ಬೆಂಗಳೂರು: ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣೆ ಕಾರ್ಯಕ್ರಮವನ್ನು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 7ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಬಳಗದ ರಾಜ್ಯಾಧ್ಯಕ್ಷರಾದ ಜಯಕಾಂತ್ ಚಾಲುಕ್ಯ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಂವಿಧಾನ ಬಳಗ ಹಾಗೂ ಒನಕೆ ಒಬ್ಬವ ವೇದಿಕೆ ವತಿಯಿಂದ ಮರೆಯಲಾಗದ ದಲಿತ ಲೋಕದ ದ್ರುವ ತಾರೆಗಳಾದ ಧ್ರುವನಾರಾಯಣ್ ,ಶ್ರೀನಿವಾಸ್ ಪ್ರಸಾದ್, ಶಿವರಾಂ ಸಿದ್ದಲಿಂಗಯ್ಯ ಸೇರದಂತೆ ಇನ್ನು ಅನೇಕ ಚಲವಾದಿ ಚೇತನಗಳ ಚಿರಸ್ಮರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮರೆಯಾದ ಛಲವಾದಿ ಚೇತನಗಳ ಬಗ್ಗೆ ಗುಣಗಾನ, ಅವರು ಕೆಲಸ ಕಾರ್ಯಗಳು ಬಗ್ಗೆ ಮಾಡಿರುವ ಸಾಧನೆಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಚಲವಾದಿ ಚೇತನರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಲವಾದಿ ಸಮುದಾಯದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದಾರೆ, ಗ್ರೂಮ್ ಸಚಿವ ಡಾಕ್ಟರ್ ಜಿ ಪರಮೇಶ್ವರ್,ಅಂಬೇಡ್ಕರ್ ಅವರ ಮೊಮ್ಮಗರಾದ ಆನಂದ್ ರಾಜ್ ಅಂಬೇಡ್ಕರ್ ಭಾಗವಹಿಸಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಸಮುದಾಯದ ಚಿಂತಕರು ಸಮುದಾಯ ಪ್ರೇಮಿಗಳು ಬಾಬಾ ಸಾಹೇಬರ ಅನುಯಾಯಿಗಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂವಿಧಾನ ಬಳಗದ ಉಪಾಧ್ಯಕ್ಷರಾದ ಮೈಕೋ ನಾಗರಾಜ್, ಖಜಾಂಚಿಯಾದ ಕೆಎಚ್ ವಿಜಯ್, ನಿರ್ದೇಶಕರಾದ ಮಂಡ್ಯ ಡಿ ಕೆಂಪರಾಜು ಸಹಕಾರಿದರ್ಶಿಯಾದ ನಾಗು ಸೇರಿದಂತೆ ಇತರರು ಉಪಸ್ಥಿತರಿದ್ದರು.