ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ನ ಗ್ಯಾರಂಟಿ ಗಳಿಂದ ರಾಜ್ಯದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ವಿವಾದಪ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿನೋತನವಾಗಿ ಧರಣಿ ನಡೆಸಲಾಯಿತು.
ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಹಾಗೂ ಮಹಿಳಾ ಕಾರ್ಯಕರ್ತರು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾವಚಿತ್ರಕ್ಕೆ ತರಕೆ ಸೇವೆ ಮಾಡುವ ಮೂಲಕ ವಿನೂತನವಾಗಿ ಧರಣಿಯನ್ನು ಮಾಡಿದರು.
ಈ ವೇಳೆ ಮನೋಹರ್ ರವರು ಮಾತನಾಡಿ, ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಗೆ ಸಹಭಾಗಿತ್ವ ವಹಿಸಿಕೊಂಡಾಗಿನಿಂದಲೂ ಸಹ ಒಂದಲ್ಲ ಒಂದು ರೀತಿಯಲ್ಲಿ ಹೇಳಿಕೆಗಳನ್ನು ಮಹಿಳೆಯರ ವಿರುದ್ಧ ಕೊಡುತ್ತಲೇ ಬಂದಿದ್ದಾರೆ, ಮಹಿಳೆಯರ ಮೇಲೆ ಇರುವ ಗೌರವ ಎತ್ತಿತೋರಿಸುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.
ಜೆಡಿಎಸ್ ಹಾಗೂ ಬಿಜೆಪಿಯಾವರು ಮಹಿಳಾ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ, ಮಹಿಳೆಯರ ಮೇಲೆ ಇರುವ ವ್ಯಕ್ತಿತ್ವವನ್ನು ಇಲ್ಲಿ ಎತ್ತಿ ತೋರಿಸ್ತದೆ ಎಂದು ಹೆಸರು. ಕುಮಾರಸ್ವಾಮಿಯವರು ಬೇಶರಥಾಗಿ ಮಹಿಳೆಯರ ಬಗ್ಗೆ ಇಂದೆನೆ ಮಾಡಿರುವ ವಿಚಾರವಾಗಿ ಕ್ಷಮೆ ಯಾಚಿಸಬೇಕೆಂದು ಧರಣಿ ವೇಳೆ ಒತ್ತಾಯವನ್ನು ಮಾಡಿದರು ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯವನ್ನು ಸಹ ಮಾಡಿದರು.
ಎಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ತಲ್ಲಣವನ್ನು ಉಂಟು ಮಾಡಿದ್ದು, ಮಹಿಳೆಯರು ಬೀದಿಗೆ ಬಂದು ಪ್ರತಿಪಡಿಸುವಂತೆ ಮಾಡಿದ್ದಾರೆ, ಸಾಕಷ್ಟು ಪರ ವಿರೋಧಗಳು ಚರ್ಚೆಯಾಗುತ್ತಿದ್ದು, ಏಳು ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.