ಬೆಂಗಳೂರು: 2024ರ IFM ಮಿಸ್ಟರ್ ಮತ್ತು ಮಿಸ್ ಇಂಡಿಯಾ ಸೂಪರ್ ಮಾಡೆಲ್ ಸೌಂದರ್ಯ ಸ್ಪರ್ಧೆಯನ್ನು ಇಂಡಿಯನ್ ಫಿಲ್ಮ್ ಮೇಕರ್ಸ್ ಸಂಸ್ಥೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು.
ಹೊಸ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸುವ ಹಿನ್ನೆಲೆ ಅದಕ್ಕಾಗಿಯೇ ವಿಶೇಷ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಕರ್ನಾಟಕ, ತಮಿಳ್ನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ನೇಪಾಳ ಸೇರಿದಂತೆ ದಕ್ಷಿಣ ಭಾರತದ ರೂಪದರ್ಶಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರತಿಯೊಬ್ಬರ ವಿಶೇಷ ಪ್ರತಿಭೆಯನ್ನು ಗುರುತಿಸಿದರು.
ಸೌಂದರ್ಯ ಸ್ಪರ್ಧೆಯನ್ನು ಐಎಫ್ ಎಂನ ಸಂಸ್ಥಾಪಕರಾದ ಜೆಎನ್ ರವಿ ಆಯೋಜನೆ ಮಾಡಿದ್ದರು, ಸಿಡಿ ರಮೇಶ್ ಅವರು ಕಾರ್ಯಕ್ರಮದ ತರಬೇತುದಾರ ಹಾಗೂ ಕೊರಿಯೋಗ್ರಾಫರ್ ಆಗಿದ್ದರು. ನಟ ಆಧಿ ಲೋಕೇಶ್, ಎಂಎಸ್ ಐಎಲ್ ನ ಮಾರುಕಟ್ಟೆ ಮುಖ್ಯಸ್ಥ ರಾಮಚಂದ್ರಪ್ಪ, ಸೇರಿದಂತೆ, ಹೆಸರಾಂತ ಮಾಡೆಲ್ ಗಳು ಭಾಗವಹಿಸಿದ್ದರು. ಸೌಂದರ್ಯ ಸ್ಪರ್ಧೆಯಲ್ಲಿ ಅನುಭವ ಇರುವ 3 ಜನ ತೀರ್ಪುಗಾರರನ್ನು ನೇಮಿಸಲಾಗಿತ್ತು.
IFM ಸಂಸ್ಥೆ ಪ್ರತಿ ವರ್ಷ ಒಂದೊಂದು ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ, ಸೌಂದರ್ಯ ಸ್ಪರ್ಧೆಯಲ್ಲಿ ಹಲವು ಸುತ್ತುಗಳು ಸ್ಪರ್ಧೆ ನಡೆದವು, ಲಲನೆಯರು ರ್ಯಾಂಪ್ ಮೇಲೆ ವೈಯಾರದ ಹೆಜ್ಜೆ ಹಾಕಿ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು, ಅಂತಿಮವಾಗಿ ಮಹಿಳಾ ವಿಭಾಗದಲ್ಲಿ ಇಂಡಿಯಾ ಸೂಪರ್ ಮಾಡೆಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ಮಯಿ ಜಯಗಳಿಸಿದ್ದಾರೆ ಅವರಿಗೆ ಟ್ರೋಫಿ,ಕಿರೀಟ ನೀಡಲಾಯಿತು, ಮೊದಲನೇ ರನ್ನರ್ ಆಪ್ ಆಗಿ ಹವಿಷ್ಯ ಕೊಳ್ಳಿ, 2ನೇ ರನ್ನರ್ ಆಫ್ ಆಗಿ ಅಷ್ಲಿ ಎಲಿಜಬೆತ್, ಪ್ರಿಷ ಅವರು 3ನೇ ಬಹುಮಾನಕ್ಕೆ ತೃಪ್ತಿಪಟ್ಟರು.