ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ಜಿಲ್ಲಾ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗು ಜಿಲ್ಲಾ ಚುನಾವಣೆ ಅಧಿಕಾರಿಗಳಾದ. ಬಿ.ಎಸ್.ಅರುಣ್ ಮತ್ತು ಜಿಲ್ಲಾ ಉಪ ಚುನಾವಣಾ ಅಧಿಕಾರಿಗಳಾದ ದೀಪಾಕ್ ಮಾಯಸಂದ್ರ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ . ಎಂ ಕೃಷ್ಣಪ್ಪ ಅವರು, ಚಿಕ್ಕಪೇಟೆ ವಿಧಾನಸಭೆ ಶಾಸಕರಾದ ಶ್ರೀ. ಉದಯ್ ಗರುಡಾಚರ್ ಅವರು, .ಉಮೇಶ್ ಶೆಟ್ಟಿ ಅವರು, . ರವೀಂದ್ರ ಅವರು, ಶ್ರೀಧರ್ ರೆಡ್ಡಿ ಅವರು ಹಾಗು ಜಿಲ್ಲೆಯ ಕೋರ್ ಕಮಿಟಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ . ಸಿ. ಕೆ. ರಾಮಮೂರ್ತಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಘೋಷಣೆ ಮಾಡಲಾಯಿತು.
ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರತಿನಿಧಿಯಾಗಿ ಶ್ರೀ. ಚಿನ್ನಗಿರಯಪ್ಪ ಅವರನ್ನು, ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಗೆ ಬರುವ 8 ಮಂಡಲದ ಅಧ್ಯಕ್ಷರ ಹೆಸರುಗಳನ್ನು ಸಹ ಘೋಷಿಸಲಾಯಿತು.