಅವರೆತು ಅವರ ಮನಸ್ಸಿಗೆ ಮಾತ್ರ ಯಾವುದೇ ಅಡಚಣೆ ಆಗಿಲ್ಲ, ಕಳೆದ 5 ತಿಂಗಳಿಂದ ಶ್ರಮವಹಿಸಿ ಗ್ರಂಥ ಸಂಪಾದಿಸಿದ್ದಾರೆ.
ಶಮಾನಂದ ಪೂಜಾರಿ, ಸಾಹಿತಿ ಪ್ರಕಾಶ್ ಕಂಬತ್ತಲ್ಲಿ, ಪ್ರತಿಷ್ಠಾನದ ಮುಖ್ಯಸ್ಥರ ಹೆಚ್ ಡಿ ಪೋತೆ, ಪ್ರಶಸ್ತಿ ಪುರಸ್ಕೃತರು ಡಾ.ಎಸ್.ಗೋವರ್ಧನ್, ಪುಸ್ತಕ ಬಹುಮಾನ ಡಾ.ಸಿ.ಚಂದ್ರಪ್ಪ,ಮಾಜಿ ಶಾಸಕ ಬಿಆರ್ ಪಾಟೀಲ್ ,ಬಸವಲಿಂಗರಾಜಯ್ಯ,ವಾಸದೇವ್, ಪ್ರೊ.ಗಿರೀಶ್ ಚಂದ್ರ ಸೇರಿದಂತೆ ಇತರರು ಇದೆ ಉಪಸ್ಥಿತರಿದ್ದರು.