ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ರಾಜ್ಯದಲ್ಲಿನ ಕೆಪಿಎಸ್ಸಿ ಪರೀಕ್ಷೆ ಬರೆದ ಹಾಗು ಮುಂದೆ ಬರೆಯುವ ವಿದ್ಯಾರ್ಥಿಗಳ ಭಾಗವಹಿಸಿದ್ದರು, ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಕರೆಸಿಕೊಂಡು ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಮಾತನಾಡಿದ್ದಾರೆ. ನನಗೆ ಎರಡು ದಿನ ಕಾಲಾವಕಾಶ ಕೊಡಿ ಕೆಪಿಎಸ್ಸಿ ನಮ್ಮ ರಾಜ್ಯದ ಸುಪರ್ದಿಗೆ ಬರುವುದಿಲ್ಲ, ಹೀಗಾಗಿ ಸಂಬಂಧಪಟ್ಟವರಿಗೆ ತಿಳಿಸಿ ಸಮಸ್ಯೆ ಶೀಘ್ರ ಬಗೆಹರಿಸುವ ಬಗ್ಗೆ ಸೂಚನೆ ಮಾಡುತ್ತೇನೆ.
ಹೀಗಾಗಿ ಅವರ ಆರೋಗ್ಯದಲ್ಲಿ ಸರಿಯಿಲ್ಲದ ಕಾರಣ ವೀಲ್ ಚೇರ್ ನಲ್ಲಿ ಬಂದು ನಮ್ಮ ಮನವಿಯನ್ನು ಸ್ವೀಕರಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಸಮಾವೇಶಕ್ಕೆ ಬಂದು ಅಲ್ಲಿ ನಡೆದ ವಿಚಾರಗಳನ್ನು ಸಭೆಯಲ್ಲಿ ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರು ಲಕ್ಷಾಂತರ ಜನರ ವಿಚಾರವಾಗಿ ಅಸಡ್ಡೆ ಮಾಡಿದರೆ ನಾನು ಮಾತ್ರ ವಿದ್ಯಾರ್ಥಿಗಳ ಅಳಲನ್ನು ಹೊರೆಸುವ ತನಕ ಹೋರಾಟ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನನ್ನ ಕಚೇರಿಗೆ ಕಷ್ಟ ಎಂದು ಹೇಳಿಕೊಂಡು ಯಾರು ಬರುತ್ತಾರೋ ಅವರಿಗೆ ಸಬೂಬು ಹೇಳಿ ಕಳಿಸುವುದಿಲ್ಲ, ಸಹಾಯ ಮಾಡಿ ಕಲಿಸುತ್ತೇನೆ, ಇಂತಹ ಸನ್ನಿವೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅಷ್ಟು ಸುಲಭವಾಗಿ ಬಿಡಲ್ಲ ಎಂದರು.
ಕನ್ನಡ ನೆಲದ ಋಣವನ್ನು ತೀರಿಸೋಣ, ಮುಖ್ಯಮಂತ್ರಿಗಳ 2 ದಿನಗಳ ಗಡುವನ್ನ ತೆಗೆದುಕೊಂಡಿದ್ದರೂ ಕಾದು ನೋಡೋಣ ನಂತ್ರ ಹೋರಾಟದ ಬಗ್ಗೆ ತೀರ್ಮಾನ ಮಾಡೋಣ ಎಂದರು. KAS ಪರೀಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ಭಾಷೆಯ ಭಾಷಾಂತರ ಮಾಡುವ ವಿಚಾರದಲ್ಲಿ ಪ್ರಶ್ನೆಗಳು ಎಡವಟ್ಟಾಗಿದೆ, ಇದು ನಿನ್ನೆ ಮೊನ್ನೆಯ ವಿಚಾರವಲ್ಲ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ, ಅದಕ್ಕೆ ಪೂರ್ಣ ವಿರಾಮ ಹಾಕೋಣ ಎಂದರು. ಹೀಗಾಗಿ ಪರೀಕ್ಷೆಯನ್ನು ಮುಂದೋಡಬೇಕು ಹಾಗು ಪರೀಕ್ಷೆ ಫಲಿತಾಂಶ ತಡೆಹಿಡಿಯಬೇಕು ಎಂದು ತಿಳಿಸಿದರು.
ಬೃಹತ್ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಹೆಚ್ಚು ಕೆಪಿಸಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಹಾಜರಿದ್ದರು. ಅಲ್ಲದೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.